ಹೊಸಪೇಟೆ (ವಿಜಯನಗರ): ತುಂಗ ಭದ್ರಾ ಅಣೆಕಟ್ಟೆ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶುಕ್ರವಾರ ಟ್ರ್ಯಾಕ್ಟರ್ಗೆ ಟ್ಯಾಂಕರ್ ಡಿಕ್ಕಿ ಹೊಡೆದುದರಿಂದ ಹೆದ್ದಾರಿಯಲ್ಲಿ ಮೈಲುದ್ದಕ್ಕೆ ಸಂಚಾರ ದಟ್ಟಣೆ ಉಂಟಾಯಿತು. ಸಂಚಾರವನ್ನು ಸಹಜ ಸ್ಥಿತಿಗೆ ತೆರಲು ಪೊಲೀಸರು ಹರಸಾಹಸ ಪಟ್ಟರು.

ಕೂಡ್ಲಿಗಿ ಕಡೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ನ ಟ್ರೇಲರ್ನಲ್ಲಿ 16ಕ್ಕೂ ಅಧಿಕ ಮಂದಿ ಕುಳಿತಿದ್ದರು. ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಹೆದ್ದಾರಿ ಬದಿಯ ತಡೆಬೇಲಿ ಮುರಿದುಕೊಂಡು ಟ್ರ್ಯಾಕ್ಟರ್ ಸುಮಾರು 15 ಅಡಿ ಆಳದ ಕಂದಕಕ್ಕೆ ಉರುಳಿ ಬಿತ್ತು. ವಿಶೇಷವೆಂದರೆ ಇದು ತುಂಗಭದ್ರಾ ನದಿಯ ಒಂದು ಸೇತುವೆಯ ಆರಂಭದ ಸ್ಥಳವೂ ಆಗಿತ್ತು.

ಸಹಜವಾಗಿಯೇ ಹೆದ್ದಾರಿಯಲ್ಲಿ ಸಾಗುವ ಪ್ರತಿಯೊಂದು ವಾಹನ ಚಾಲಕರಿ ಗೆ ಇದು ಕುತೂಹಲದ ವಿಷಯವಾಗಿತ್ತು. ವಾಹನಗಳನ್ನು ಹೆದ್ದಾರಿ ಬದಿಯಲ್ಲೇ ನಿಲ್ಲಿಸಿ ಅಪಘಾತ ಸ್ಥಳವನ್ನು ನೋಡುವ ಕುತೂಹಲದಿಂದಾಗಿ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು.

ತೀವ್ರವಾಗಿ ಗಾಯಗೊಂಡವರನ್ನು ಕೊಪ್ಪಳಕ್ಕೆ ಕಳುಹಿಸಿಕೊಡ ಲಾಯಿತು. ಅಲ್ಪಸ್ವಲ್ಪ ಗಾಯಗೊಂಡವರನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಹಂತದಲ್ಲಿ ಹೆದ್ದಾರಿಯ ಎರಡೂ ಬದಿಯಲ್ಲಿ, ಸೇತುವೆಗಳ ಮೇಲೆ ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಸಂಚಾರ ಸುಗಮ ಸ್ಥಿತಿಗೆ ತರಲು ಅರ್ಧ ಗಂಟೆ ಪೊಲೀಸರು ಪರದಾಡಬೇಕಾಯಿತು.

ಈ ಹಂತದಲ್ಲೂ ಕೆಲವು ಸಣ್ಣಪುಟ್ಟ ಅಪಘಾತಗಳು ನಡೆದವು.

ಸಂಸದರ ಹೇಳಿಕೆ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ನಾಲ್ವರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಇ.ತುಕಾರಾಂ, ಹೆದ್ದಾರಿ ಬದಿಯಲ್ಲಿನ ಕೆಲವು ಡಾಬಾಗಳಲ್ಲಿ ಎರಡನೇ ದರ್ಜೆಯ ಮದ್ಯ ಮಾರಾಟ ಮಾಡುತ್ತಿರುವ ಆರೋಪ ಇದೆ, ಜತೆಗೆ ಹೆದ್ದಾರಿಯಲ್ಲಿ ಕೈಗೊಳ್ಳಬೇಕಾದ ಸುರಕ್ಷತೆಯ ಬಗ್ಗೆ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಅಗತ್ಯ ಇದೆ. ಹೀಗಾಗಿ ಶೀಘ್ರದಲ್ಲೇ ಈ ಬಗ್ಗೆ ಸಭೆ ನಡೆಸುವುದಾಗಿ ಹೇಳಿದರು.

ಏಳೆಂಟು ಕಡೆಗಳಲ್ಲಿ ಈ ನಿಟ್ಟಿನಲ್ಲಿ ಕಾಮಗಾರಿಗಳನ್ನು ಗುರುತಿಸಲಾಗಿದೆ. ಬಿಎಂಎಂ ಕಾರ್ಖಾನೆ ಎದುರಲ್ಲಿ ನಡೆಯುತ್ತಿರುವ ಕಾಮಗಾರಿ ಸಹ ಅದರಲ್ಲಿ ಒಂದು. ಹೆದ್ದಾರಿಗಳಲ್ಲಿರುವ ಸಂಕೇತ, ಅಪಘಾತ ವಲಯಗಳ ಕುರಿತು ಚಾಲಕರು ಇನ್ನಷ್ಟು ಜಾಗೃತೆ ವಹಿಸಬೇಕಾಗಿದೆ. ಅಪಘಾ ತಕ್ಕೆ ಕಾರಣನಾದ ಚಾಲಕ ಮದ್ಯ, ಮಾದಕವಸ್ತು ಸೇವಿಸಿದ್ದನೇ ಎಂಬುದು ವೈದ್ಯಕೀಯ ಪರೀಕ್ಷೆ ಬಳಿಕ ತಿಳಿಯಲಿದೆ ಎಂದು ಅವರು ಹೇಳಿದರು. ಐಜಿಪಿ ಪಿ.ಎಸ್.ಹರ್ಷ, ಡಿಸಿ ಕವಿತಾ ಎಸ್.ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ ಭೇಟಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-25-1439321979

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.