ಹೊಸಪೇಟೆ (ವಿಜಯನಗರ): ಮೇ ದಿನವನ್ನು ಸ್ವದೇಶಿ ದಿನ ಎಂದು ತಪ್ಪು ಪ್ರಚಾರ ಮಾಡುವ ಮೂಲಕ ಕಾರ್ಮಿಕರ ಏಕತೆ ಒಡೆಯಲು ಕೆಲವು ಶಕ್ತಿಗಳು ಯತ್ನಿಸುತ್ತಿವೆ. ಜಾತಿ, ಧರ್ಮದ ಹೆಸರಿನಲ್ಲಿ ಕಾರ್ಮಿಕರನ್ನು ವಿಭಜಿಸುವ ಕುತಂತ್ರ ನಡೆಯುತ್ತಿದೆ. ಇದರ ಬಗ್ಗೆ ಎಚ್ಚರದಿಂದ ಇರಬೇಕು ಎಂದು ಕಾರ್ಮಿಕ ನಾಯಕ ಆರ್.ಭಾಸ್ಕರ ರೆಡ್ಡಿ ಹೇಳಿದರು.

ವಿಶ್ವ ಕಾರ್ಮಿಕ ದಿನದ ಪ್ರಯುಕ್ತ ಶುಕ್ರವಾರ ಇಲ್ಲಿನ ಶ್ರಮಿಕ ಭವನದ ಬಳಿ ಸಿಐಟಿಯು ಮತ್ತು ಇತರ ಹಲವು ಕಾರ್ಮಿಕ ಸಂಘಟನೆಗಳೊಂದಿಗೆ ಕಾರ್ಮಿಕ ದಿನ ಆಚರಿಸಿದ ವೇಳೆ ಅವರು ಈ ಎಚ್ಚರಿಕೆ ನೀಡಿದರು.

1886ರಲ್ಲಿ ಅಮೆರಿಕದಲ್ಲಿ ಕಾರ್ಮಿಕರ ಚಳವಳಿ ನಡೆದುದು ತಮಗೆ ಎಂಟು ಗಂಟೆಯಷ್ಟೇ ಕೆಲಸದ ಅವಧಿ ಇರಬೇಕು ಎಂಬುದಾಗಿತ್ತು. ಅದು ಬೃಹತ್ ರೂಪ ಪಡೆದು, ಇಡೀ ವಿಶ್ವದಲ್ಲಿ ಆ ನಿಯಮ ಬಹುತೇಕ ಜಾರಿಗೆ ಬರುವಂತಾಯಿತು. ಆದರೆ ಇಂದು ಕಾರ್ಪೋರೇಟ್ ಕಂಪನಿಗಳ ಒತ್ತಡಕ್ಕೆ ಮಣಿದು 8 ಗಂಟೆ ಬದಲಿಗೆ 12 ಗಂಟೆ, 16 ಗಂಟೆ ಕಾರ್ಮಿಕರನ್ನು ದುಡಿಸುವ ಹುನ್ನಾರ ನಡೆಯುತ್ತಿದೆ. ಇದನ್ನು ಎಲ್ಲ ಕಾರ್ಮಿಕರು ಒಗ್ಗಟ್ಟಿನಿಂದ ವಿರೋಧಿಸಬೇಕು ಎಂದರು.

ಎಲ್ಲಾ ವರ್ಗದ ಕಾರ್ಮಿಕರಿಗೆ ಮಾಸಿಕ ಸರಾಸರಿ ₹36,000 ವೈಜ್ಞಾನಿಕ ಕನಿಷ್ಠ ವೇತನ ನಿಗದಿಪಡಿಸಬೇಕು, ಕಾರ್ಮಿಕ ವಿರೋಧಿ 4 ಸಂಹಿತೆಗಳು ರದ್ದಾಗಬೇಕು, ಎಲ್ಲಾ ಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಯೋಜನೆಗಳು ಜಾರಿಯಾಗಬೇಕು ಎಂದು ಅವರು ಒತ್ತಾಯಿಸಿದರು.

ಸಂಚಾಲಕರಾದ ಕೆ.ಎಂ.ಸ್ವಪ್ನ, ಮುಖಂಡರಾದ ಎಂ.ಗೋಪಾಲ, ಎನ್.ಯಲ್ಲಾಲಿಂಗ, ಎಂ. ಜಂಬಯ್ಯ ನಾಯಕ, ಕೆ.ಎಂ.ಸಂತೋಷ್ ಕುಮಾರ್, ರಾಜೇಶ್, ನನ್ನು ಸಾಬ್ ಇತರರು ಇದ್ದರು.

ಬಳ್ಳಾರಿ: ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಅಂಗವಾಗಿ ಬಳ್ಳಾರಿ ನಗರದಲ್ಲಿ ಶುಕ್ರವಾರ ಎಐಯುಟಿಯುಸಿ ಸಂಘಟನೆಯ ವತಿಯಿಂದ ಬೃಹತ್ ಮೆರವಣಿಗೆ ಹಾಗೂ ಕಾರ್ಮಿಕ ಸಮಾ ವೇಶ ಹಮ್ಮಿಕೊಳ್ಳಲಾಗಿತ್ತು.

