ಹೊಸಪೇಟೆ: ಪಡಿತರ ತಿದ್ದುಪಡಿ ಸೇವೆಗಳ ಅವಧಿಯನ್ನು ಮೇ 8ರಿಂದ 2027ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದ್ದು, ಹತ್ತಿರದ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ಈ ಸೌಲಭ್ಯ ಪಡೆಯಬಹುದು ಎಂದು ಆಹಾರ ಇಲಾಖೆ ಉಪ ನಿರ್ದೇಶಕ ರಿಯಾಜ್ ತಿಳಿಸಿದ್ದಾರೆ.

ಸೇವಾ ಶುಲ್ಕಗಳ ವಿವರ: ಪಡಿತರ ಚೀಟಿ ತಿದ್ದುಪಡಿ ಹೆಸರು ಸೇರ್ಪಡೆ, ತೆಗೆದು ಹಾಕುವುದು, ವಿಳಾಸ ಅಥವಾ ನ್ಯಾಯಬೆಲೆ ಅಂಗಡಿ ಬದಲಾವಣೆ ಹಾಗೂ ಇ-ಕೆವೈಸಿ ಪ್ರಕ್ರಿಯೆಗಳಿಗೆ ₹25 ನಿಗದಿಪಡಿಸಲಾಗಿದೆ. ಹೊಸ ಪಡಿತರ ಚೀಟಿ ಅರ್ಜಿ ಶುಲ್ಕ ₹ 50 ಹಾಗೂ ಆದ್ಯತೇತರ ಕುಟುಂಬಗಳ ಸ್ವ-ಇಚ್ಛೆ ನೋಂದಣಿ ಶುಲ್ಕ ₹20 ನಿಗದಿಪಡಿಸಲಾಗಿದೆ. (ಈ ಸೇವೆಗಳು ಪ್ರಸ್ತುತ ಸ್ಥಗಿತಗೊಳಿಸಲಾಗಿದೆ).

ಸಾರ್ವಜನಿಕರು ಮಧ್ಯವರ್ತಿ ಅಥವಾ ಮೂರನೇ ವ್ಯಕ್ತಿಗಳ ಸಂಪರ್ಕಿಸಿ ಆಮಿಷಕ್ಕೆ ಒಳಗಾಗಬಾರದು, ಸರ್ಕಾರ ನಿಗದಿಪಡಿಸಿದ ಶುಲ್ಕಕ್ಕಿಂತ ಹೆಚ್ಚಿನ ಹಣ ಯಾರಿಗೂ ನೀಡಬಾರದು. ಮಾಹಿತಿಗೆ ಆಯಾ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-25-1541090652

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.