ಹರಪನಹಳ್ಳಿ: ಒಂಟಿಯಾಗಿ ವಾಸಿಸುವ ಹಿರಿಯ ಜೀವಿಗಳಿಗೆ ಆಸರೆಯಾಗಬೇಕೆಂಬ ಉದ್ದೇಶದಿಂದ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ‘ಆಸರೆ’ ಯೋಜನೆ ನಗರದ ಆಶ್ರಯ ಕಾಲೊನಿಯ ಮನೆಯ ಕತ್ತಲಲ್ಲಿದ್ದ ಇಬ್ಬರು ವೃದ್ಧೆಯರ ಬಾಳಲ್ಲಿ ಬೆಳಕು ನೀಡುವ ಮೂಲಕ ಸಾಕಾರಗೊಂಡಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಎಚ್. ಸಲೀಂ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಆಸರೆ’ ಅಡಿ, ಹರಪನಹಳ್ಳಿ ಪೊಲೀಸರು ತೋರಿದ ಕಾಳಜಿ ಹಾಗೂ ಬೆಸ್ಕಾಂ ಅಧಿಕಾರಿಗಳ ತ್ವರಿತ ಸ್ಪಂದನೆಯಿಂದಾಗಿ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದ 80 ವರ್ಷದ ಹಯಾತ್ ಬೀ ಹಾಗೂ 60 ವಯಸ್ಸಿನ ಹುಲಿಗೆಮ್ಮ ಎನ್ನುವ ಒಂಟಿ ವೃದ್ಧೆಯರ ಮನೆಗಳಿಗೆ ಇದೀಗ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.

ಹರಿಹರ ರಸ್ತೆ ಆಶ್ರಯ ಕಾಲೊನಿಯಲ್ಲಿ ಕಾರ್ಯಾಚರಣೆಯ ಭಾಗವಾಗಿ ಭೇಟಿ ಕೊಟ್ಟಿದ್ದಾಗ ಇಬ್ಬರು ವೃದ್ಧೆಯರ ದಯನೀಯ ಸ್ಥಿತಿಯನ್ನು ಕಂಡಿರುವ ಪಿಎಸ್ಐ ಶಂಭುಲಿಂಗ ಸಿ.ಹಿರೇಮಠ ಅವರು ತಕ್ಷಣವೇ ಕಾರ್ಯಪ್ರವೃತ್ತರಾದರು.

ವಿದ್ಯುತ್ ಸಂಪರ್ಕವಿಲ್ಲದ ವಿಚಾರವನ್ನು ಕೂಡಲೇ ಸ್ಥಳೀಯ ಬೆಸ್ಕಾಂ ಎಂಜಿನಿಯರ್ ಬಸವರಾಜ್ ಅವರ ಗಮನಕ್ಕೆ ತಂದರು. ಪೊಲೀಸರ ಕಳಕಳಿಗೆ ಅಷ್ಟೇ ತ್ವರಿತವಾಗಿ ಸ್ಪಂದಿಸಿದ ಬೆಸ್ಕಾಂ ಅಧಿಕಾರಿಗಳು, ವಿಳಂಬ ಮಾಡದೇ ಆ ಎರಡೂ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ನೆರವಾಗಿದ್ದಾರೆ.

ಹಿರಿಯ ನಾಗರಿಕರ ಭದ್ರತೆ ಹಾಗೂ ಸುರಕ್ಷತೆಯನ್ನು ಖಾತರಿಪಡಿಸುವ ಪೊಲೀಸ್ ಇಲಾಖೆಯ ಈ ಆಸರೆ ಕಾರ್ಯಕ್ರಮ ಕೇವಲ ಭೇಟಿಗೆ ಮಾತ್ರ ಸೀಮಿತವಾಗದೆ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಇದೇ ರೀತಿ ಮುಂದುವರಿಯುತ್ತದೆ ಎಂದು ಪಿಎಸ್ಐ ಶಂಭುಲಿಂಗ ಸಿ.ಹಿರೇಮಠ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-25-1818199907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.