ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ₹80 ಕೋಟಿ, ಕಮಲಾಪುರ ಪುರಸಭೆ ವ್ಯಾಪ್ತಿಯಲ್ಲಿ ₹15 ಕೋಟಿ ಹಾಗೂ ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ₹20 ಕೋಟಿಯ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತಂದಿರುವ ಶಾಸಕ ಎಚ್.ಆರ್.ಗವಿಯಪ್ಪ ಅವರು ಶುಕ್ರವಾರ ಸಾರ್ವಜನಿಕರಿಗೆ ಅದರ ವಿವರ ನೀಡಿದರು.

ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು, ಅಧಿಕಾರಿಗಳು, ಗುತ್ತಿಗೆದಾರರ ಸಭೆ ಕರೆದ ಶಾಸಕರು, ಪ್ರತಿಯೊಂದು ವಾರ್ಡ್ನಲ್ಲಿ ನಡೆಯುತ್ತಿರುವ ಕಾಮಗಾರಿಗಳ ವಿವರಗಳನ್ನು ಆಯಾ ಭಾಗದ ಜನರಿಗೆ, ಜನಪ್ರತಿನಿಧಿಗಳಿಗೆ ನೀಡಿದರು.

ಲಿಖಿತವಾಗಿ ವಿವರ ನೀಡಿದ ಶಾಸಕರು, ಬಳಿಕ ಅವರಿಂದ ಸ್ಥಳದಲ್ಲೇ ಪ್ರತಿಕ್ರಿಯೆ ಕೇಳಿದರು. ಕೆಲವರು ವಿವರ ನೋಡದೆ ಪ್ರತಿಕ್ರಿಯೆ ನೀಡಲು ಮುಂದಾದಾಗ ಗರಂ ಆದ ಶಾಸಕರು, ಸರಿಯಾಗಿ ಓದಿ, ವಿಮರ್ಶೆ ಮಾಡಿ ಪ್ರತಿಕ್ರಿಯೆ ನೀಡಲು ಸೂಚಿಸಿದರು. ಹೀಗಾಗಿ ಬಳಿಕ ಎಲ್ಲರೂ ಪ್ರತಿಯೊಂದು ಕಾಮಗಾರಿಯ ಕುರಿತು ಶಾಸಕರಿಗೆ ಸಲಹೆ, ಅಭಿಪ್ರಾಯ ವ್ಯಕ್ತಪಡಿಸಿದರು.

ಅಪಸ್ವರದ ನಡುವೆಯೂ ಯಶಸ್ವಿ ಸಭೆ: ಶಾಸಕರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳಿಗೆ ಬರುತ್ತಿಲ್ಲ, ಪಕ್ಷದ ಸಂಘಟನೆಯಲ್ಲಿ ಅವರ ಪಾತ್ರ ಬಹಳ ಕಡಿಮೆ ಇದೆ ಎಂಬೆಲ್ಲ ಸ್ವಪಕ್ಷೀಯರ ಆರೋಪಗಳ ನಡುವೆಯೂ ಗವಿಯಪ್ಪ ಅವರು ಯಶಸ್ವಿಯಾಗಿ ಸಭೆ ನಡೆಸಿದರು.

ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಎ.ಶಿವಕುಮಾರ್, ಜಿಲ್ಲಾ ಯೋಜನಾ ಕೋಶದ ಯೋಜನಾ ನಿರ್ದೇಶಕ ಮನೋಹರ್, ತಾಲ್ಲೂಕು ಪಂಚಾಯಿತಿ ಇಒ ಆಲಂ ಬಾಷಾ, ಲೋಕೋಪಯೋಗಿ ಇಲಾಖೆಯ ಎಇಇ ರವಿ ನಾಯ್ಕ್, ಕಾಮಗಾರಿಗಳ ಗುಣಮಟ್ಟ ಮೌಲ್ಯಮಾಪನ ಮಾಡುವ ವಿಭಾಗದ ಸುಧಾಕರ್ ಇತರರು ಶಾಸಕರಿಗೆ ಸಾಥ್ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-25-2056446776

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.