ಹೂವಿನಹಡಗಲಿ: ಇಲ್ಲಿನ ತಾಲ್ಲೂಕು ಕಚೇರಿಯ ಮಹಡಿಯಲ್ಲಿರುವ ಉಪ ನೋಂದಣಿ ಹಾಗೂ ಇತರೆ ಕಚೇರಿಗಳಿಗೆ ಬರುವ ಅಂಗವಿಕರು, ವೃದ್ಧರ ಅನುಕೂಲಕ್ಕಾಗಿ ನಿರ್ಮಿಸಿರುವ ‘ಲಿಫ್ಟ್’ ಸೇವೆ ಉದ್ಘಾಟನೆಗಷ್ಟೇ ಸೀಮಿತವಾಗಿದೆ.

ಮಹಡಿಯಲ್ಲಿನ ಕಚೇರಿಗಳಿಗೆ ಅಂಗವಿಕಲರು, ವೃದ್ದರು ಹೋಗಲು ಕಷ್ಟ ಪಡುತ್ತಿರುವ ಕಾರಣ ಶಾಸಕರು ₹21 ಲಕ್ಷ ವೆಚ್ಚದಲ್ಲಿ ಲಿಫ್ಟ್ ನಿರ್ಮಿಸಿ, ಮೇ 26ರಂದು ಉದ್ಘಾಟಿಸಿದ್ದರು. ಇದೀಗ ಲಿಫ್ಟ್ ನಿರ್ಮಿಸಿದ ಏಜೆನ್ಸಿಯವರು ಬೀಗ ಹಾಕಿರುವುದರಿಂದ ಲಿಫ್ಟ್ ಇದ್ದೂ ಇಲ್ಲದಂತಾಗಿದೆ.

‘ವಯೋವದ್ಧರೊಬ್ಬರನ್ನು ಶುಕ್ರವಾರ ಕುಟುಂಬದ ಸದಸ್ಯರು ಹೆಗಲ ಮೇಲೆ ಹೊತ್ತುಕೊಂಡು ಉಪ ನೋಂದಣಿ ಕಚೇರಿಗೆ ಕರೆ ತಂದರು. ನಿತ್ಯವೂ ಇಂತಹ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿವೆ. ಲಿಫ್ಟ್ ಸೇವೆಯ ನಿಗಾವಹಿಸುವಂತೆ ಶಾಸಕರು ತಿಳಿಸಿದ್ದಾರೆ. ಆದರೆ, ಏಜೆನ್ಸಿಯವರು ನಮಗೆ ಬೀಗ ಹಸ್ತಾಂತರಿಸಿಲ್ಲ’ ಎಂದು ಉಪ ನೋಂದಣಾಧಿಕಾರಿ ನಾಗೇಂದ್ರಪ್ಪ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-25-1209542493

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.