ಹೊಸಪೇಟೆ: ನಗರದ ವಿವಿಧ ಮಸೀದಿಗಳ ಸಮೀಪ ಶುಕ್ರವಾರ ಜನಗಣತಿ ಕುರಿತಂತೆ ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್ ನೇತೃತ್ವದಲ್ಲಿ ಕರಪತ್ರ ಜಾಗೃತಿ ಅಭಿಯಾನ ನಡೆಯಿತು.

‘ಏ.15ರವರೆಗೆ ಸ್ವಯಂ ನೋಂದಣಿಗೆ ಅವಕಾಶ ಇದ್ದು, 16ರಿಂದ ಮೇ 15ರವರೆಗೆ ಗಣತಿದಾರರು ಮನೆ ಮನೆಗೆ ಬರಲಿದ್ದು, ಸಾರ್ವಜನಿಕರು ಸರಿಯಾದ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದರು.

ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್.ಎಫ್. ಮೊಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ‘ಜನಗಣತಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಸಹಕರಿಸುವುದು ಅಗತ್ಯವಾಗಿದ್ದು, ಸರಿಯಾದ ಮಾಹಿತಿಯನ್ನು ನೀಡಬೇಕು. ಜನನಗಣತಿ ಮೂಲಕ ಸರ್ಕಾರವು ಜನಸಂಖ್ಯೆ, ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುತ್ತದೆ’ ಎಂದರು.

ನಗರಸಭೆ ಸದಸ್ಯ ಖದೀರ್, ಅಂಜುಮನ್ ಕಮಿಟಿ ಮಾಜಿ ಪದಾಧಿಕಾರಿಗಳಾದ ಬಿ. ಅನ್ಸರ್ ಬಾಷಾ, ಫೀರೋಜ್ ಖಾನ್, ಅಬೂಬ್ ಕಾರ್, ಅಫೀಸ್ ಸಾಬ್, ಡಾ.ದರ್ವೇಶ, ಕೆ. ಮೋಸೀನ್, ಗುಲಾಮ್ ರಸೂಲ್, ಸಮುದಾಯದ ಮುಖಂಡರಾದ ಗಫೂರ್ ಖಾನ್, ಅತಾಯ್ ರಸೂಲ್, ಮುಷೀರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-25-1220419311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.