ಹರಪನಹಳ್ಳಿ: ರೈತರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆಯ ಧೋರಣೆ ವಿರೋಧಿಸಿ ತಾಲ್ಲೂಕಿನ ಅಲಗಿಲವಾಡ ಕ್ರಾಸ್ನಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಕಂಚಿಕೆರೆ ತಾಂಡ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಕ್ರಾಸ್ನಲ್ಲಿ ಕುಟುಂಬ ಸಮೇತರಾಗಿ ಆಗಮಿಸಿದ್ದ ನೂರಾರು ರೈತರು ಉಳುಮೆ ಭೂಮಿಯಲ್ಲಿ ಅರಣ್ಯ ಗಡಿ ಗುರುತಿಸುವುದನ್ನು ವಿರೋಧಿಸಿ, ಉಳುಮೆ ಮಾಡಿರುವ ನಮ್ಮ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಪಕ್ಕದಲ್ಲಿ ನಿರ್ಮಿಸಿದ್ದ ಶಾಮಿಯಾನದಲ್ಲಿ ಹಸಿರು ಶಾಲು ಪ್ರದರ್ಶಿಸಿ ಸರ್ಕಾರವ ವಿರುದ್ದ ದಿಕ್ಕಾರ ಕೂಗಿದರು. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವ ತನಕ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಶಿವಮೊಗ್ಗ-ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ಸಂಚರಿಸಬೇಕಿದ್ದ ಸಾರಿಗೆ ಬಸ್ ಹಾಗೂ ಬೃಹತ್ ವಾಹನಗಳನ್ನು ಅನ್ಯ ಮಾರ್ಗದ ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು. ಮದ್ಯಾಹ್ನದ ನಂತರ ಯತಾ ಸ್ಥಿತಿ ಸಂಚರಿಸಿದವು. ಬೆಳಿಗ್ಗೆ 8ಕ್ಕೆ ರೈತರು ಜಮಾಯಿಸಿದ್ದರಿಂದ ಪೊಲೀಸ್ ಇಲಾಖೆ ಮುಂಜಾಗ್ರತ ಹೆಚ್ಚಿನ ಬಂದೋಬಸ್ತ್ ಒದಗಿಸಿತ್ತು.

ಜಂಟಿ ಸಮೀಕ್ಷೆ ಆಗುವ ತನಕ ಅರಣ್ಯ ಅಧಿಕಾರಿಗಳು ರೈತರ ಹೊಲಗಳಿಗೆ ಬಾರದಂತೆ ಎಚ್ಚರಿಕೆ ನೀಡಿದ ಪ್ರತಿಭಟನಾಕಾರರು ಮದ್ಯಾಹ್ನ 12.45ಕ್ಕೆ ಮುಕ್ತಾಯಗೊಳಿಸಿದರು. ಸ್ಥಳದಲ್ಲೆ ಹೋರಾಟಗಾರರಿಗೆ ಪಾನಕ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಮಾತನಾಡಿ, 130 ವರ್ಷದ ಹಿಂದೆ ಅಲಗಿಲವಾಡ ಅರಣ್ಯ ಪ್ರದೇಶ ಗುರುತಿಸಿ ಅಧಿಸೂಚಿಸಲಾಗಿದೆ. ಈ ಪೈಕಿ 500 ಎಕರೆ ಭೂಮಿಯನ್ನು ಕೃಷಿಗಾಗಿ 1965ರಲ್ಲಿ ಮೀಸಲಿಡಲಾಗಿದೆ. ಆ ಪ್ರದೇಶ ಬಿಟ್ಟು ಅರಣ್ಯ ಜಾಗ ಮಾತ್ರ ತೆರವು ಮಾಡುತ್ತಿದ್ದೇವೆ. ಸರ್ಕಾರದ ಆದೇಶದನ್ವಯ ಅರಣ್ಯ ಭೂಮಿ ರಕ್ಷಣೆಗೆ ಇಲಾಖೆ ಮುಂದಾಗಿದೆ, ಇದಕ್ಕೆ ಜನರು ಸಹಕರಿಸಬೇಕು. ಈ ಭಾಗದಲ್ಲಿ ಉಳುಮೆ ಮಾಡಿರುವ ರೈತರು ಸಲ್ಲಿಸಿರುವ ಮನವಿಯನ್ನು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದರು.

