ಹರಪನಹಳ್ಳಿ: ‘ಕೋಟೆ ಅಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮುಜರಾಯಿ ಇಲಾಖೆಯ ಆಡಳಿತಾಧಿಕಾರಿ ನೇಮಿಸಲು ಅವಕಾಶ ನೀಡುವುದಿಲ್ಲ’ ಎಂದು ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಎಚ್.ಕೆ. ಹಾಲೇಶ ತಿಳಿಸಿದ್ದಾರೆ.

ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಅನುದಾನವಿಲ್ಲದೆ ಭಕ್ತರ ದೇಣಿಗೆಯಿಂದಲೇ ದೇವಸ್ಥಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವ ಆರೋಪ ನಿರಾಧಾರ’ ಎಂದರು.

ದೇವಸ್ಥಾನಕ್ಕೆ ಸೇರಿದ 6.8 ಎಕರೆ ಜಾಗ ಒತ್ತುವರಿಯಾಗಿದ್ದರೂ ತಹಶೀಲ್ದಾರರು ಒತ್ತುವರಿಯಾಗಿಲ್ಲ ಎಂದು ಹೈಕೋರ್ಟ್ಗೆ ತಪ್ಪು ವರದಿ ಸಲ್ಲಿಸಿದ್ದಾರೆ. ಒತ್ತುವರಿದಾರರ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಆದೇಶಿಸಿದ್ದರೂ ತಾಲ್ಲೂಕು ಆಡಳಿತ ಮೀನಾಮೇಷ ಎಣಿಸುತ್ತಿದೆ. ಅಧಿಕಾರಿಗಳು ತಕ್ಷಣ ಒತ್ತುವರಿ ತೆರವುಗೊಳಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಮುಜರಾಯಿ ಇಲಾಖೆಗೆ ಒಳಪಟ್ಟಿರುವ ತಾಲ್ಲೂಕಿನ ಉಚ್ಚೆಂಗೆಮ್ಮ, ಗೋಣಿಬಸವೇಶ್ವರ, ಚಿಗಟೇರಿ ನಾರದಮುನಿ ಸೇರಿದಂತೆ 54 ದೇವಾಲಯಗಳು ಇಂದಿಗೂ ಮೂಲ ಸೌಕರ್ಯಗಳಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ ಎಂದು ಆರೋಪಿಸಿದರು.

ಈ ವೇಳೆ ಗುಡಿಹಳ್ಳಿ ಹಾಲೇಶ, ಎಚ್.ವೆಂಕಟೇಶ್, ಎಚ್.ಎಂ. ಜಗದೀಶ್ ಮಾತನಾಡಿದರು. ಆಂಜನೇಯ ಸೇವಾ ಸಮಿತಿಯ ಪ್ರಮುಖರಾದ ದ್ಯಾಮಜ್ಜಿ ಹನುಮಂತಪ್ಪ, ಮ್ಯಾಕಿ ಸಣ್ಣ ಹಾಲಪ್ಪ, ಯಂಕಪ್ಪ ಚಿಕ್ಕೇರಿ, ಕಮ್ಮಾರ ಸಣ್ಣ ಹಾಲಪ್ಪ, ಚಿಕ್ಕೇರಿ ಬಸಪ್ಪ, ದ್ಯಾಮಜ್ಜಿ ದಂಡ್ಯೆಪ್ಪ, ತಿಮ್ಮಣ್ಣ, ನಿಟ್ಟೂರು ತಿಮ್ಮಪ್ಪ, ಗುಂಡಿ ಮಂಜುನಾಥ, ರಾಯದುರ್ಗದ ವಾಗೀಶ, ಪಟ್ನಾಮದ ಪರುಶುರಾಮ, ಚಿಕ್ಕೆರಿ ಪಾಲಾಕ್ಷಪ್ಪ, ಪೂಜಾರ್ ಮಂಜಣ್ಣ, ಬಿದ್ದಪ್ಪ, ಆಲೂರು ಶ್ರೀನಿವಾಸ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-25-1252902289

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.