ಹೊಸಪೇಟೆ (ವಿಜಯನಗರ): ನಗರದ ಮೇನ್ಬಜಾರ್ನಿಂದ ಬಳ್ಳಾರಿ ರಸ್ತೆ ಅಭಿವೃದ್ಧಿಗೊಳಿಸುವ ಸಂದರ್ಭದಲ್ಲಿ ತೆರವುಗೊಂಡಿದ್ದ ಪ್ರಾಚೀನ ಕಾಲದ ಕಾಳಿಕಾ ದೇವಿ ದೇವಸ್ಥಾನವನ್ನು ಬಳ್ಳಾರಿ ರಸ್ತೆಯ ಕಂಚುಗಾರಪೇಟೆಯಲ್ಲಿ ಪುನರ್ ನಿರ್ಮಾಣ ಮಾಡಲಾಗಿದ್ದು, ಭಾನುವಾರ ಮೂರ್ತಿಗಳಿಗೆ ಪ್ರಾಣಪ್ರತಿಷ್ಠೆ ಹಾಗೂ ಮಹಾಕುಂಭಾಭಿಷೇಕ ನಡೆಯಿತು.

ಕಳೆದ 15 ವರ್ಷಗಳಿಂದ ಕಾಳಿಕಾದೇವಿಯನ್ನು ಬಾಲಾಲಯವೊಂದರಲ್ಲಿ ಪೂಜಿಸಲಾಗುತ್ತಿತ್ತು. ದೇವಸ್ಥಾನದ ನವೀಕರಣದೊಂದಿಗೆ ದೇವಿಯ ಅಜ್ಞಾತವಾಸ ಕೊನೆಗೊಂಡಿದೆ.

ಸೋಮವಾರ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಆನೆಗುಂದಿ ಮಹಾಸಂಸ್ಥಾನ ಮಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಹೊಸಪೇಟೆ ನಗರದ ಏಕೈಕ ಕಾಳಿಕಾ ದೇವಸ್ಥಾನ ಪುನರ್ನವೀಕರಣಗೊಂಡು ಪೂಜೆಗೊಳ್ಳುತ್ತಿರುವುದು ಸಂತಸದ ವಿಚಾರ, ಸಮುದಾಯದವರು ಹಾಗೂ ಊರವರ ಒಗ್ಗಟ್ಟಿನಿಂದ ಈ ಕೆಲಸ ಸಾಧ್ಯವಾಗಿದೆ ಎಂದರು.

ನೂತನ ಗರ್ಭಗುಡಿಯ ಆಲಯ ಸಮರ್ಪಣೆ, ಕಾಳಿಕಾದೇವಿ ಕಮಟೇಶ್ವರ ದೇವರ ಹಾಗೂ ಪರಿಹಾರ ದೇವರ ಅಷ್ಟಬಂಧ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ನವಚಂಡಿ ಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏಪ್ರಿಲ್ 30ರಿಂದ ಆರಂಭವಾಗಿದ್ದವು. 30ರಂದು ಮೂರ್ತಿಗಳ ಭವ್ಯ ಮೆರವಣಿಗೆ ನಗರದಲ್ಲಿ ನಡೆದಿತ್ತು.

ನಾಗಮೂರ್ತಿಯೇಂದ್ರ ಸ್ವಾಮಿಗಳು, ನಾಗಲಿಂಗ ಸ್ವಾಮಿಗಳು, ಗುರುನಾಥ ಸ್ವಾಮಿಗಳ ಸಾನಿಧ್ಯದಲ್ಲಿ, ತಡಚೆಲ್ಲಿ ವೀರ ರಾಘವ ಶರ್ಮಾ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು.

ದೇವಸ್ಥಾನಕ್ಕೆ ಒಟ್ಟು ₹1.50 ಕೋಟಿ ವೆಚ್ಚವಾಗಿದ್ದು, ಈ ಪೈಕಿ ₹35 ಲಕ್ಷವನ್ನು ಶಾಸಕ ಎಚ್.ಆರ್.ಗವಿಯಪ್ಪ ಅವರು ದೇಣಿಗೆಯಾಗಿ ನೀಡಿದ್ದರು. ಭಾನುವಾರ ದೇವಸ್ಥಾನಕ್ಕೆ ಭೇಟಿ ನೀಡಿದ ಅವರನ್ನು ಸನ್ಮಾನಿಸಲಾಯಿತು.

ವಿಶ್ವಕರ್ಮ ಸಮಾಜದ ಜಿಲ್ಲಾ ಅಧ್ಯಕ್ಷ ಕೆ.ವಿ.ಪತ್ತಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ತಾಲ್ಲೂಕು ಉಪಾಧ್ಯಕ್ಷ ವಿ. ಶಂಕರಾಚಾರ್ಯ, ಪ್ರಧಾನ ಕಾರ್ಯದರ್ಶಿ ಸುರೇಶ್, ಪಟ್ಟಣ ಪೊಲೀಸ್ ಠಾಣೆ ಪಿಎಸ್ಐ ರಾಜಶೇಖರ್, ಕುಬೇರಚಾರ್ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-25-1127171669

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.