ಹೊಸಪೇಟೆ: ಆಟೊ ಗ್ಯಾಸ್ ದರವನ್ನು ಏಕಾಏಕಿ ಲೀಟರ್ಗೆ ₹15 ಏರಿಕೆ ಮಾಡಿದ ಗೋ ಗ್ಯಾಸ್ ಕಂಪನಿಯ ನಿರ್ಧಾರ ವಿರುದ್ಧ ಆಟೊ ಚಾಲಕರ ಸಂಘಟನೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ತಕ್ಷಣ ಹೆಚ್ಚಿಸಿದ ದರವನ್ನು ವಾಪಸ್ ಪಡೆದ ಪ್ರಸಂಗ ಇಲ್ಲಿ ಜರುಗಿದೆ.

ಟಿ.ಬಿ.ಡ್ಯಾಂ ರಸ್ತೆಯಲ್ಲಿರುವ ಗೋ ಗ್ಯಾಸ್ ಕಂಪನಿಯ ಬಂಕ್ನಲ್ಲಿ ಶುಕ್ರವಾರ ₹84.95 ದರ ಇತ್ತು. ಅದನ್ನು ಏಕಾಏಕಿ ₹99.95ಕ್ಕೆ ಹೆಚ್ಚಿಸಲಾಗಿತ್ತು. ಇದನ್ನು ವಿರೋಧಿಸಿ ಸಿಐಟಿಯು ನೇತೃತ್ವದ ಫೆಡರೇಷನ್ ಆಫ್ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ನವರು ಶನಿವಾರ ಹೋರಾಟ ನಡೆಸಲು ನಿರ್ಧರಿಸಿದ್ದರು. ತಕ್ಷಣ ಮಧ್ಯಪ್ರವೇಶಿಸಿದ ಆಹಾರ ಇಲಾಖೆ ಉಪನಿರ್ದೇಶಕ ರಿಯಾಜ್, ಡಿವೈಎಸ್ಪಿ ಟಿ.ಮಂಜುನಾಥ್, ತಹಶೀಲ್ದಾರ್ ಅವರು ಗ್ಯಾಸ್ ಬಂಕ್ ಮ್ಯಾನೇಜರ್ ಜತೆಗೆ ಮಾತುಕತೆ ನಡೆಸಿ ಹಳೇ ದರದಲ್ಲೇ ಗ್ಯಾಸ್ ವಿತರಿಸಲು ಸೂಚಿಸಿದರು. ಅದಕ್ಕೆ ಒಪ್ಪಿದ ಕಾರಣ ಪ್ರತಿಭಟನೆ ಹಿಂಪಡೆಯಲಾಯಿತು.

ಒಂದೇ ನಗರದಲ್ಲಿ ಎರಡೆರಡು ಆಟೋ ಇಂಧನ ದರ ಇರಲು ಸಾಧ್ಯವಿಲ್ಲ. ಪಟ್ಟಣದಲ್ಲಿ ಅಂತಹ ಯತ್ನ ನಡೆಸಿದ್ದಕ್ಕೆ ನಾವು ಪ್ರತಿಭಟನೆಯ ಹಾದಿ ಹಿಡಿದಿದ್ದೆವು. ಮುಂದೆಯೂ ಏಕಾಏಕಿ, ತಮಗೆ ಇಷ್ಟ ಬಂದಂತೆ ದರ ಏರಿಕೆ ಮಾಡಿದ್ದೇ ಆದಲ್ಲಿ ಪ್ರತಿಭಟನೆ ನಡೆಸುವುದು ನಿಶ್ಚಿತ ಎಂದು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಕೆ.ಎಂ.ಸಂತೋಷ್ ಕುಮಾರ್ ಎಚ್ಚರಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-25-983161150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.