ಹರಪನಹಳ್ಳಿ: ‘ಮದ್ಯವ್ಯಸನ ಕೇವಲ ವ್ಯಕ್ತಿಗೆ ಮಾತ್ರವಲ್ಲ ಇಡೀ ಕುಟುಂಬ ಮತ್ತು ಸಮಾಜಕ್ಕೂ ಹಾನಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಮತ್ತು ಅನೇಕ ಕುಟುಂಬಗಳು ಬೀದಿಗೆ ಬರಲು ಈ ಕುಡಿತದ ಚಟವೇ ಮುಖ್ಯ ಕಾರಣ’ ಎಂದು ಹರಪನಹಳ್ಳಿ ಡಿವೈಎಸ್ಪಿ ಸಂತೋಷ್ ಚೌವ್ಹಾಣ್ ತೀವ್ರ ಕಳಕಳಿ ವ್ಯಕ್ತಪಡಿಸಿದರು.

ನಗರಕ್ಕೆ ಸಮೀಪದ ತಾಲ್ಲೂಕಿನ ದೇವರ ತಿಮ್ಮಾಲಪುರ ಗ್ರಾಮದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ 2060ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳು ಮೊಬೈಲ್ ಚಟಕ್ಕೆ ಬೀಳುತ್ತಿರುವುದು ಆತಂಕಕಾರಿ. ಪೋಷಕರು ಮಕ್ಕಳನ್ನು ಮೊಬೈಲ್ನಿಂದ ದೂರವಿಟ್ಟು, ಅವರ ದಿನಚರಿಯ ಮೇಲೆ ನಿಗಾ ಇಡಬೇಕು. ಕಳೆದುಹೋದ ಕೌಟುಂಬಿಕ ನೆಮ್ಮದಿಯನ್ನು ಮರಳಿ ತರಲು ಇಂತಹ ಮದ್ಯವರ್ಜನ ಶಿಬಿರಗಳು ದಾರಿದೀಪವಾಗಲಿವೆ’ ಎಂದರು.

ಯೋಗ ಶಿಕ್ಷಕಿ ಕುಸುಮ ಜಗದೀಶ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಗುಂಡಗತ್ತಿ ಮಂಜುನಾಥ ಮಾತನಾಡಿದರು. ಸಮಿತಿ ಅಧ್ಯಕ್ಷ ಸಾಸ್ವಿಹಳ್ಳಿ ಎಂ.ಪಿ. ಹಾಲೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖಂಡರಾದ ಗುಡಿಹಳ್ಳಿ ಹಾಲೇಶ್, ಪ್ರವೀಣ್ ಕುಮಾರ್, ಕೆ.ಎನ್. ಸಿದ್ದೇಶ್ ಬೂದಿಹಾಳ್, ಮಾದಪುರ ನೀಲಪ್ಪ, ಯೋಜನಾಧಿಕಾರಿ ಗಣಪತಿ ಭಟ್, ಗುಂಡಗತ್ತಿ ಸಿದ್ದೇಶ್, ಅರುಣ್, ಶಾರದಾ, ಎಸ್.ಪಿ. ಲಿಂಬ್ಯಾನಾಯ್ಕ್, ಮಮತಾ, ಶೈಲಾಜಾ, ಬಿ. ನಾಗರಾಜ್, ಕುಮಾರ ಟಿ., ರಂಜಿತಾ ಎನ್., ರುದ್ರಪ್ಪ ಹೂಗಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-25-939798318

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.