ಹೊಸಪೇಟೆ (ವಿಜಯನಗರ): ಚಿಕಿತ್ಸೆಗಾಗಿ ತಾಯಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆ ತಂದ ಬಾಲಕಿಯನ್ನು ವಂಚಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು ಅಮಾನತು ಮಾಡಿದ್ದಷ್ಟೇ ಸಾಲದು, ಆತನನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಡಿವೈಎಫ್ಐ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಎಡಿಸಿ ಪಿ.ಎನ್.ಲೋಕೇಶ್ ಅವರನ್ನು ಭೇಟಿ ಮಾಡಿದ ಕಾರ್ಯಕರ್ತರು ಆರೋಪಿ ಅಜಯ್ ಮದಕರಿ ಅವರು ಆಸ್ಪತ್ರೆಯಲ್ಲಿ ಡಿ ದರ್ಜೆಯ ನೌಕರರಾಗಿದ್ದು, ಈಗಾಗಲೇ ಹಲವು ಅಕ್ರಮಗಳನ್ನು ನಡೆಸಿದ ಇತಿಹಾಸ ಇದೆ, ಹಾಗಿದ್ದರೂ ಅವರನ್ನು ಶಿಕ್ಷೆಗೆ ಒಳಪಡಿಸಿಲ್ಲ, ಇದೀಗ ಮತ್ತೊಂದು ಗಂಭೀರ ಕೃತ್ಯ ಎಸಗಿರುವುದರಿಂದ ಆಸ್ಪತ್ರೆಗೆ ಬರುವವರಿಗೆ ಆತಂಕ ಎದುರಾಗಿದೆ ಎಂದು ತಿಳಿಸಿದ್ದಾರೆ.

ಸರ್ಕಾರ ಉನ್ನತ ತನಿಖೆ ನಡೆಸಿ ಆರೊಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆರೋಗ್ಯ ಸಚಿವರಿಗೆ ಕಳುಹಿಸಿಕೊಟ್ಟಿರುವ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಶಿಕ್ಷಣ ಸಚಿವರಿಗೆ ಮನವಿ: ಸಿಬಿಎಸ್ಸಿ ಶಾಲೆಗಳ ಹಾಗೂ ಅನುದಾನಿತ ಖಾಸಗಿ ಶಾಲೆಗಳು ಅತಿ ಹೆಚ್ಚು ಶುಲ್ಕ ವಸೂಲಾತಿ ವಿರೋಧಿಸಿ ಹಾಗೂ ಅದಕ್ಕೆ ಕಡಿವಾಣ ಹಾಕಲು ಒತ್ತಾಯಿಸಿ ಇದೇ ಸಂಘಟನೆ ವತಿಯಿಂದ ಶಿಕ್ಷಣ ಸಚಿವರಿಗೆ ಮನವಿ ಕಳುಹಿಸಿಕೊಡಲಾಗಿದೆ.

ಶಾಲಾ ಖಾಸಗಿ ಆಡಳಿತ ಮಂಡಳಿಗಳ ಕೊಡಲೇ ಸಭೆ ಕರೆಯಬೇಕು, ಪೋಷಕರಿಗೆ ಹೊರೆಯಾಗದಂತೆ ಶುಲ್ಕ ನಿಗದಿ ಮಾಡಬೇಕು, ಉತ್ತಮ ಶಿಕ್ಷಕರ ತಂಡ ಹಾಗೂ ಉತ್ತಮ ಶಿಕ್ಷಣದೊಂದಿಗೆ ಶಿಕ್ಷಣ ನೀಡಬೇಕು, ಸುಸಜ್ಜಿತ ಕೊಠಡಿ, ಮೈದಾನ, ಶಿಕ್ಷಣ ನೀಡುವ ನೆಪದಲ್ಲಿ ವಸೂಲಾತಿ ಕ್ರಮ ಕೈಬಿಡಬೇಕು, ಶುಲ್ಕ ನಿಯಂತ್ರಣದಲ್ಲಿ ರಾಜ್ಯ ಸರ್ಕಾರಗಳು ಹಸ್ತಕ್ಷೇಪ ಮಾಡುವಂತಿಲ್ಲ ಎನ್ನುವ ಬಗ್ಗೆ ಖಾಸಗಿ ಶಾಲೆಗಳು ದಾಖಲೆ ನೀಡಬೇಕು, ಎಲ್ಲಾ ಖಾಸಗಿ ಶಾಲೆಗಳು ಶುಲ್ಕದ ಬೋರ್ಡ್ ಹಾಕಬೇಕು ಎಂದು ಒತ್ತಾಯಿಸಲಾಗಿದೆ. ನಿಯೋಗದಲ್ಲಿ ಜಿಲ್ಲಾ ಅಧ್ಯಕ್ಷ ವಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಉಪಾಧ್ಯಕ್ಷ ಬಂಡೆ ತಿರುಕಪ್ಪ, ಮುಖಂಡರಾದ ಅಲ್ತಾಫ್, ಎಂ.ಗೋಪಾಲ್, ಹನುಮನಾಯ್ಕ, ಉಮಾಮಹೇಶ್ವರ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-25-569219413

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.