ಗಾಂಧಿ ಭವನದ ಒಳಕ್ರೀಡಾಂಗಣದಲ್ಲಿ ನಡೆದ ಸಭೆಯ ಆರಂಭದಲ್ಲಿ ಕಾರ್ಮಿಕ ಚಳವಳಿಯ ಪ್ರೇರಕ ಶಕ್ತಿ ಗಳಾದ ಕಾರ್ಲ್ ಮಾರ್ಕ್ಸ್ ಹಾಗೂ ಫೆಡ್ರಿಕ್ ಎಂಗೆಲ್ಸ್ ಅವರ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡಲಾಯಿತು. ನೂರಾರು ಕಾರ್ಮಿಕರು ಮೆರವಣಿಯುದ್ದಕ್ಕೂ ತಮ್ಮ ಹಕ್ಕುಗಳ ಪರ ಘೋಷಣೆಗಳನ್ನು ಕೂಗುತ್ತಾ ಸಾಗಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಕಾ. ಎ. ದೇವದಾಸ್ ಮಾತನಾಡಿದರು.ಜಂಟಿ ಕಾರ್ಯದರ್ಶಿ ಜಿ. ಸುರೇಶ್ ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮ ದಲ್ಲಿ ಪ್ರಮುಖರಾದ ಶರ್ಮಾಸ್, ಚೇತನ್ ಪ್ರಭು, ಪಾರ್ವತಮ್ಮ, ಸತೀಶ್ ಸೇರಿದಂತೆ ಅನೇಕ ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.

ಹಗರಿಬೊಮ್ಮನಹಳ್ಳಿ: ಕಾರ್ಮಿಕರ ಕಾನೂನುಗಳ ತಿದ್ದುಪಡಿಯಿಂದ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರ ಕುಟುಂಬಗಳು ಬೀದಿ ಪಾಲಾಗುತ್ತಿವೆ ಎಂದು ಎಂದು ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಆರ್.ಎಸ್.ಬಸವರಾಜ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ಸಿಐಟಿಯುನಿಂದ ಹಮ್ಮಿಕೊಂಡಿದ್ದ 141ನೇ ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ವೈಜ್ಞಾನಿಕವಾದ ಕನಿಷ್ಠ ವೇತನಕ್ಕಾಗಿ ಹಾಗೂ ಮೂಲಹಕ್ಕುಗಳನ್ನು ರಕ್ಷಿಸಲು ಹಲವಾರು ಹೋರಾಟದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ, ಯಾವಾಗಲೂ ಕಾರ್ಮಿಕ ವಲಯವನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದೆ ಕಾರ್ಮಿಕರ ಪರವಾಗಿ 29 ಕಾನೂನುಗಳು ಇದ್ದವು, ಕೇಂದ್ರ ಸರ್ಕಾರ ಮಾಡಿದ ತಿದ್ದುಪಡಿಯಿಂದ 4 ಕೋಡ್ಗಳನ್ನಾಗಿ ಮಾಡಿ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ. ಇದು ಪಕ್ಕಾ ಕಾರ್ಪೋರೇಟ್ ಕಂಪನಿಗಳ ಪರವಾಗಿದೆ ಎಂದರು

ಸಿಐಟಿಯು ತಾಲ್ಲೂಕು ಘಕದ ಅಧ್ಯಕ್ಷ ಎಸ್.ಜಗನ್ನಾಥ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಜ್ಯೋತೇಶ್ವರಿ, ಚರಂತೇಶ್, ರಫೀ ಅಶೋಕ್, ಶಿಶುನಾಳ ಶರೀಫ ವೇದಿಕೆಯ ಇರ್ಫಾನ್, ಬಿ.ಲಕ್ಷ್ಮಣ, ಸುರೇಶ್ ಇದ್ದರು.

