ಹರಪನಹಳ್ಳಿ: ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಣಿ ಬೈಕ್ ಕಳವು ಪ್ರಕರಣಗಳಲ್ಲಿ ಮೂವರು ಆರೋಪಿಗಳನ್ನು ಅರಸೀಕೆರೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ತಾಲ್ಲೂಕಿನ ಅರಸೀಕೆರೆ ಗ್ರಾಮದ ಅಲ್ತಾಫ್, ದಾವಣಗೆರೆ ಜಿಲ್ಲೆ ಬಾನುವಳ್ಳಿಯ ಜಾಬೀರ್, ಶಿಂಗ್ರಿಹಳ್ಳಿಯ ಶಾಹೀದ್ ಅಹಮ್ಮದ್ ಬಂಧಿತ ಆರೋಪಿಗಳು. ಇವರಿಂದ ₹6.65 ಲಕ್ಷ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ಸುದ್ದಿಗಾರಿಗೆ ತಿಳಿಸಿದರು.

‘ತಾಲ್ಲೂಕಿನ ಯು. ಬೇವಿನಹಳ್ಳಿ ದೊಡ್ಡ ತಾಂಡಾದ ಲೋಕೇಶ್ ರಾಥೋಡ್ ಎಂಬುವವರ ಫೆಬ್ರುವರಿಯಲ್ಲಿ, ಮಾದಿಹಳ್ಳಿಯ ಸಲೀಂ ಸಾಬ್ ಅವರ ಬೈಕ್ ಹಾಗೂ ₹2,800 ನಗದು ಮಾರ್ಚ್ 31ರಂದು ಕಳವಾಗಿತ್ತು. ಎರಡು ಪ್ರತ್ಯೇಕ ಪ್ರಕರಣಗಳು ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು. ಪೊಲೀಸರ ತಂಡಗಳನ್ನು ರಚಿಸಿ, ತನಿಖೆ ಚುರುಕುಗೊಳಿಸಿದಾಗ ಆರೋಪಿಗಳು ಸೆರೆಯಾಗಿದ್ದಾರೆ’ ಎಂದರು.

ಡಿವೈಎಸ್ಪಿ ಸಂತೋಷ್ ಚೌಹಾಣ್, ಸಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ವಿಜಯ್ ಕೃಷ್ಣ, ಸಿಬ್ಬಂದಿ ಹರೀಶ್ ದೇವರಟ್ಟಿ, ಕೆ. ಗುರುರಾಜ್, ದಾದಾಪೀರ್, ಅಜ್ಜಪ್ಪ, ಹಸನ್ ಸಾಬ್, ವಿಷ್ಣುನಾಯ್ಕ್, ಗುರ್ಯಾನಾಯ್ಕ್, ಕೂಲಹಳ್ಳಿ ಎಂ. ಕೊಟ್ರೇಶ್ ಮತ್ತು ರವಿನಾಯ್ಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-25-385334672

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.