ಹರಪನಹಳ್ಳಿ : ತಾಲ್ಲೂಕಿನ ತೆಲಿಗಿ, ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಹೆಲ್ಮೆಟ್ ಜಾಗೃತಿ ಜಾಥಾ ನಡೆಸಿದರು.

ಹೆಲ್ಮೆಟ್ ಧರಿಸದೆ ಚಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ತಡೆದು, ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಇಲ್ಲದಿದ್ದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಅರಸೀಕೆರೆ ಗ್ರಾಮದಲ್ಲಿ ಪಿಎಸ್ಐ ವಿಜಯಕೃಷ್ಣ, ತೆಲಿಗಿ ಗ್ರಾಮದಲ್ಲಿ ಪಿಎಸ್ಐ ಕಿರಣ್ ಕುಮಾರ ಮಾತನಾಡಿ, ‘ಹೆಲ್ಮೆಟ್ ಧರಿಸುವ ಕಾನೂನು ಕೇವಲ ದಂಡದಿಂದ ತಪ್ಪಿಸುವ ಉದ್ದೇಶ ಹೊಂದಿಲ್ಲ. ಬದಲಾಗಿ ಅಪಘಾತಗಳ ಸಂದರ್ಭದಲ್ಲಿ ತಲೆಗೆ ಪೆಟ್ಟು ಬೀಳುವುದನ್ನು ತಡೆದು, ಜೀವ ಉಳಿಸುವ ರಕ್ಷಾ ಕವಚವಾಗಿದೆ’ ಎಂದರು. ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿಯ ಸವಾರರಾಗಲಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಸೂಚಿಸಿದರು.

ಸಹಾಯಕ ಸಬ್ ಇನ್ಸ್ಪೆಕ್ಟರ್ ದಾದಪೀರ್, ಸಿಬ್ಬಂದಿ ಮಾಲತೇಶ್, ಮಂಜುನಾಥ್, ಚಂದ್ರಪ್ಪ, ಪೂರ್ಯನಾಯ್ಕ, ಎಂ. ಕೊಟ್ರೇಶ್, ರವಿನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-25-386181715

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.