ಹೂವಿನಹಡಗಲಿ: ತಾಲ್ಲೂಕಿನ ಅಂಗವಿಕಲ ಫಲಾನುಭವಿಗಳಿಗೆ ವಿತರಣೆಯಾಗಬೇಕಿರುವ 14 ತ್ರಿಚಕ್ರ ವಾಹನಗಳು ವಿಜಯನಗರ ಜಿಲ್ಲಾ ಒಳ ಕ್ರೀಡಾಂಗಣದಲ್ಲೇ ತುಕ್ಕು ಹಿಡಿಯುತ್ತಿವೆ, ಬಳಕೆಗೆ ಮುನ್ನವೇ ಹಾಳಾಗುತ್ತಿರುವ ಬಗ್ಗೆ ಅಂಗವಿಕಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2024– 25ನೇ ಸಾಲಿನ ಸಂಸದರ ಅನುದಾನದಲ್ಲಿ ವಿಜಯನಗರ ಜಿಲ್ಲೆಗೆ 49 ತ್ರಿಚಕ್ರ ವಾಹನ ಖರೀದಿಸಲಾಗಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳಿಗೆ ವಾಹನಗಳನ್ನು ವಿತರಿಸಿ, ಹೂವಿನಹಡಗಲಿ ತಾಲ್ಲೂಕಿಗೆ ಹಂಚಿಕೆಯಾಗಿರುವ 14 ತ್ರಿಚಕ್ರ ವಾಹನಗಳನ್ನು ಕೆಲ ತಿಂಗಳಿಂದ ಜಿಲ್ಲಾ ಒಳ ಕ್ರೀಡಾಂಗಣದ ಬಯಲಲ್ಲಿ ನಿಲ್ಲಿಸಲಾಗಿದೆ. ಬಿಸಿಲು, ಗಾಳಿ, ಮಳೆಯಲ್ಲಿ ನಿಂತಿರುವ ಈ ವಾಹನಗಳು ತುಕ್ಕು ಹಿಡಿಯಲಾರಂಭಿಸಿದ್ದು, ಫಲಾನುಭವಿಗಳು ಮಾತ್ರ ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ.

‘ಫಲಾನುಭವಿಗಳ ಆಯ್ಕೆಯಲ್ಲಿ ನಿಯಮಗಳನ್ನು ಪಾಲಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಹಿಂದೆ ಸೌಲಭ್ಯ ಪಡೆದವರನ್ನೇ ಮತ್ತೆ ಆಯ್ಕೆ ಮಾಡಿರುವುದು, ವಾಹನ ಚಾಲನೆ ಮಾಡಲಾಗದ ಅಂಧರು, ಕೈ ಇಲ್ಲದವರನ್ನು ಆಯ್ಕೆ ಮಾಡಲಾಗಿದೆ ಎಂದು ಕೆಲವರು ಆಕ್ಷೇಪಿಸಿರುವುದು ವಿತರಣೆಗೆ ಅಡ್ಡಿಯಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ ರಾಜಕೀಯ ಬೆರೆತಿರುವುದರಿಂದ ನೈಜ ಫಲಾನುಭವಿಗಳಿಗೆ ಸೌಲಭ್ಯ ದಕ್ಕುತ್ತಿಲ್ಲ’ ಎಂದು ಅಂಗವಿಕಲರು ದೂರಿದ್ದಾರೆ.

‘ತಿಂಗಳುಗಟ್ಟಲೇ ಮಳೆ, ಬಿಸಿಲಲ್ಲಿ ನಿಲ್ಲಿಸಿರುವ ತ್ರಿಚಕ್ರ ವಾಹನಗಳು ಹಾಳಾಗಿರುವ ಸಾಧ್ಯತೆಗಳಿವೆ. ಇವುಗಳನ್ನು ಪರೀಕ್ಷೆಗೆ ಒಳಪಡಿಸಿ ಸುಸ್ಥಿತಿಯ ವಾಹನಗಳನ್ನು ವಿತರಿಸಬೇಕು. ಸಂಸದ ಈ.ತುಕಾರಾಂ, ಶಾಸಕ ಕೃಷ್ಣನಾಯ್ಕ ಅವರು ಅಂಗವಿಕಲ ಫಲಾನುಭವಿಗಳಿಗೆ ವಾಹನ ವಿತರಿಸಬೇಕು’ ಎಂದು ಅಂಗವಿಕಲರ ಸಂಘದ ಅಧ್ಯಕ್ಷ ಎಸ್.ಚಂದ್ರಪ್ಪ ತಳಕಲ್ಲು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-25-1191533516

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.