ಹೊಸಪೇಟೆ (ವಿಜಯನಗರ): ಸನಾತನ ಧರ್ಮವನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ನಾಶಪಡಿಸುತ್ತೇವೆ ಎಂದು ಹೇಳಿಕೊಂಡವರೇ ನಾಶವಾಗಲಿದ್ದಾರೆ ಎಂದು ಚಿಂತಾಮಣಿ ಮಠದ ಶಿವಾನಂದ ಭಾರತೀ ಚಿಂತಾ ಮಣಿ ಸ್ವಾಮೀಜಿ ಹೇಳಿದರು.

ಸನಾತನ ಧರ್ಮ ನಾಶಪಡಿಸುವುದಾಗಿ ತಮಿಳುನಾಡಿನ ವಿಧಾನಸಭೆಯಲ್ಲೇ ಹೇಳಿಕೆ ನೀಡಿದ ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ಅವರ ವಿರುದ್ಧ ಶುಕ್ರವಾರ ಇಲ್ಲಿ ಹಿಂದೂ ಸನಾತನ ಸಂರಕ್ಷಣಾ ಸಮಿತಿ ವತಿಯಿಂದ ಶುಕ್ರವಾರ ಸಂಜೆ ನಗರದ ವಡಕರಾಯ ದೇವಸ್ಥಾನದಿಂದ ಆರಂಭವಾದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಸನಾತನ ಧರ್ಮಕ್ಕೆ ಹುಟ್ಟೇ ಇಲ್ಲ, ಹೀಗಾಗಿ ಅದರ ನಾಶ ಸಹ ಸಾಧ್ಯವಿಲ್ಲ. ಇಂದು ವಿದೇಶದಲ್ಲಿ ಸಹ ಸನಾತನ ಧರ್ಮವನ್ನು ಅನುಸರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದೂಗಳು ಒಗ್ಗಟ್ಟಿನಿಂದ ಇದ್ದರೆ ಇಂತಹ ಕಿಡಿಗೇಡಿಗಳ ಹೇಳಿಕೆಯಿಂದ ವಿಚಲಿತರಾಗುವ ಪ್ರಮೇಯ ಬರುವುದಿಲ್ಲ. ಸನಾತನ ಧರ್ಮಕ್ಕೆ ಅಪಚಾರ ಎಸಗಿದಾಗ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಿ ಮತ್ತೆ ಇಂತಹ ದುಸ್ಸಾಹಸಕ್ಕೆ ಇಳಿಯದಂತೆ ಎಚ್ಚರಿಕೆ ನೀಡ ಬೇಕಾಗುತ್ತದೆ’ ಎಂದು ಅವರು ಹೇಳಿದರು.

ಒಗ್ಗಟ್ಟು ಇರಲಿ: ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ನಡೆದ ಸಾರ್ಜಜನಿಕ ಸಭೆಯಲ್ಲಿ ಶಿವಮೊಗ್ಗದ ಪ್ರೇರಕ ಭಾಷಣಕಾರ ಹಾಗೂ ವೈದ್ಯ ಡಾ.ರಾಹುಲ್ ದೇವರಾಜ್ ಅವರು ಸನಾತನ ಧರ್ಮವನ್ನು ನಾಶಪಡಿಸಲು ಸಾಧ್ಯವೇ ಇಲ್ಲ ಎಂದು ಖಂಡತುಂಡವಾಗಿ ಹೇಳಿದರು.

ಹಿಂದೂಗಳು ಒಗ್ಗಟ್ಟು ಪ್ರದರ್ಶಿಸುವುದು ಕಡಿಮೆ, ಅವರಲ್ಲಿ ಒಗ್ಗಟ್ಟು ಇದ್ದರೆ ನೂರಾರು ಸ್ಟಾಲಿನ್ಗಳು ಬಂದರೂ ಸನಾತನ ಧರ್ಮಕ್ಕೆ ಒಂದಿಷ್ಟು ಕೊಂಕು ಉಂಟುಮಾಡುವುದು ಸಹ ಸಾಧ್ಯವಿಲ್ಲ ಎಂದರು. ಹಂಪಿ ಮಾತಂಗ ಪೀಠದ ಪೂರ್ಣಾನಂದ ಭಾರತಿ ಸ್ವಾಮೀಜಿ ