ಭಾನುವಾರ, ಸೆಪ್ಟೆಂಬರ್ 25, 2022
30 °C
ತಪ್ಪಿಸಿಕೊಂಡ ಇಬ್ಬರು ಪೊಲೀಸರು

ಹೊಸಪೇಟೆ: ಗಣೇಶ ವಿಸರ್ಜನೆ ವೇಳೆ ಪೊಲೀಸರ ಮೇಲೆ ಹಲ್ಲೆ, 9 ಜನ ನ್ಯಾಯಾಂಗ ಬಂಧನಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ ಜಿಲ್ಲೆ): ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಾಗಲಾಪುರ ತಾಂಡಾದಲ್ಲಿ ಶುಕ್ರವಾರ ರಾತ್ರಿ ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಒಂಬತ್ತು ಜನರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಗದುಗಿನ ಇಬ್ಬರು ಪೊಲೀಸರು ತಪ್ಪಿಸಿಕೊಂಡಿದ್ದಾರೆ.

‘ಮೂರನೇ ದಿನದ ಗಣೇಶ ವಿಸರ್ಜನೆಯ ವೇಳೆ ವಿನಾಯಕ ಮಿತ್ರ ಮಂಡಳಿಯವರು ಡಿ.ಜೆ. ಬಳಸಿದ್ದಾರೆ. ಮೆರವಣಿಗೆ ನಂತರ ಪೊಲೀಸರು ಕಾನೂನು ಕ್ರಮಕ್ಕೆ ಮುಂದಾದಾಗ ಮಂಡಳಿಯವರು ಹಾಗೂ ಕೆಲ ಗ್ರಾಮಸ್ಥರು ಹಂಪಸಾಗರ ಉಪಠಾಣೆಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಠಾಣೆಯ ಸಿಬ್ಬಂದಿ ರಾಮಾಂಜಿನಿ ಹಾಗೂ ಸಿದ್ದೇಶ್‌ ಎಂಬುವರ ಮೇಲೆ ಹಲ್ಲೆ ನಡೆಸಿದ್ದಾರೆ. ರಾಮಾಂಜಿನಿ ಅವರಿಗೆ ಗಾಯಗಳಾಗಿವೆ. ಕೃತ್ಯದಲ್ಲಿ ಭಾಗಿಯಾದ ಗದಗ ಜಿಲ್ಲೆಯ ಪೊಲೀಸ್‌ ಸಿಬ್ಬಂದಿ ಮಂಜು ನಾಯ್ಕ, ಪರಶು ನಾಯ್ಕ ತಪ್ಪಿಸಿಕೊಂಡಿದ್ದಾರೆ. ಇಬ್ಬರು ರೈಲ್ವೆ ಪೊಲೀಸರಾ ಅಥವಾ ನಮ್ಮ ಇಲಾಖೆಯ ಪೊಲೀಸರೇ ಎನ್ನುವುದು ಖಚಿತವಾಗಬೇಕಿದೆ. 2 ಟ್ರ್ಯಾಕ್ಟರ್‌, ಡಿ.ಜೆ ವಶಪಡಿಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ತಿಳಿಸಿದ್ದಾರೆ.

ತಂಬ್ರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು