ಹೊಸಪೇಟೆ: ವಿಶ್ವ ರೆಡ್ಕ್ರಾಸ್ ದಿನಾಚರಣೆ ಅಂಗವಾಗಿ ನಗರದ ಪಿಡಿಐಟಿ ಕಾಲೇಜು ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ 20 ಮಂದಿ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

ರೆಡ್ಕ್ರಾಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಖಾ ಪ್ರಕಾಶ್ ಮಾತನಾಡಿ, ‘ರೆಡ್ಕ್ರಾಸ್ ಸಂಸ್ಥಾಪಕ ಜೀನ್ ಹೆನ್ರಿ ಡ್ಯೂನಾಂಟ್ ಅವರ ಜನ್ಮದಿನವನ್ನು ವಿಶ್ವ ರೆಡ್ಕ್ರಾಸ್ ದಿನವಾಗಿ ಆಚರಿಸಲಾಗುತ್ತದೆ. 126 ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ಈ ಸಂಸ್ಥೆ ಯುದ್ಧ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜಾತಿ, ಧರ್ಮ, ದೇಶ ಭೇದವಿಲ್ಲದೆ ಮಾನವೀಯ ಸೇವೆ ಸಲ್ಲಿಸುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ನೊಬೆಲ್ ಪುರಸ್ಕಾರ ಪಡೆದ ಏಕೈಕ ಸಂಸ್ಥೆ ಇದಾಗಿದೆ’ ಎಂದರು.

ಜಿಲ್ಲಾ ಘಟಕದ ಸಭಾಧ್ಯಕ್ಷ ರವಿಶಂಕರ್ ಮಾತನಾಡಿ, ‘ವಿಜಯನಗರ ಘಟಕದಿಂದ ಶ್ರವಣ ಸಾಧನ, ವೀಲ್ಚೇರ್ ವಿತರಣೆ, ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಟಾರ್ಪಾಲ್, ಪಾತ್ರೆ ವಿತರಣೆ ಮಾಡಲಾಗಿದೆ’ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ.ಶಿವನಗೌಡ ಸತ್ಮಾರ್, ಆಪಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶ್ವೇತಾ ವಸ್ತ್ರದ್ ಮಾತನಾಡಿದರು.

120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ರೆಡ್ಕ್ರಾಸ್ ಸದಸ್ಯರಾದ ಅನ್ನಪೂರ್ಣ ಸದಾಶಿವ, ಮಹೇಂದ್ರ ಸೋನಿ, ಅನ್ನಪೂರ್ಣ ರೆಡ್ಡಿ, ಬಿಂದು ಮಲ್ಲಿಕಾರ್ಜುನ, ರೋಟರಿ ರಕ್ತನಿಧಿ ಕೇಂದ್ರದ ಅಧ್ಯಕ್ಷ ದೀಪಕ್ ಕೊಳಗದ್, ಡಾ. ಸನಾ ಆಯೇಷಾ ಸೇಠ್, ಉಪನ್ಯಾಸಕರಾದ ಮಲ್ಲಿಕಾ, ಬಿದರಕುಂದಿ ಮಲ್ಲಿಕಾರ್ಜುನ, ರೋಟರಿ ರಕ್ತನಿಧಿಯ ಪವನ್ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-25-597489016

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.