ತೆರವು ಕಾರ್ಯಾಚರಣೆ ವೇಳೆ ರೈತರ ಅಡಿಕೆ ಬೆಳೆ ನಾಶಪಡಿಸಿಲ್ಲ, ಅದರ ಬದಲಾಗಿ ಅರಣ್ಯ ಭೂಮಿಯ ಗಡಿಯ ಸ್ಥಳದಲ್ಲಿ ಗುಂಡಿ ಅಗೆದು ಗುರುತಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ನೇತೃತ್ವವಹಿಸಿದ್ದ ಕೋಡಿಹಳ್ಳಿ ಚಂದ್ರಶೇಖರ ಮಾತನಾಡಿ, ಕಂಚಿಕೇರೆ ತಾಂಡದ ರೈತರು ಉಳುಮೆ ಮಾಡಿಕೊಂಡಿರುವ ಭೂಮಿ ಬಗ್ಗೆ 1920ರಿಂದ ದಾಖಲೆ ಇಟ್ಟುಕೊಂಡಿದ್ದಾರೆ. ಇಂತಹ ಪ್ರದೇಶವನ್ನು ತಮ್ಮದು ಎಂದು ಹೇಳಿ ಇಲಾಖೆ ತಮ್ಮ ವಶಕ್ಕೆ ಪಡೆಯುವ ಕ್ರಮ ಸರಿಯಲ್ಲ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿ ಸಮೀಕ್ಷೆ ಮಾಡಬೇಕು, ಅಲ್ಲಿಯವರೆಗೂ ರೈತರ ಕೃಷಿಗೆ ತೊಂದರೆ ಕೊಡಬೇಡಿ ಎಂದು ಆಗ್ರಹಿಸಿದರು.

ರೈತರ ಹೋರಾಟ ಬೆಂಬಲಿಸಿದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪ, ರೈತ ಮುಖಂಡರಾದ ಶಿರಗಾನಹಳ್ಳಿ ವಿಶ್ವನಾಥ, ಎಚ್.ಎಂ.ಮಹೇಶ್ವರಸ್ವಾಮಿ, ತೆಲಿಗಿ ಸುರೇಶಪ್ಪ, ರಾಜ್ಯ ಕಾರ್ಯಾಧ್ಯಕ್ಷ ಬಿ.ವಿ.ಗೌಡ, ದಾವಣಗೆರೆ ಜಿಲ್ಲಾ ಘಟಕದ ಅದ್ಯಕ್ಷ ಶೇಖರನಾಯ್ಕ, ರೈತರಾದ ರಾಜುನಾಯ್ಕ, ವೆಂಕಟೇಶನಾಯ್ಕ, ಬೋಜ್ಯನಾಯ್ಕ, ಶೆಟ್ಟಿ ನಾಯ್ಕ ಇತರರಿದ್ದರು. ಎಸ್ಪಿ ಎಸ್.ಜಾಹ್ನವಿ, ಹೆಚ್ಚುವರಿ ಎಸ್ಪಿ ಬಸವರಾಜ್, ಉಪವಿಭಾಗಾಧಿಕಾರಿ ಸುರೇಶ್ ಕುಮಾರ, ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು, ಡಿವೈಎಸ್ಪಿ ಸಂತೋಷ ಚೌವ್ಹಾಣ್, ವಲಯ ಅರಣ್ಯಾಧಿಕಾರಿ ರಾಜು ಗೋವಂದ್ಕರ್ ಸ್ಥಳದಲ್ಲೆ ಮೊಕ್ಕಾಂ ಹೂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-25-2139902894

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.