ಹರಪನಹಳ್ಳಿ: ರಾಗಿ ತುಂಬಿಕೊಂಡು ಬಂದು ಮೂರು ದಿನವಾದರೂ ಲಾರಿ ಬಾರದ ನೆಪವೊಡ್ಡಿ ಖರೀದಿ ವಿಳಂಬವಾಗುತ್ತಿದೆ ಎಂದು ರೈತರು ತಾಲ್ಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಜರುಗಿದೆ.

ರೈತರಿಂದ ರಾಗಿ ಖರೀದಿಗಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆದಿದೆ. ಇಲ್ಲಿ ಹೆಸರು ನೋಂದಾಯಿಸಿದ ರೈತರು ರಾಗಿ ತುಂಬಿಕೊಂಡು ಬಂದು ಮೂರು ನಾಲ್ಕು ದಿನವಾದರೂ ಗುತ್ತಿಗೆ ಪಡೆದಿರುವ ಏಜೆನ್ಸಿ ಖರೀದಿಸದೇ ವಿಳಂಬ ಮಾಡುತ್ತಿದೆ. ಕಾರಣ ಕೇಳಿದರೆ ಲಾರಿ ಬಂದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ ಎಂದು ದೂರಿದರು.

ರಾಗಿ ಖರೀದಿಸುವ ತನಕ ಇಲ್ಲಿಂದ ಹೋಗುವುದಿಲ್ಲ ಎಂದು ರೈತರು ಪಟ್ಟು ಹಿಡಿದರು. ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಆಗಮಿಸಿ, ಸುದೀರ್ಘ ಚರ್ಚೆ ಬಳಿಕ ವಿಜಯನಗರ ಜಿಲ್ಲಾ ಕೇಂದ್ರದಿಂದ 6 ಲಾರಿ ಕರೆಸಲಾಗುವುದು ಹಾಗೂ ಭಾನುವಾರವೂ ಸಹ ಖರೀದಿಸಲು ಏಜೆನ್ಸಿಗೆ ಸೂಚಿಸಿ, ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ಸಿಪಿಐ ಮಹಾಂತೇಶ್ ಸಜ್ಜನ್, ಪಿಎಸ್ಐ ಶಂಭುಲಿಂಗ ಹಿರೇಮಠ, ರೈತರಾದ ಬಾಗಳಿ ಪ್ರಕಾಶಪ್ಪ, ಭರತೇಶ, ಓಬಳಾಪುರ ನಂಜಪ್ಪ, ಕೊಟ್ರೇಶ್, ಬೋಜ್ಯನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-25-1707715837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.