ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಯುವಕರಿಂದ ಹಿಂದೂ ಮಹಿಳೆ ಅಂತ್ಯಸಂಸ್ಕಾರ

Last Updated 27 ಮೇ 2022, 8:20 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಅನಾರೋಗ್ಯದಿಂದ ಮೃತಪಟ್ಟ ಹಿಂದೂ ವೃದ್ಧ ಮಹಿಳೆಯ ಅಂತ್ಯಸಂಸ್ಕಾರವನ್ನು ಮುಸ್ಲಿಂ ಯುವಕರು ಬುಧವಾರ ನಗರದಲ್ಲಿ ನೆರವೇರಿಸಿದ್ದಾರೆ.

ಯಮುನಮ್ಮ (75) ಎಂಬುವರು ನಗರದ ದೊಡ್ಡ ಮಸೀದಿ ಬಳಿ ಅನೇಕ ವರ್ಷಗಳಿಂದ ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದ ಅವರನ್ನು ‘ಹಂಬಲ್ ಯುನೈಟೆಡ್ ಬ್ರದರ್ಸ್‌’ ಸಂಘಟನೆಯ ಯುವಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.

ಆದರೆ, ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ವಿಷಯ ತಿಳಿದ ಯುವಕರು, ಹಿಂದೂ ಧರ್ಮದ ವಿಧಿ ವಿಧಾನಗಳ ಪ್ರಕಾರ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಸಂಘಟನೆಯ ಎಂ.ಎ.ರಿಯಾಜ್ ಪಟೇಲ್, ಡಿ.ಮೈನುದ್ದೀನ್, ಖಾದರ್ ಬಾಷಾ, ಆಸಿಫ್ ಬೇಗ್, ಮೆಹಬೂಬ್ ಬಾಷಾ ಅಂತ್ಯಕ್ರಿಯೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT