ಮಂಗಳವಾರ, ಜೂನ್ 15, 2021
24 °C

ಪ್ರಜಾವಾಣಿ ವರದಿ ಫಲಶ್ರುತಿ: ಹಿಂದಿ ಗೀತೆ ಪ್ರಸಾರಕ್ಕೆ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಇಲ್ಲಿನ ಆಕಾಶವಾಣಿ ಎಫ್‌.ಎಂ. ಕೇಂದ್ರವು ಹಿಂದಿ ಗೀತೆಗಳ ಪ್ರಸಾರವನ್ನು ತಡೆದಿದೆ. ಅಲ್ಲದೇ ನಿರೂಪಕರಿಗೂ ಹಿಂದಿ ಬಳಸದಂತೆ ಕೇಂದ್ರದ ಮುಖ್ಯಸ್ಥ ಎಂ.ಎಸ್‌. ನಾಗೇಂದ್ರ ಅವರು ಸೂಚನೆ ಕೊಟ್ಟಿದ್ದಾರೆ.

ಸ್ವತಃ ನಾಗೇಂದ್ರ ಅವರೇ ಆಕಾಶವಾಣಿ ಕೇಳುಗ ಜೆ. ನೀಲಕಂಠ ಅವರಿಗೆ ಪತ್ರ ಬರೆದು, ‘ಹಾಡಿನ ಬಂಡಿ’ ಕಾರ್ಯಕ್ರಮದಲ್ಲಿ ಪ್ರಸಾರವಾದ ಹಿಂದಿ ಗೀತೆಗಳಿಗೆ ಆಕ್ಷೇಪ ಎತ್ತಿದ್ದೀರಿ. ಇನ್ನು ಮುಂದೆ ಹಿಂದಿ ಗೀತೆ ಪ್ರಸಾರ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

‘ಆಕಾಶವಾಣಿಯಲ್ಲಿ ಹಿಂದಿ ಡಿಂಡಿಮ..’ ಶೀರ್ಷಿಕೆ ಅಡಿ ಬುಧವಾರ (ಏ.28) ‘ಪ್ರಜಾವಾಣಿ’ ನೀಲಕಂಠ ಅವರ ದೂರಿನ ಮೇರೆಗೆ ವರದಿ ಪ್ರಕಟಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು