ಹೂವಿನಹಡಗಲಿ: ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಶುಕ್ರವಾರ ಆಗಿ ಹುಣ್ಣಿಮೆ ಆಚರಣೆ ಜರುಗಿತು. ಮೈಲಾರಲಿಂಗೇಶ್ವರ ಹಾಗೂ ಗಂಗಿಮಾಳಮ್ಮ ದೇವಿ ಕಲ್ಯಾಣ ಮಹೋತ್ಸವ ಅಂಗವಾಗಿ ಸುಕ್ಷೇತ್ರದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಹಾಗೂ ಅರ್ಚಕ ಪ್ರಮೋದ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು.

ನಾಡಿನ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನ ಮುಂಭಾಗದಲ್ಲಿ ವಿವಿಧ ರೀತಿಯ ಹರಕೆ ತೀರಿಸಿದರು.

ಸುಕ್ಷೇತ್ರದ ಸಂಪ್ರದಾಯದಂತೆ ಹುಣ್ಣಿಮೆಯ ಐದು ದಿನಗಳ ಮುಂಚೆ ದೇವಸ್ಥಾನ ಆವರಣದಲ್ಲಿ ನವಧಾನ್ಯಗಳನ್ನು ಬಿತ್ತನೆ ಮಾಡಲಾಗಿತ್ತು. ಸ್ವಾಮಿಯ ಸನ್ನಿಧಾನದಲ್ಲಿ ಯಾವ ಧಾನ್ಯದ ಸಸಿಗಳು ಹುಲುಸಾಗಿ ಬೆಳೆಯುತ್ತದೆಯೋ ಬರುವ ಮುಂಗಾರಿನಲ್ಲಿ ಆ ಬೆಳೆ ಉತ್ತಮ ಫಸಲು ನೀಡುತ್ತದೆ ಎಂಬುದು ಭಕ್ತರ ನಂಬಿಕೆ.

ಈ ಬಾರಿ ಬಿತ್ತನೆಯಾದ ಧಾನ್ಯಗಳಲ್ಲಿ ಭತ್ತ, ಹೆಸರು, ಮಡಿಕೆ ಉತ್ತಮವಾಗಿ ಬೆಳೆದಿದ್ದರೆ ಜೋಳ, ರಾಗಿ, ಹುರುಳಿ, ಎಳ್ಳು, ಕಡಲೆ, ಅಲಸಂದಿ ಮಧ್ಯಮ ಪ್ರಮಾಣದಲ್ಲಿ ಬೆಳೆದಿವೆ. ಇದನ್ನು ಗಮನಿಸಿ ಈ ಭಾಗದ ರೈತರು ಬೆಳೆ ಆಯ್ಕೆ ಮಾಡಿಕೊಳ್ಳುವುದು ವಾಡಿಕೆ.

ಕುರುಗೋಡು: ತಾಲ್ಲೂಕಿನ ಬಾದನಹಟ್ಟಿ ಗ್ರಾಮದ ಅಧಿದೇವತೆ ಉಡು ಸಲಮ್ಮದೇವಿ ದೇವಸ್ಥಾನದ ಉತ್ತರ, ದಕ್ಷಿಣ ದಿಕ್ಕಿನ ಗೋಪುರ ಕಳಸಾರೋಹಣ ಅದ್ದೂರಿಯಾಗಿ ಜರು ಗಿತು. ಕಳಸಾರೋಹಣದ ಅಂಗವಾಗಿ ಮಂಗಳವಾರ ರಾತ್ರಿ ದೇವಸ್ಥಾನದಲ್ಲಿ ಹೋಮ, ಹವನ, ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಎಮ್ಮಿಗನೂರಿನ ಹಂಪಿ ಸಾವಿರ ದೇವರು ಗುರುಮಹಾಂತಿನ ಮಠದ ವಾಮದೇವಶಿವಾಚಾರ್ಯ ಶ್ರೀ ಆಶೀರ್ವಚನ ನೀಡಿದರು.

ಕಲ್ಲುಕಂಭ ಗ್ರಾಮದ ರುದ್ರಮುನಿ ತಾತ, ಬಿಳೆಹಾಳು ರಾಮಯ್ಯ ತಾತ, ಕರಿಬಸವ ಶರಣ, ಫಕ್ಕೀರಪ್ಪ ತಾತ ಮತ್ತು ಶರಣೆ ಯಲ್ಲಮ್ಮ ತಾಯಿ ಇದ್ದರು.

ಕಂಪ್ಲಿ: ಇಲ್ಲಿನ ದೇವಾಂಗ ಸಮುದಾ ಯದ ಬಣ್ಣದ ಚೌಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ದೇವಲ ಸಪ್ತ ಮಹಾಮುನಿಗಳಾದ ದೇವಲ, ವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ, ದೇವಶಾಲಿ ಮತ್ತು ದೇವದಾಸ ಶಿಲಾ ಪ್ರತಿಮೆಗಳ ಪ್ರಾಣಪ್ರತಿಷ್ಠಾಪನೆ ಶ್ರದ್ಧಾಭಕ್ತಿಯಿಂದ ಜರುಗಿತು.

ಹೊಸಪೇಟೆ ದೇವಾಂಗಮಠದ ಶಂಕ್ರಯ್ಯಸ್ವಾಮಿ ಹಾಗೂ ದೇವಾಂಗಮಠದ ಮಂಜುನಾಥ ಸ್ವಾಮಿ ಪೌರೋಹಿತ್ಯದಲ್ಲಿ ಅಭಿಷೇಕ, ಹೋಮ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನಡೆದವು. ಹೊಸಪೇಟೆ ದೇವಾಂಗಮಠದ ಶಂಕ್ರಯ್ಯಸ್ವಾಮಿ ಮಾತನಾಡಿ, ದೇವಲ ಮಹರ್ಷಿಯ ಏಳು ಅವತಾರದ ಸಪ್ತರ್ಷಿಗಳ ಶಿಲಾ ಪ್ರತಿಮೆ ಪ್ರತಿಷ್ಠಾಪಿಸಿದ್ದು ಔಚಿತ್ಯಪೂರ್ಣವಾಗಿದೆ ಎಂದು ತಿಳಿಸಿದರು.

ಬಳ್ಳಾರಿ ವಿಎಸ್ಕೆ ವಿವಿಯ ಯೋಗ ಉಪನ್ಯಾಸಕ ದೂಪದ ಮಹೇಶಬಾಬು ಅವರು ದೇವಲ ಸಪ್ತರ್ಷಿಗಳ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಕೊಟ್ಟೂರು: ಪಟ್ಟಣದ ಕೆರೆ ದಂಡೆ ಯಲ್ಲಿರುವ ಬಿಕ್ಕಿ ಮರಡಿ ದುರ್ಗಮ್ಮ ಜಾತ್ರೆಯು ಆಗಿ ಹುಣ್ಣಿಮೆಯ ಶುಕ್ರವಾರ ಸಂಭ್ರಮದಿಂದ ಜರುಗಿತು.

ಸಾಮಾನ್ಯವಾಗಿ ಎಲ್ಲಾ ತೇರು ಗಳಿಗೆ ಬಾಳೆಹಣ್ಣು ಅಥವಾ ಉತ್ತುತ್ತಿ ತೂರಿದರೆ ಈ ದುರ್ಗಮ್ಮನ ತೇರಿಗೆ ಇವುಗಳೊಂದಿಗೆ ಹರಕೆ ಹೊತ್ತ ಭಕ್ತರು ಕೋಳಿಗಳನ್ನು ತೂರುವ ಸಂಪ್ರದಾಯವಿದೆ. ಕೋಳಿ ಸಿಕ್ಕವರು ಮರು ವರ್ಷ ಇನ್ನೊಂದು ಕೋಳಿ ತೂರಬೇಕು ಎಂಬ ನಿಯಮವಿದೆ. ಹಾಗೆಯೇ ನವವಿವಾಹಿತರು ಈ ತೇರಿನ ಕಳಸ ನೋಡಬೇಕೆನ್ನುವ ಪದ್ಧತಿ ಇರುವುದರಿಂದ ಜಾತ್ರೆಯಲ್ಲಿ ಎಲ್ಲಿ ನೋಡಿದರೂ ನವಜೋಡಿಗಳು ಕಂಡುಬಂದವು.

ರಥವನ್ನು ಮೂರು ಸುತ್ತು ಪ್ರದಕ್ಷಿಣೆ ಹಾಕಿ ದೇವಿಯನ್ನು ಪ್ರತಿಷ್ಠಾಪಿಸುತ್ತಿದ್ದಂತೆ ನೆರದ ಭಕ್ತರ ಜಯ ಘೋಷಗಳ ಮಧ್ಯೆ ರಥ ಮುಂದೆ ಸಾಗುತ್ತಿದ್ದಂತೆ ಹರಕೆ ಹೊತ್ತ ಭಕ್ತರು ತೂರಿದ ಕೋಳಿಗಳ ಹಾರಾಟ ನೋಡುಗರ ಕಣ್ಮನ ಸೆಳೆಯಿತು.

ತೆಕ್ಕಲಕೋಟೆ: ಇಲ್ಲಿನ ವರವಿನ ಮಲ್ಲೇಶ್ವರ ಜಾತ್ರಾ ಮಹೋತ್ಸವವು ಶುಕ್ರವಾರ ವಿಜೃoಭಣೆಯಿಂದ ಸಂಪನ್ನ ಗೊಂಡಿತು. ಜಾತ್ರೆಯ ಅಂಗವಾಗಿ ಸ್ವಾಮಿಗೆ ಬೆಳಿಗ್ಗೆ ಮಹಾರುದ್ರಾಭಿಷೇಕ, ಕ್ಷೀರಾಭಿಷೇಕ ಪೂಜಾ ಕಾರ್ಯಕ್ರಮ ಜರುಗಿತು.

ನಂತರ ವಿವಿಧ ಹೂಗಳು ಮತ್ತು ಆಭರಣಗಳಿಂದ ಅಲಂಕಾರ ಮಾಡಿ ಸ್ವಾಮಿಗೆ ಮಂಗಳಾರತಿ ನೆರ ವೇರಿಸಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಹೊಳಗುಂದಿ, ರಾರಾವಿ ಹಾಗೂ ಸಿರುಗುಪ್ಪದ ಭಕ್ತರ ಪರಂಪರೆಯಿಂತೆ ದೇವತಾ ದರ್ಶನ ಹಾಗೂ ಗಂಗೆ ಕಾರ್ಯಕ್ಕೆ ಅನುವು ಮಾಡಿಕೊಡಲಾಗಿತ್ತು. ಪೂಜಾರಿ ಬಂಧುಗಳು ಹಾಗೂ ಭಕ್ತರಿಂದ ದೇವತಾಗಣಕ್ಕೆ ಬೆಳಗಿನ ಉತ್ಸವ (ಬಿಳಿನುಚ್ಚಯ್ಯ) ನೆರವೇರಿಸಲಾಯಿತು ಹಾಗೂ ರಥಾಂಗ ಹೋಮದ ನಂತರ ಸಂಜೆ ಮಹಾರಥೋತ್ಸವ ಚಾಲನೆ ನೀಡಲಾಯಿತು.

ರಥ ಬೀದಿಯಿಂದ ಎದುರು ಬಸವಣ್ಣ ದೇವಸ್ಥಾನದವರೆಗೆ ರಥವು ಸಾಗಿತು. ಭಕ್ತರು ಒಣ ಉತ್ತುತ್ತಿ ಮತ್ತು ಹೂ (ಬಾಳೆಕಾಯಿ ನಿಷೇಧಿಸಲಾಗಿತ್ತು) ಎಸೆದು ಭಕ್ತಿಭಾವ ಸಮರ್ಪಿಸಿದರು. ರಥ ಹಾಗೂ ಕಳಸ ವೀಕ್ಷಿಸಲು ನವವಿವಾಹಿತ ಜೋಡಿಗಳು ದೊಡ್ಡ ಪ್ರಮಾಣದಲ್ಲಿ ಸೇರಿದ್ದು ವಿಶೇಷ ರಾಜ್ಯದ ವಿವಿಧ ಜಿಲ್ಲೆಗಳು ಅಲ್ಲದೆ ಸೀಮಾಂಧ್ರದ ಆಲೂರು, ಹೊಳಗುಂದಿ, ಆದೋನಿ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-25-1716539883

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.