ಹೊಸಪೇಟೆ (ವಿಜಯನಗರ): ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಅಸ್ತಿತ್ತಕ್ಕೆ ಬರುತ್ತಿರುವ ನೂತನ ಸಚಿವ ಸಂಪುಟದಲ್ಲಿ ಬಿ.ಜೆಡ್. ಜಮೀರ್ ಅಹಮ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವಂತೆ ನಗರದ ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ.

ಇಲ್ಲಿನ ತಾಲ್ಲೂಕು ಕಚೇರಿ ಸಮೀಪ ಸೋಮವಾರ ಜಮೀರ್ ಅವರ ಭಾವಚಿತ್ರ ಹಿಡಿದು, ಡಿಸಿಎಂ ಸ್ಥಾನ ನೀಡಬೇಕು ಎಂದು ಘೋಷಣೆ ಕೂಗಿದರು.

ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕೊತ್ವಾಲ ಮೊಹಮ್ಮದ್ ಮೋಸಿನ್, ‘ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ 80 ಲಕ್ಷಕ್ಕೂ ಅಧಿಕ ಇದೆ. ಡಿಸಿಎಂ ಸ್ಥಾನ ಮುಸ್ಲಿಂ ಸಮುದಾಯದವರಿಗೆ ಸಿಗಬೇಕಾಗಿದೆ. ಈ ಮೊದಲು ನೀಡಲಾದ ಸಚಿವ ಸ್ಥಾನಗಳನ್ನು ದಕ್ಷತೆಯಿಂದ ನಿಭಾಯಿಸಿದ ಹಾಗೂ ಜನಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಜಮೀರ್ ಅವರಿಗೆ ಈ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಸಮುದಾಯದ ಮುಖಂಡರಾದ ಫಿರೋಜ್ ಖಾನ್, ಬಿ. ಅನ್ಸರ್ ಬಾಷಾ, ಎಂ.ಎಂ.ಗೌಸ್, ಅಬೂಬಕರ್, ಎನ್.ಎಸ್. ರಫೀಕ್, ಅತೀಕ್ ರಷೀದ್, ರಜಾಕ್, ಎಂ.ಡಿ. ಜಾವೀದ್ ಸಾದೀಕ್ ಅಲಿ, ನೌಷಾದ್, ಅಬ್ದುಲ್ ಗಫೂರ್, ಕರಂಗಿ ನಜೀರ್, ಯೂನಿಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-25-742628345

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.