ಹರಪನಹಳ್ಳಿ: ‘200 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿರುವ ಹಿರೆಕೆರೆ ಒತ್ತುವರಿಯಾಗಿದ್ದು, ಒತ್ತುವರಿ ಮಾಡಿದವರಿಗೆ ನೋಟಿಸ್ ಜಾರಿಗೊಳಿಸಬೇಕು. ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಬೇಕು’ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಹಿರೆಕೆರೆ ಏರಿಯ ಮೇಲೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ₹3 ಕೋಟಿ ವೆಚ್ಚದ ಹಿರೆಕೆರೆ ಅಭಿವೃದ್ದಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ರಾಜ–ಮಹಾರಾಜರು ವೈಜ್ಞಾನಿಕವಾಗಿ ಕೆರೆಗಳನ್ನು ಕಟ್ಟಿಸಿದ್ದಾರೆ. ಇವುಗಳಲ್ಲಿ ನೀರು ಸಂಗ್ರಹವಾದಷ್ಟೂ ವರ್ಷ ಅಂತರ್ಜಲ ಸಮೃದ್ದವಾಗಿರುತ್ತದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ ಆಗಬೇಕು’ ಎಂದರು.

‘ಅಯ್ಯನಕೆರೆಯು ಸಂಪೂರ್ಣ ಮಲಿನಗೊಂಡಿದೆ. ₹100 ಕೋಟಿ ವೆಚ್ಚ ಮಾಡಿದರೂ ಮೊದಲಿನ ಸ್ಥಿತಿಗೆ ಅದನ್ನು ತರಲಾಗದಷ್ಟು ಹದಗೆಟ್ಟಿದೆ. 10 ದಿನಗಳಿಂದ ಪೌರಕಾರ್ಮಿಕರು ಹಾಗೂ ಯಂತ್ರಗಳ ಮೂಲಕ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರೂ, ಕಸದ ರಾಶಿ ಖಾಲಿಯಾಗಿಲ್ಲ’ ಎಂದು ತಿಳಿಸಿದರು.

‘₹3 ಕೋಟಿ ವೆಚ್ಚದಲ್ಲಿ ಹಿರೆಕೆರೆಯಲ್ಲಿ ಜಾಲಿ ಮುಳ್ಳು ತೆಗೆಯುವುದು, ಕೆರೆ ಏರಿ ವಿಸ್ತರಣೆ, ಪಾದಚಾರಿ ಮಾರ್ಗ, ಕಿರುಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಕೆಲಸಗಳ ಮೂಲಕ ಅಭಿವೃದ್ದಿ ಮಾಡಲಾಗುತ್ತದೆ. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

ಪೌರಾಯುಕ್ತೆ ರೇಣುಕಾ ಎಸ್. ದೇಸಾಯಿ, ಡಿ. ಅಬ್ದುಲ್ ರೆಹಮಾನ್, ಎಚ್. ವಸಂತಪ್ಪ, ಎಂ.ವಿ. ಅಂಜಿನಪ್ಪ, ವೆಂಕಟೇಶ್, ಹುಲಿಕಟ್ಟೆ ಚಂದ್ರಪ್ಪ, ಇಜಂತಕರ ಮಂಜುನಾಥ, ಉಮಾ ಮಹೇಶ್ವರಿ, ಶಂಕರ, ಮಂಜನಾಯ್ಕ, ಸಲೀಂಸಾಬ್, ನಜೀರ್, ಲಾಟಿ ದಾದಾಪೀರ, ಗುಡಿ ನಾಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-25-69328452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.