ಹೂವಿನಹಡಗಲಿ: ತಾಲ್ಲೂಕಿನ ಹೊಳಗುಂದಿ ಬಾವಿಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮು ಬಳಿ ಶುಕ್ರವಾರ ಯೂರಿಯಾ ಗೊಬ್ಬರ ಖರೀದಿಗೆ ನೂಕುನುಗ್ಗಲು ಉಂಟಾಯಿತು.

ತಾಲ್ಲೂಕಿನಲ್ಲಿ ಇನ್ನೂ ಬಿತ್ತನೆ ಆಂಭವಾಗಿಲ್ಲ. ಯೂರಿಯಾ ಗೊಬ್ಬರ ಅವಶ್ಯಕತೆ ಇಲ್ಲದಿದ್ದರೂ ಮುಂದಿನ ದಿನಗಳಲ್ಲಿ ಅಭಾವ ತಲೆದೋರುವ ಆತಂಕದಿಂದ ರೈತರು ಯೂರಿಯಾ ಖರೀದಿಗೆ ಮುಗಿ ಬೀಳುತ್ತಿದ್ದಾರೆ.

ತಾಲ್ಲೂಕಿನ ಹೊಳಗುಂದಿ, ಬಾವಿಹಳ್ಳಿಯ ನೂರಾರು ರೈತರು ಗೋದಾಮಿನ ಮುಂದೆ ಜಮಾಯಿಸಿದರು. ಯೂರಿಯಾ ಖರೀದಿಗೆ ಎಫ್ಐಡಿ ನಮೂದಿಸುವುದು ಕಡ್ಡಾಯಗೊಳಿಸಲಾಗಿದ್ದು, ಸರ್ವರ್ ಸಮಸ್ಯೆಯಿಂದ ಎಫ್ಐಡಿ ನಮೂದು ವಿಳಂಬ ಆಗುತ್ತಿದ್ದಂತೆ ರೈತರು ಗಲಾಟೆ ಶುರು ಮಾಡಿದರು.

ಸಹಾಯಕ ಕೃಷಿ ನಿರ್ದೇಶಕ ಕೆ.ಟಿ. ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ, ‘ಸರ್ವರ್ ಸಮಸ್ಯೆ ಇರುವುದರಿಂದ ಪಹಣಿ, ಆಧಾರ್ ಕಾರ್ಡ್ ತೋರಿಸಿ ಎಕರೆಗೆ ಒಂದು ಚೀಲದಂತೆ ಪ್ರತಿ ರೈತರಿಗೆ ಐದು ಚೀಲ ಗೊಬ್ಬರ ವಿತರಿಸಿ’ ಎಂದು ಸಿಬ್ಬಂದಿಗೆ ಸೂಚಿಸಿದರು.

‘ಸೊಸೈಟಿಯವರು ಕೇವಲ ಹೊಳಗುಂದಿ ಗ್ರಾಮದ ರೈತರಿಗೆ ಆದ್ಯತೆ ನೀಡಿ, ಗೊಬ್ಬರಕ್ಕೆ ಮುಂಗಡ ಚೀಟಿ ನೀಡಿದ್ದಾರೆ’ ಎಂದು ಬಾವಿಹಳ್ಳಿ ರೈತರು ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಲಾಖೆ ಸಿಬ್ಬಂದಿ ಗೊಬ್ಬರ ಮಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-25-1611923465

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.