ಮರಿಯಮ್ಮನಹಳ್ಳಿ: ಸಮೀಪದ ವ್ಯಾಸನ ಕೆರೆಯ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯ ಪದಾಧಿಕಾರಿಗಳು ಶುಕ್ರವಾರ ಕೇಕ್ ಕತ್ತರಿಸುವ ಮೂಲಕ ಕಾರ್ಮಿಕರ ದಿನ ಆಚರಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು, ಬೇಸಿಗೆಯ ಬಿಸಿಲ ಧಗೆ ಹೆಚ್ಚಿರುವುದರಿಂದ ಮನರೇಗಾ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ತಾಪದಿಂದ ಬಳಲು ವಂತಾಗಿದೆ. ಒಂದೆಡೆ ಮಳೆಯಿಲ್ಲದೆ ಭೂಮಿ ಗಟ್ಟಿಯಾಗಿರುವುದರಿಂದ ಅಳತೆ ಕೆಲಸ ಮಾಡಲು ಕಷ್ಟಪಡುವಂತಾಗಿದೆ. ಆದ್ದರಿಂದ ಮನರೇಗಾ ಕಾನೂನಿ ಅಡಿಯಲ್ಲಿ ಪ್ರತಿವರ್ಷ ಹೈದ್ರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಬಿಸಿಲು ಇರುವುದರಿಂದ ಶೇ 30ರಷ್ಟು ಕೆಲಸವನ್ನು ಕಡಿಮೆ ಮಾಡಲು ಆದೇಶ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಕುಶಣ್ಣ, ತಿಂದಪ್ಪ, ರಾಮಲಿ, ಭೀಮಪ್ಪ, ರಮೇಶ್, ವೆಂಕಟೇಶ್, ಲಕ್ಷ್ಮಿ, ನಬಿಸಾಬ್, ಯಲ್ಲಮ್ಮ, ಗಂಗಮ್ಮ, ಸುವರ್ಣ, ದೇವಕ್ಕೆ ಸೇರಿದಂತೆ ಇತರರಿದ್ದರು.

ಕಾರ್ಮಿಕರ ಒಗ್ಗಟ್ಟಿಗೆ ಪೆಟ್ಟು: ಹಾಲೇಶ್

ಹರಪನಹಳ್ಳಿ: ಜಾತಿ, ಧರ್ಮದ ಹೆಸರಿನಲ್ಲಿ ದೊಡ್ಡಸಂಖ್ಯೆಯಲ್ಲಿರುವ ಕಾರ್ಮಿಕರನ್ನು ಜಾತಿ, ಧರ್ಮದ ಹೆಸರಿನಲ್ಲಿ ಒಡೆಯಲಾಗಿದೆ ಎಂದು ಕಾರ್ಮಿಕ ಮುಖಂಡ ಗುಡಿಹಳ್ಳಿ ಹಾಲೇಶ್ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಶುಕ್ರವಾರ ಎಐಟಿಯುಸಿ ಸಂಘಟನೆ ಏರ್ಪಡಿಸಿದ್ದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದೇಶದ ಸಂಪತ್ತು ಸೃಷ್ಟಿಸುವ ಕಾರ್ಮಿಕರು ಶ್ರಮವನ್ನು ಸರ್ಕಾರ ಗುರುತಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಟಿ.ಬಸಮ್ಮ, ಸಿಪಿಐ ಕಾರ್ಯದರ್ಶಿ ರಮೇಶ ನಾಯ್ಕ, ಹನುಮಂತಪ್ಪ, ಎ.ಪಿ.ಪುಷ್ಪಾ, ಸುಮಂಗಲ ತಾಯಿ, ಕೊಟ್ರೇಶ ಬಳಿಗನೂರು, ದೊಡ್ಡಬಸವರಾಜ, ಕೆ.ಶಿವರಾಮ್, ಅರುಣ್ ಕುಮಾರ ಇದ್ದರು.

ಕಾರ್ಮಿಕ ಕಾನೂನು ತಿದ್ದುಪಡಿಗೆ ವಿರೋಧ

ಕುರುಗೋಡು: ತಾಲ್ಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಶುಕ್ರವಾರ ನರೇಗಾ ಕಾರ್ಮಿಕರು ವಿಶ್ವ ಕಾರ್ಮಿಕ ದಿನಾಚರಣೆ ಆಚರಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ ಮಾತನಾಡಿ, ನಮ್ಮನ್ನಾಳುವ ಸರ್ಕಾರಗಳು ರೈತರು, ಕೃಷಿ ಕಾರ್ಮಿಕರ ವಿರುದ್ಧದ ಕಾನೂನುಗಳನ್ನು ಜಾರಿಮಾಡಿ ಅವರ ಜೀವನದಲ್ಲಿ ಚೆಲ್ಲಾಟವಾಡುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಾರ್ಮಿಕರ ಪರವಾಗಿರುವ 44 ಕಾನೂನುಗಳನ್ನು ರದ್ದುಮಾಡಿದೆ. ನರೇಗಾ ಯೋಜನೆಯ ನಿಯಮಗಳನ್ನು ಕೆಲವು ಬದಲಾವಣೆಗಳನ್ನು ತಂದು ಕಾರ್ಮಿಕರ ಕೂಲಿ ಹಣ ಕಡಿತಗೊಳಿಸಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.

ಪಿಡಿಒ ಅನೀಲ್, ಮುಖಂಡರಾದ ಗಾಳಿ ಕರಿಬಸಪ್ಪ, ಬಸಾಪುರ ಶಂಕ್ರಪ್ಪ, ಜೆ.ಗಂಗಣ್ಣ ಮತ್ತು ರಂಗಪ್ಪ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-25-228869683

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.