ಹೊಸಪೇಟೆ (ವಿಜಯನಗರ): ಹಂಪಿಯಲ್ಲಿ ಸ್ಚಚ್ಛತಾ ಕಾರ್ಯಗಳಿಗೆ ಸೂಕ್ತ ಅನುದಾನ ಒದಗಿಸಿಕೊಡಬೇಕು ಹಾಗೂ ಕಳೆದ 25 ವರ್ಷಗಳಿಂದಲೂ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನಿರಂತರ ಕೆಲಸ ನೀಡಬೇಕು ಎಂದು ಆಗ್ರಹಿಸಿ ಸಿಐಟಿಯು ಸಂಘಟನೆಗೆ ಒಳಪಟ್ಟ ಕರ್ನಾಟಕ ರಾಜ್ಯ ಸರ್ಕಾರಿ ಖಾಯಂಮೇತರ ನೌಕರರ ಒಕ್ಕೂಟ ವತಿಯಿಂದ ಶುಕ್ರವಾರ ಇಲ್ಲಿ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಸ್ವಚ್ಛತಾ ಕಾರ್ಮಿಕರ ಸಹಿತ ಪ್ರತಿಭಟನೆ ನಡೆಸಿದ ಸಂಘಟನೆಯ ಪದಾಧಿಕಾರಿಗಳು, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಒಕ್ಕೂಟದ ಜಿಲ್ಲಾ ಸಹ ಸಂಚಾಲಕ ಕೆ.ಎಂ.ಸಂತೋಷ್ ಕುಮಾರ್ ಮಾತನಾಡಿ, ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ (ಹವಾಮ) ಅಡಿಯಲ್ಲಿ ಹೊರಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿರುವವರನ್ನು ಕೆಲಸ ನೀಡದೆ ಸತಾಯಿಸುವುದು ಸರಿಯಲ್ಲ. ವಿಶ್ವ ಪಾರಂಪರಿಕ ತಾಣ ಸದಾ ಸ್ವಚ್ಛವಾಗಿಯೇ ಇರಬೇಕಿದ್ದು, ಈ ಕಾರ್ಮಿಕರಿಗೆ ವರ್ಷದುದ್ದಕ್ಕೂ ಕೆಲಸ ಇರುವಂತೆ ನೋಡಿಕೊಳ್ಳಬೇಕು, ಅದಕ್ಕಾಗಿ ಸೂಕ್ತ ಅನುದಾನದ ವ್ಯವಸ್ಥೆ ಮಾಡಬೇಕು ಎಂದರು.

ಈಚೆಗೆ ಇದೇ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಬಳಿಕ ಮೂರು ತಿಂಗಳ ಸಂಬಳ ಬಾಕಿಯ ಪೈಕಿ ಎರಡು ತಿಂಗಳ ಸಂಬಳ ಪಾವತಿಸಲಾಗಿದೆ. ಜನವರಿ ತಿಂಗಳ ಸಂಬಳ ಇನ್ನೂ ಕೊಟ್ಟಿಲ್ಲ. ಆದನ್ನು ನೀಡಬೇಕು ಹಾಗೂ ಕಾಯಂ ಆಗಿ ಕೆಲಸ ಇರುವಂತೆ ವ್ಯವಸ್ಥೆ ಮಾಡಬೇಕು. ತಪ್ಪಿದಲ್ಲಿ ಹವಾಮ ಕಚೇರಿ ಮುಂಭಾಗ ಧರಣಿ ಸತ್ಯಾಗ್ರಹ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಮುಖಂಡರಾದ ಕೆ.ಎಂ.ಸಪ್ನ ಮಾತನಾಡಿ, ಹಂಪಿಯ ಪರಿಸರವನ್ನು ಸ್ವಚ್ಛವಾಗಿಡುವ ಅಗತ್ಯ ಇದ್ದು, ಅಲ್ಲಿನ ಕಾರ್ಮಿಕರಿಗೆ ಆಗಾಗ ಕೆಲಸ ಇಲ್ಲದಂತೆ ಮಾಡಿ ಅವರ ಜೀವನದ ಭದ್ರತೆಯನ್ನು ಕಸಿಯಬಾರದು ಹಾಗೂ ಹಂಪಿಯನ್ನು ಕಸದ ಕೊಂಪೆಯಾಗಿಸುವುದಕ್ಕೆ ಅವಕಾಶ ನೀಡಬಾರದು ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-25-682103368

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.