ಹರಪನಹಳ್ಳಿ: ‘ದೇವಸ್ಥಾನ ನಿರ್ಮಾಣದಿಂದ ಗ್ರಾಮಗಳಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ’ ಎಂದು ಉಚ್ಚಂಗಿದುರ್ಗ– ರಾಮಘಟ್ಟ ಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.

ತಾಲ್ಲೂಕಿನ ಉಚ್ಚಂಗಿದುರ್ಗ ಗ್ರಾಮದ ರೇಣುಕಾ ಬಡಾವಣೆಯಲ್ಲಿ ಶನಿವಾರ ಆಯೋಜಿಸಿದ್ದ ವೀರಾಂಜನೇಯ ಸ್ವಾಮಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ದೀನ ದಲಿತರ, ಬಡವರ ರಕ್ಷಣೆಗೆ ವೀರಾಂಜನೇಯ ಸದಾ ಇರುತ್ತಾರೆ. ಇಂದಿನ ಮಠಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ, ಮಾನವ ಧರ್ಮವೇ ದೊಡ್ಡದು ಎಂಬಂತೆ ಇರಬೇಕು’ ಎಂದು ತಿಳಿಸಿದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ‘ಸಕಲ ಜೀವರಾಶಿಗಳಲ್ಲಿ ದೈವತ್ವ ಕಾಣುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ’ ಎಂದರು.

ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ‘ಐತಿಹಾಸಿಕ ಉಚ್ಚಂಗಿದುರ್ಗ ಗ್ರಾಮವು ದೇವಸ್ಥಾನ ಗಳ ತವರು. ಇಲ್ಲಿನ ವೀರಾಂಜನೇಯನ ಪೂಜೆಯು ಭಕ್ತರಲ್ಲಿ ಆತ್ಮಸ್ಥೈರ್ಯ ವೃದ್ಧಿಸುತ್ತದೆ’ ಎಂದು ಹೇಳಿದರು.

ಕೆಪಿಸಿಸಿ ಎಸ್.ಟಿ ಘಟಕದ ಮಾಜಿ ಅಧ್ಯಕ್ಷ ಕೆ.ಪಿ. ಪಾಲಯ್ಯ ಅವರು, ‘ಭಕ್ತಿಯ ಜೊತೆಗೆ ಸಂವಿಧಾನವನ್ನು ಗೌರವಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ತಿಳಿಸಿದರು.

ಉಚ್ಚಂಗೆಮ್ಮ ಪಟ್ಟದ ಪೂಜಾರಿ ವಯ್ಯಾಳಿ ಹನುಮಂತಪ್ಪ, ಕೆಂಚನಗೌಡ ಪಾಟೀಲ, ಎಂ.ಬಿ. ಯಶವಂತ ಗೌಡ, ಕೆ.ಎಂ. ಶಿವಕುಮಾರ್, ಮಹಾಂತೇಶ್ ನಾಯ್ಕ, ಮಡ್ರಳ್ಳಿ ಕೆಂಚಪ್ಪ, ಎಂ.ಕುಮಾರ್, ಶೇಖರಪ್ಪ, ಮಂಜಪ್ಪ, ಸೋಮಶೇಖರ್ ಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-25-1598563867

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.