ಹರಪನಹಳ್ಳಿ: ಜಮೀನಿನಲ್ಲಿ ವಿದ್ಯುತ್ ಪ್ರಸರಣ ಮಾರ್ಗಗಳ 400 ಕೆವಿ ವಿದ್ಯುತ್ ಟವರ್ (ಗೋಪುರ) ನಿರ್ಮಿಸಲು ಮುಂದಾಗಿರುವ ಸರ್ಕಾರದ ಯೋಜನೆಗೆ ಹರಪನಹಳ್ಳಿ ಹಾಗೂ ಹಡಗಲಿ ಭಾಗದ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಲವು ರೈತರು, ಭೂಮಿಯನ್ನೇ ನಂಬಿ ಬದುಕುತ್ತಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರ ಜೀವನ ಈ ಯೋಜನೆಯಿಂದ ದುಸ್ತರವಾಗಲಿದೆ ಎಂದು ತಮ್ಮ ಅಳಲು ತೋಡಿಕೊಂಡರು.

ಮೈದೂರು ಗ್ರಾಮದ ರೈತ ಶ್ರೀನಿವಾಸ ಗೌಡ ಮಾತನಾಡಿ, ಹೊಲಗಳಲ್ಲಿ ಹೈ-ಟೆನ್ಷನ್ ವಿದ್ಯುತ್ ಲೈನ್ಗಳು ಹಾದುಹೋಗುವುದರಿಂದ ವಿದ್ಯುತ್ ಗೋಪುರದ ಕೆಳಗೆ ಯಾವುದೇ ರೀತಿಯ ಕೃಷಿ ಚಟುವಟಿಕೆ ಮಾಡಲು ಸಾಧ್ಯವಾಗುವುದಿಲ್ಲ. ಹೈ-ಲೈನ್ ಕೆಳಗೆ ಕೆಲಸ ಮಾಡಲು ತೀವ್ರ ಅಪಾಯ ಇರುವುದರಿಂದ ಜಮೀನುಗಳಿಗೆ ಬರಲು ಕೂಲಿ ಕಾರ್ಮಿಕರು ಹಿಂಜರಿಯುತ್ತಿದ್ದಾರೆ. ಇದು ರೈತರ ಹಾಗೂ ಕಾರ್ಮಿಕರ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರಿದೆ ಎಂದರು.

ಪ್ರಗತಿಪರ ರೈತ ಪ್ರದೀಪ ಮಾತನಾಡಿ, ‘ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ನಮ್ಮ 6 ಎಕರೆ ಜಮೀನಿನಲ್ಲಿ ಗೋಪುರ ನಿರ್ಮಿಸಲು ಮುಂದಾಗಿದ್ದಾರೆ. ಅಲ್ಲಿ ಕೃಷಿ ಹಾಗೂ ಕೃಷಿಯೇತರ ಚಟುವಟಿಕೆ ನಡೆಸಿ, ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ದೊಡ್ಡ ಯೋಜನೆ ಹೊಂದಿದ್ದೆವು. ಈಗ ಈ ಗೋಪುರದಿಂದ ನಮ್ಮ ಕನಸು ಕನಸಾಗಿಯೇ ಉಳಿಯುವಂತಾಗಿದೆ. ಸರ್ಕಾರ ನಮಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲವೇ ವಾರ್ಷಿಕ ಗೌರವಧನ ನೀಡುವ ಯೋಜನೆ ತರಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

ಮೈದೂರು ಗ್ರಾಮದ ಚನ್ನಬಸವನಗೌಡ, ನಾಗರಾಜ್, ಕೆಂಚಪ್ಪ, ನಿಂಗಪ್ಪ, ,ತಳಕಲ್ಲು ಗ್ರಾಮದ ಎಂ. ಚನ್ನಬಸನಗೌಡ, ಕರೆಗೌಡ, ಶಿವಕುಮಾರ, ಉತ್ತಂಗಿ ಬಸವನಗೌಡ, ಬೇವೂರು ಪಂಪನಗೌಡ, ಕುಂಟನಗೌಡ, ಇಟ್ಟಗಿ ಚನ್ನಬಸಪ್ಪ, ಕೆಂಚಪ್ಪ, ಸೋಮನಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-25-951011926

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.