ಹೂವಿನಹಡಗಲಿ: ಪಟ್ಟಣದ ಹೃದಯ ಭಾಗದಲ್ಲಿರುವ ಬಿ.ಆರ್. ಅಂಬೇಡ್ಕರ್ ವೃತ್ತ ಆಧುನೀಕರಣ ಕಾಮಗಾರಿ ಕೈಗೆತ್ತಿಕೊಳ್ಳುವ ಸಲುವಾಗಿ ವೃತ್ತದ ಕಬ್ಬಿಣ ಚಾಲರಿಯಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಬುಧವಾರ ರಾತ್ರಿ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು.

ಗೌರವ ಸಮರ್ಪಣೆ ಬಳಿಕ ಪ್ರತಿಮೆಯನ್ನು ಸ್ತಂಭದಿಂದ ಬೇರ್ಪಡಿಸಿ, ವೃತ್ತದ ಪಕ್ಕದಲ್ಲಿರುವ ಪುರಸಭೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಶಾಸಕ ಕೃಷ್ಣನಾಯ್ಕ, ತಹಶೀಲ್ದಾರ್ ಕೆ.ಎಂ.ಗುರುಬಸವರಾಜ, ಸಿಪಿಐ ಮಲ್ಲಪ್ಪ ಹೂಗಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆನಂದ ವೈ. ಡೊಳ್ಳಿನ, ಮುಖಂಡರಾದ ಕೆ.ಪುತ್ರೇಶ, ಜೆ.ಶಿವರಾಜ, ಜೆ.ಬಸವರಾಜ, ದುರುಗೇಶ ಸ್ಥಳದಲ್ಲಿದ್ದರು.

ಪಟ್ಟಣದಲ್ಲಿ ಈ ಹಿಂದೆ ಅಹಿತಕರ ಘಟನೆಗಳು ನಡೆದಿದ್ದರಿಂದ ಜಿಲ್ಲಾಡಳಿತ ನಿರ್ದೇಶನದಂತೆ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬುಲೆಟ್ ಪ್ರೂಪ್ ಗಾಜಿನ ಕವಚದಲ್ಲಿ ಅಂಬೇಡ್ಕರ್ ಪ್ರತಿಮೆ ಇರಿಸಿ, ಇಡೀ ವೃತ್ತಕ್ಕೆ ಕಬ್ಬಿಣದ ಜಾಲರಿ ಅಳವಡಿಸಲಾಗಿತ್ತು. ವಿಶೇಷ ದಿನಗಳಂದು ಮಾತ್ರ ಬೀಗ ತೆರೆದು ಗೌರವ ಸಲ್ಲಿಸಲಾಗುತಿತ್ತು.

ಕಬ್ಬಿಣ ಕೋಟೆಯಿಂದ ಪ್ರತಿಮೆಯನ್ನು ಮುಕ್ತಗೊಳಿಸುವಂತೆ ದಲಿತ ಸಂಘಟನೆಗಳ ಮುಖಂಡರು ಎರಡು ದಶಕದಿಂದ ಹೋರಾಟ ನಡೆಸಿದ್ದರು. ಬೇಡಿಕೆಗೆ ಸ್ಪಂದಿಸಿದ ಶಾಸಕ ಕೃಷ್ಣನಾಯ್ಕ ಜಿಲ್ಲಾಡಳಿತದಿಂದ ಒಪ್ಪಿಗೆ ಪಡೆದು ವೃತ್ತ ನವೀಕರಣಕ್ಕೆ ಚಾಲನೆ ನೀಡಿದ್ದಾರೆ.

ಈಗಿನ ವೃತ್ತವನ್ನು ಆಧುನೀಕರಣಗೊಳಿಸಿ, ಸಂಸತ್ ಭವನದ ಮೇಲೆ ಸಂವಿಧಾನ ಹೊತ್ತಿಗೆ ಹಿಡಿದು ನಿಂತಿರುವ ಅಂಬೇಡ್ಕರರ ಕಂಚಿನ ಮೂರ್ತಿಯನ್ನು ಅಳವಡಿಸಲಾಗುತ್ತಿದೆ. ಈ ಯೋಜನೆಗೆ ಕಳೆದ ಸಾಲಿನ ಕೆಕೆ ಆರ್ಡಿಬಿ ಅನುದಾನದಲ್ಲಿ ₹50 ಲಕ್ಷ ಮೀಸಲಿರಿಸಲಾಗಿದ್ದು, ಈ ವರ್ಷ ಹೆಚ್ಚುವರಿ ಅನುದಾನ ಒದಗಿಸಿ ಸುಂದರ ವೃತ್ತ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-25-857846901

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.