ಹರಪನಹಳ್ಳಿ: ‘ಪಕ್ಷಿ ಸಂಕುಲ ಸಂರಕ್ಷಿಸಿದರೆ ಮಾತ್ರ ಪರಿಸರ ಉಳಿಯಲು, ಸಮೃದ್ದಗೊಳಿಸಲು ಸಾಧ್ಯ’ ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ತಿಳಿಸಿದರು.

ನಗರದ ಸಮತಾ ಉದ್ಯಾನದಲ್ಲಿ ಶನಿವಾರ ಜ್ಯೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಲುಮ್ನಿ ಕ್ಲಬ್ (ಜೆಎಸಿ) ಆಯೋಜಿಸಿದ್ದ ಪಕ್ಷಿಗಳಿಗೆ ನೀರು ಕಲ್ಪಿಸುವ ಮಡಕೆ ಅಳವಡಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜೆಸಿಐ ಸಂಸ್ಥೆಯಿಂದ ಮರ–ಗಿಡಗಳಲ್ಲಿ ಮಡಕೆ ಕಟ್ಟಿ ಪಕ್ಷಿಗಳಿಗೆ ನೀರುಣಿಸುವ ಕಾಯಕ ಮಾದರಿಯಾಗಿದೆ. ಬೇಸಿಗೆ ಮುಗಿಯುವ ತನಕ ಮಡಕೆಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲು ಕಾಳಜಿವಹಿಸಲು ಸಲಹೆ ನೀಡಿದರು.

ಜೆಎಸಿ ತಾಲ್ಲೂಕು ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಮಾತನಾಡಿ, ‘ಜೆಸಿಐ, ಜೆಎಸಿ ಸಂಸ್ಥೆಯು ಒಂದು ಪಾತ್ರೆ ನೀರು – ನೂರಾರು ಪಕ್ಷಿಗಳಿಗೆ ನೆರವು ಘೋಷಣೆಯೊಂದಿಗೆ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಚಿಕ್ಕ ಪ್ರಯತ್ನ ಮಾಡುತ್ತಿದೆ. 10 ದಿನ ನಡೆಯುವ ಈ ಅಭಿಯಾನದಲ್ಲಿ ತಾಲ್ಲೂಕಿನ ಜನತೆ ಸ್ವಯಂ ಪ್ರೇರಿತರಾಗಿ ಪಾಲ್ಗೊಂಡು ತಮ್ಮ ಮನೆಯ ಸುತ್ತಮುತ್ತ, ಛಾವಣಿ ಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡ ಬಹುದು. ಇದನ್ನು ಮಾಡುವ ಅತ್ಯುತ್ತಮ ಪಕ್ಷಿ ಪ್ರೇಮಿಗಳಿಗೆ ಬಹುಮಾನ ಕೊಡಲಾಗುವುದು’ ಎಂದರು.

ಬಿ.ಎಸ್.ರವಿಶಂಕರ, ವಲಯ ಮಂಡಳಿ ಸಂಸತ್ ಸದಸ್ಯ ವಿಶ್ವನಾಥ, ಪ್ರಸನ್ನಕುಮಾರ ಜೈನ್, ರವೀಂದ್ರ ಅಧಿಕಾರ, ಇರ್ಷಾದ್ ಭಾಷ, ಪ್ರಭಾಕರ, ಶಿವಕುಮಾರ, ಹುಲಿರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-25-1318591195

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.