ಹರಪನಹಳ್ಳಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಶನಿವಾರ ಸುರಿದ ಮಳೆಗೆ ಒಟ್ಟು 108 ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಹಲವು ಹಳ್ಳಿಗಳು ರಾತ್ರಿಯಿಡೀ ಕತ್ತಲು ಆವರಿಸಿತ್ತು. ಭಾನುವಾರ ಸಂಜೆ ವಿದ್ಯುತ್ ಪೂರೈಕೆಯಾಯಿತು.

‘ತೆಲಿಗಿ ಉಪವಿಭಾಗದ ಕಂಚಿಕೇರೆ, ಉಚ್ಚಂಗಿದುರ್ಗ ಮತ್ತು ತೆಲಿಗಿ ವ್ಯಾಪ್ತಿಯಲ್ಲಿ 90 ಕಂಬಗಳು, ಎಂಟು ವಿದ್ಯುತ್ ಪರಿವರ್ತಕಗಳ ಕಂಬಗಳು ಮುರಿದಿವೆ. ರಾತ್ರಿಯಿಂದಲೇ ದುರಸ್ತಿ ಕಾರ್ಯ ನಡೆಯಿತು. ಕಂಚಿಕೆರೆ ಗ್ರಾಮವೊಂದರಲ್ಲೇ ಎಂಟು ವಿದ್ಯುತ್ ಕಂಬಗಳು ಬಿದ್ದಿದ್ದರಿಂದ ಸಂಜೆವರೆಗೂ ಆ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಸಾಧ್ಯವಾಗಿಲ್ಲ’ ಎಂದು ಬೆಸ್ಕಾಂ ತೆಲಿಗಿ ಉಪವಿಭಾಗದ ಎಇಇ ಪಂಡಿತರಾಧ್ಯ ತಿಳಿಸಿದರು.

ಬೆಸ್ಕಾಂ ಹರಪನಹಳ್ಳಿ ಉಪವಿಭಾಗದ ಎಇಇ ಪ್ರಕಾಶ್ ಪತ್ತೆನೂರು ಮಾತನಾಡಿ, ‘ಶೃಂಗಾರತೋಟ ಒಳಗೊಂಡು 18 ವಿದ್ಯುತ್ ಕಂಬಗಳು ಹಾಗೂ ಒಂದು ಪರಿವರ್ತಕಕ್ಕೆ ಹಾನಿಯಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಳಿಸಲಾಗಿದೆ’ ಎಂದು ಹೇಳಿದರು.

ರಂಗಾಪುರ ಕ್ರಾಸ್ ಬಳಿಯ ದಾವಣಗೆರೆ–ಕಂಚಿಕೆರೆ ರಸ್ತೆಯಲ್ಲಿ ಮುರಿದು ಬಿದ್ದಿದ್ದ ಮರಗಳು, ಕಂಬಗಳನ್ನು ಹಲುವಾಗಲು ಠಾಣೆ ಪೊಲೀಸರು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಮಳೆ ವರದಿ: ಹರಪನಹಳ್ಳಿ 3.4 ಸೆಂ.ಮೀ, ಅರಸೀಕೆರೆ 2.3 ಸೆಂ.ಮೀ, ಹಿರೆಮೇಗಳಗೆರೆ 2.0 ಸೆಂ.ಮೀ, ಉಚ್ಚಂಗಿದುರ್ಗ, ತೆಲಿಗಿ, ಹಲುವಾಗಲು ತಲಾ 1.4 ಸೆಂ.ಮೀ. ಮಳೆ ಸುರಿದಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-25-177727769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.