ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ ಬಳಿ ತುಮಕೂರಿನ ಕುಟುಂಬ ದೋಚಿದ ಕಳ್ಳರು

Published 8 ಜೂನ್ 2023, 13:46 IST
Last Updated 8 ಜೂನ್ 2023, 13:46 IST
ಅಕ್ಷರ ಗಾತ್ರ

ಮರಿಯಮ್ಮನಹಳ್ಳಿ (ಹೊಸಪೇಟೆ): ಸಮೀಪದ ರಾಷ್ಟ್ರೀಯ ಹೆದ್ದಾರಿ-50ರ ಬಳಿಯ ಗುಂಡಾ ಸಸ್ಯೋದ್ಯಾನದ (ಗುಂಡಾ ಫಾರೆಸ್ಟ್) ಪಾರ್ಕಿಂಗ್ ಬಳಿ ಬುಧವಾರ ಬೆಳಗಿನ ಜಾವ ಕಳ್ಳರ ಗುಂಪೊಂದು ಕಾರು ಪಾರ್ಕಿಂಗ್ ಮಾಡಿ ಮಲಗಿದ್ದವರ ಬಳಿಯಿದ್ದ ನಗದು, ಚಿನ್ನದ ಆಭರಣ ಹಾಗೂ ಮೊಬೈಲುಗಳು ಸೇರಿದಂತೆ ಒಟ್ಟು ₹ 3 ಲಕ್ಷಕ್ಕೂ ಅಧಿಕ ಮೌಲ್ಯದ ಸಾಮಗ್ರಿಗಳನ್ನು ದೋಚಿದ್ದಾರೆ.

ತುಮಕೂರಿನ ಮಹಮ್ಮದ್ ಸಾದಿಕ್ ಪಾಷಾ(38) ಅವರು ಕುಟುಂಬ ಸಮೇತ ರಾತ್ರಿ ಕಾರಿನಲ್ಲಿ ಗಂಗಾವತಿಗೆ ಮದುವೆಗೆ ಹೊರಟಿದ್ದರು. ಈ ಸಂದರ್ಭದಲ್ಲಿ ಬೆಳಗಿನ ಜಾವ ವಿಶ್ರಾಂತಿ ಪಡೆಯಲು ಗುಂಡಾ ಸಸ್ಯೋದ್ಯಾನ ಬಳಿ ಕೆಲಹೊತ್ತು ಕಾರು ನಿಲ್ಲಿಸಿ ನಾಲ್ವರು ಕೆಳಗಡೆ ಮಲಗಿದ್ದು, ಉಳಿದವರು ಕಾರಿನಲ್ಲಿ ಮಲಗಿದ್ದರು. 

ಈ ಸಮಯದಲ್ಲಿ ಕಳ್ಳರು ಮಲಗಿದ್ದವರ ಬಳಿ ಇದ್ದ ನಗದು ₹ 6 ಸಾವಿರ ಸೇರಿದಂತೆ ಪರ್ಸ್ ನಲ್ಲಿದ್ದ ₹ 2.80ಲಕ್ಷ ಮೌಲ್ಯದ 80ಗ್ರಾಂ ಚಿನ್ನದ ಆಭರಣ ಹಾಗೂ ₹15ಸಾವಿರ ಮೌಲ್ಯದ 3 ಮೊಬೈಲುಗಳನ್ನು ದೋಚಿಕೊಂಡು ಹೋಗಿದ್ದಾರೆ.

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

undefined undefined

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT