ಹರಪನಹಳ್ಳಿ: ಹಲವಾಗಲು ಬಳಿ ತುಂಗಭದ್ರಾ ನದಿಗೆ ಸ್ನಾನ ಮಾಡಲು ತೆರಳಿದ್ದ ಇಬ್ಬರು ಸಹೋದರರು ಭಾನುವಾರ ಆಳವಾದ ಗುಂಡಿಯಲ್ಲಿ ಸಿಲುಕಿ ಜಲಸಮಾಧಿಯಾದ ಘಟನೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಹೊಂಡಗಳು ಇರುವ ಕುರಿತು ಅಪಾಯದ ಫಲಕ ಅಳವಡಿಸುವ ಕೆಲಸ ತಕ್ಷಣ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

‘ಹಿಂದೆ ಎಲ್ಲೆಂದರಲ್ಲಿ ನಡೆಸಿರುವ ಮರುಳು ಗಣಿಗಾರಿಕೆ ಪರಿಣಾಮ ನದಿಯಲ್ಲಿ ಆಳವಾದ ಗುಂಡಿಗಳು ಇವೆ, ಕೆಲವೆಡೆ ನೀರು ಸಂಗ್ರಹಕ್ಕೂ ಇಂತಹ ಗುಂಡಿ ಮಾಡಲಾಗಿದೆ. ಎಲ್ಲಿ ಗುಂಡಿ ಇದೆ ಎಂಬುದನ್ನು ಸೂಚಿಸುವ ಸೂಚನಾ ಫಲಕ ಅಳವಡಿಸಬೇಕು, ಇದರಿಂದ ಅಮಾಯಕರ ಜೀವ ಉಳಿಸಬಹುದು’ ಎಂದು ಗ್ರಾಮದ ಮಹೇಂದ್ರ ಹೇಳಿದರು.

ಹರಪನಹಳ್ಳಿ ತಾಲ್ಲೂಕನ್ನು ವಟ್ಲಹಳ್ಳಿ ಬಳಿ ಪ್ರವೇಶಿಸುವ ತುಂಗಭದ್ರಾ ನದಿ ಕಡತಿ, ನಂದ್ಯಾಲ, ತಾವರಗೊಂದಿ, ನಿಟ್ಟೂರು, ನಿಟ್ಟೂರು ಬಸಾಪುರ, ಹಲವಾಗಲು ಮತ್ತು ಗರ್ಭಗುಡಿ ಮಾರ್ಗವಾಗಿ ಹರಿದು, ಅಮವಾಸ್ಯೆ ಹೊಳೆ ಬಳಿ ಹೂವಿನಹಡಗಲಿ ತಾಲ್ಲೂಕನ್ನು ಪ್ರವೇಶಿಸುತ್ತದೆ. ಹರಪನಹಳ್ಳಿ ತಾಲ್ಲೂಕಿನಲ್ಲಿ ಒಟ್ಟು 19 ಕಿ.ಮೀ. ಉದ್ದಕ್ಕೆ ನದಿಯು ಉತ್ತರದಿಂದ ದಕ್ಷಿಣದತ್ತ ಹರಿಯುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-25-1378365083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.