ಹೂವಿನಹಡಗಲಿ: ‘ಮೂರು ಪಟ್ಟು ಹೆಚ್ಚಳವಾಗಿರುವ ರಸಗೊಬ್ಬರಗಳ ಬೆಲೆ ತಕ್ಷಣ ಇಳಿಸಬೇಕು. ಯೂರಿಯಾ ಗೊಬ್ಬರ ಖರೀದಿಗೆ ವಿಧಿಸಿರುವ ಎಫ್.ಐ.ಡಿ ನಿಯಮ ಸಡಿಲಗೊಳಿಸಬೇಕು’ ಎಂದು ರೈತ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಸಂಘದ ಪದಾಧಿಕಾರಿಗಳು ಸೋಮವಾರ ತಾಲ್ಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘2010 ರಿಂದ 2026ರವರೆಗೆ ರಸಗೊಬ್ಬರ, ಬಿತ್ತನೆ ಬೀಜಗಳ ಬೆಲೆ ಮೂರು ಪಟ್ಟು ಹೆಚ್ಚಾಗಿದೆ. ಡಿಎಪಿ ₹ 450 ಗಳಿಂದ ₹ 1,350ಕ್ಕೆ ಏರಿದೆ. ಪೊಟ್ಯಾಷ್ ಅಮೋನಿಯಂ ಸಲ್ಫೇಟ್ ಬೆಲೆಯೂ ದುಪ್ಪಟ್ಟಾಗಿದೆ. ಆದರೆ, ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಸಿಗದೇ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಯೂರಿಯಾ ಗೊಬ್ಬರ ಖರೀದಿಗೆ ಎಫ್.ಐ.ಡಿ. ಮೂಲಕ ಎಕರೆಗೆ ಒಂದು ಚೀಲದಂತೆ ವಿತರಿಸುವ ನಿಯಮ ಕೈ ಬಿಡಬೇಕು. ದಶಕದಿಂದ ಸರ್ಕಾರಿ ಭೂಮಿ ಉಳುಮೆ ಮಾಡುವ ರೈತರ ಹೆಸರಿಗೆ ಪಹಣಿ, ಎಫ್ಐಡಿ ಇರುವುದಿಲ್ಲ. ಹಾಗಾಗಿ ಈ ಹಿಂದಿನಂತೆ ಯೂರಿಯಾ ಮಾರಾಟ ಮಾಡಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ರೈತ ಸಂಘದ ಅಧ್ಯಕ್ಷ ಹೊಸಮನಿ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಎಂ. ಶಿವರಾಜ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ, ಪಕ್ಕೀರಪ್ಪ ಮಡ್ಡಿ, ಕೆ. ಗನಿಸಾಬ್, ಎಂ. ಶಿವರಾಜ್, ಎಚ್.ದುರುಗಪ್ಪ, ಡಿ. ಗಿರೀಶ, ಬಸವರಾಜ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-25-2062809984

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.