ಹೊಸಪೇಟೆ (ವಿಜಯನಗರ): ‘ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸನ್ನದುಗಳಿಗೆ ನಿಯಮಗಳನ್ನು ರೂಪಿಸಿ ಅಧಿಸೂಚನೆ ಹೊರಡಿಸಿದ್ದು, ಮೇ 9ರಿಂದ ದೇಶದ ಇಡೀ ಕಾರ್ಮಿಕರಿಗೆ ಕರಾಳ ದಿನ ಆರಂಭವಾದಂತಾಗಿದೆ. ಇದರ ವಿರುದ್ಧ ಈಗಲಾದರೂ ಸಂಘಟಿತ ಹೋರಾಟ ನಡೆಸದಿದ್ದರೆ ಪ್ರತಿಯೊಬ್ಬರಿಗೆ ಅಪಾಯ ತಪ್ಪಿದ್ದಲ್ಲ’ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ವರಲಕ್ಷ್ಮಿ ಎಚ್ಚರಿಸಿದರು.

ಇಲ್ಲಿ ಭಾನುವಾರ ಆರಂಭವಾದ ಅಖಿಲ ಭಾರತ ರಸ್ತೆ ಸಾರಿಗೆ ನೌಕರರ ಒಕ್ಕೂಟದ (ಎಐಆರ್ಟಿಡಬ್ಲ್ಯುಎಫ್) ವತಿಯಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ ಕಾರ್ಮಿಕರ ರಾಜ್ಯಮಟ್ಟದ ಸಂಘಟನಾ ಕಾರ್ಯಾಗಾರದ ಉದ್ಘಾಟನೆ ಸಮಯದಲ್ಲಿ ಮಾತನಾಡಿದರು.

‘ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಂದ ತಕ್ಷಣ ಕೇಂದ್ರವು ನಾಗಾಲೋಟದಲ್ಲಿ ಕಾರ್ಮಿಕರ ವಿಚಾರದಲ್ಲಿ ಬಂಡವಾಳಶಾಹಿಗಳನ್ನು ಓಲೈಸುವ ಕ್ರಮಕ್ಕೆ ಮುಂದಾಗಿದೆ. ಇದರ ವಿರುದ್ಧ ದೆಹಲಿಯಲ್ಲಿ ಎರಡು ದಿನದಲ್ಲಿ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು’ ಎಂದರು.

ಹೊಸ ನಿಯಮಗಳು ಹಲವು ಬಗೆಯಲ್ಲಿ ಕಾರ್ಮಿಕರಿಗೆ ಅವರ ಹಕ್ಕುಗಳನ್ನು ವಂಚಿಸಲಿವೆ. ಇಎಸ್ಐ, ಪಿಎಫ್ ಸೌಲಭ್ಯ ದೊರಕದಂತೆ ಮಾಡಲಿದೆ. ಕಾಯಂ ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳದಂತಹ ವಾತಾವರಣ ಸೃಷ್ಟಿಸಿದೆ. ಕಾರ್ಮಿಕ ಮುಖಂಡರಾದ ಆರ್.ಎಸ್. ಬಸವರಾಜ, ಬಿ.ವಿ. ರಾಘವೇಂದ್ರ, ರೇವಪ್ಪ, ಸಪ್ನ, ಕೆ.ಎಂ.ಸಂತೋಷ್ ಕುಮಾರ್, ಎ.ಕರುಣಾನಿಧಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-25-376904523

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.