ಹೊಸಪೇಟೆ (ವಿಜಯನಗರ): ತಾಲ್ಲೂಕಿನ ನಾಗೇನಹಳ್ಳಿ ಭಾಗದಲ್ಲಿ ರಸ್ತೆ ಬದಿಯಲ್ಲಿ ರಾಶಿ ಹಾಕಿದ ಸಾವಿರಾರು ಕ್ವಿಂಟಲ್ ಭತ್ತ ಯೋಗ್ಯ ಬೆಲೆಗಾಗಿ ಕಾದು ಕುಳಿತಿದೆ. ಇದರಿಂದ ಅನ್ನದಾತರು ಕಂಗಾಲಾಗಿದ್ದಾರೆ.

ನಾಗೇನಹಳ್ಳಿಯಂತೆ ತಾಲ್ಲೂಕಿನ ಕೆಲವೆಡೆ ಭತ್ತ ಬೆಳೆಯಲಾಗುತ್ತದೆ. ಅಂದಾಜು 300 ಹೆಕ್ಟೇರ್ನಲ್ಲಿ ಭತ್ತ ಬೆಳೆಯುತ್ತಿದ್ದು, ಇಲ್ಲಿನ ಭತ್ತ ಮಂಡಕ್ಕಿ ಬಟ್ಟಿ, ಅವಲಕ್ಕಿ ತಯಾರಿಕೆಗೆ ಯೋಗ್ಯವಾಗಿದೆ. ಕ್ವಿಂಟಲ್ಗೆ ₹2,300ರಿಂದ ₹2,400 ದರ ಸಿಗಬೇಕಿದೆ. ಆದರೆ, ಖರೀದಿಗೆ ಬರುವವರು ₹1,750ರಿಂದ ₹1,800ಕ್ಕೆ ಕೇಳುತ್ತಿದ್ದಾರೆ. ಕ್ವಿಂಟಲ್ಗೆ ಸುಮಾರು ₹600ರಷ್ಟು ನಷ್ಟ ಮಾಡಿಕೊಂಡು ಮಾರಾಟ ಮಾಡುವುದು ಹೇಗೆ ಸಾಧ್ಯ ಎಂಬುದು ರೈತರ ಪ್ರಶ್ನೆಯಾಗಿದೆ.

‘ಸಿಡಿಲು, ಮಳೆ ಲೆಕ್ಕಿಸದೆ ಭತ್ತ ಕಾಯಬೇಕು. ಆದರೂ, ಯೋಗ್ಯ ದರ ಸಿಗುವ ಖಾತರಿ ಇಲ್ಲ. ಭತ್ತ ಖರೀದಿಸಲು ಬರುವವರು, ಖರೀದಿ ಕೇಂದ್ರ ತೆರೆಯದ ಸರ್ಕಾರದ ಧೋರಣೆಯ ಲಾಭ ಪಡೆಯುತ್ತಿದ್ದಾರೆ. ತಕ್ಷಣ ಜಿಲ್ಲಾಡಳಿತ ಖರೀದಿ ಕೇಂದ್ರ ತೆರೆಯಬೇಕು’ ಎಂದು ರೈತ ಮುಖಂಡ, ನಾಗೇನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ದುರುಗಪ್ಪ ಒತ್ತಾಯಿಸಿದರು.

‘ಆಂಧ್ರಪ್ರದೇಶ, ತೆಲಂಗಾಣದಿಂದ ಬರುವ ಭತ್ತವನ್ನು ನೆಚ್ಚಿಕೊಂಡಿರುವ ದಲ್ಲಾಳಿಗಳು ನಮ್ಮ ಭತ್ತ ಖರೀದಿಸದೆ ಸತಾಯಿಸುತ್ತಿದ್ದಾರೆ. ಈ ಭಾಗದಲ್ಲಿ ಸೋನಾ ಮಸೂರಿ ಬೆಳೆಯುತ್ತಿಲ್ಲ. ಆದರೆ ಮಂಡಕ್ಕಿ ಬಟ್ಟಿ, ಅವಲಕ್ಕಿಗೆ ನಮ್ಮಲ್ಲಿನ ಭತ್ತವೇ ಬೇಕು. ಆದರೂ ನಮ್ಮನ್ನು ಸತಾಯಿಸುತ್ತಿದ್ದು, ಪ್ರತಿ ವರ್ಷ ಇದೇ ಗೋಳಾಗಿದೆ. ಜಿಲ್ಲಾಡಳಿತ ರೈತರ ಕಷ್ಟಗಳಿಗೆ ತಕ್ಷಣ ಸ್ಪಂದಿಸಬೇಕು’ ಎಂದು ರೈತ ಸಂಘದ ಮುಖಂಡ ಸಣ್ಣಕ್ಕಿ ರುದ್ರಪ್ಪ ಆಗ್ರಹಿಸಿದರು.

ಗುಣಮಟ್ಟ ಕಾಯ್ದುಕೊಳ್ಳುವ ಸವಾಲು: ‘ಎಲ್ಲೆಡೆ ರೈತರು ಸದ್ಯ ಹಿಂಗಾರು ಹಂಗಾಮಿನ ಭತ್ತದ ಕೊಯ್ಲು ಮಾಡಿದ್ದು, ಈ ಹಂತದಲ್ಲೇ ದಲ್ಲಾಳಿಗಳಿಂದ ವಂಚನೆಗೆ ಒಳಗಾಗುತ್ತಿದ್ದಾರೆ. ಬೇಸಿಗೆ ಕಾಲದ ಅಕಾಲಿಕ ಮಳೆ, ಗಾಳಿಯಂತಹ ಪ್ರಕೃತಿ ವಿಕೋಪಗಳನ್ನು ಎದುರಿಸುತ್ತಲೇ ಭತ್ತದ ಗುಣಮಟ್ಟ ಕಾಯ್ದುಕೊಳ್ಳುವ ದೊಡ್ಡ ಸವಾಲು ರೈತರದ್ದು. ಖರೀದಿಯ ವೇಳೆ ನಿಶ್ಚಿತ ದರ ಸಿಗುವಂತಹ ವ್ಯವಸ್ಥೆಯನ್ನು ಜಿಲ್ಲಾಡಳಿತವೇ ಮಾಡಬೇಕು’ ಎಂಬುದು ಅವರ ಒತ್ತಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-25-1393605035

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.