ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ ಧರಿಸುವಂತೆ ಪೊಲೀಸರು ವ್ಯಾಪಕ ಪ್ರಚಾರ ಅಭಿಯಾನ ಆರಂಭಿಸಿದ್ದು, ನಗರದಲ್ಲಿ ಶನಿವಾರ ಹತ್ತಾರು ಕಡೆಗಳಲ್ಲಿ ಬ್ಯಾರಿಕೇಡ್ ಹಾಕಿ, ಹೆಲ್ಮೆಟ್ ಜಾಗೃತಿ ಮೂಡಿಸಿದರು.

ಹೆಲ್ಮೆಟ್ ತುಂಬಿದ್ದ ಬಾಕ್ಸ್ಗಳು ಸ್ಥಳದಲ್ಲೇ ಇದ್ದವು. ಹೆಲ್ಮೆಟ್ ಬೇಕಿದ್ದವರಿಗೆ ₹500ಕ್ಕೆ ಹೊಸ ಹೆಲ್ಮೆಟ್ ಕೊಡಿಸಿದರು. ಮನೆಯಲ್ಲಿದೆ ಎಂದವರಿಗೆ ಮನೆಗೆ ಹೋಗಿ ಹೆಲ್ಮೆಟ್ ತೆಗೆದುಕೊಂಡು ಬಂದು ವಾಹನ ಕೊಂಡೊಯ್ಯಿರಿ ಎಂದು ತಾಕೀತು ಮಾಡಿದರು.

‘ದ್ವಿಚಕ್ರ ವಾಹನ ಅಪಘಾತಗಳಲ್ಲಿ ಹೆಲ್ಮೆಟ್ ಧರಿಸದವರೇ ಹೆಚ್ಚು ಸಾವು, ನೋವು ಕಾಣುತ್ತಿದ್ದಾರೆ. ಹೀಗಾಗಿ ದ್ವಿಚಕ್ರ ವಾಹನ ಸವಾರಿ ಮಾಡುವವರು ಮಾತ್ರವಲ್ಲ, ಹಿಂಬದಿಯಲ್ಲಿ ಕುಳಿತುಕೊಳ್ಳುವವರು ಸಹ ಹೆಲ್ಮೆಟ್ ಧರಿಸಬೇಕು. ಈ ಮೊದಲಿನಿಂದಲೂ ನಾವು ಜಾಗೃತಿ ಮೂಡಿಸುತ್ತಿದ್ದೆವು, ಇದೀಗ ಅಭಿಯಾನ ಬಿರುಸುಗೊಂಡಿದೆ ಅಷ್ಟೇ, ಸದ್ಯ ದಂಡ ಹಾಕುತ್ತಿಲ್ಲ, 15 ದಿನದ ಬಳಿಕ ದಂಡ ವಸೂಲಿ ಆರಂಭವಾಗಬಹುದು’ ಎಂದು ಎಸ್ಪಿ ಎಸ್.ಜಾಹ್ನವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿರು ಬಿಸಿಲಿನಲ್ಲಿ ಹೆಲ್ಮೆಟ್ ಕಡ್ಡಾಯ ಮಾಡುವುದು ಸರಿಯೇ?’ ಎಂಬ ಪ್ರಶ್ನೆಗೆ, ‘ಮಂಗಳೂರಿನಂತಹ ಅತಿಯಾದ ಬಿಸಿಲು, ಬೆವರು ಸುರಿಯುವ ನಗರಗಳಲ್ಲಿ ಸಹ ಹೆಲ್ಮೆಟ್ ಕಡ್ಡಾಯ ಇದೆ, ಅಲ್ಲಿ ಪ್ರತಿರೋಧ ಮಾಡದೆ ಸಹಕರಿಸುತ್ತಿದ್ದಾರೆ, ನಮ್ಮಲ್ಲೂ ಕಟ್ಟುನಿಟ್ಟಾಗಿ ಜಾರಿಗೆ ತರಲೇಬೇಕಾಗಿದೆ’ ಎಂದು ಸಂಚಾರ ಠಾಣೆ ಇನ್ಸ್ಪೆಕ್ಟರ್ ಹುಲುಗಪ್ಪ ಉತ್ತರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260412-25-1637972224

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.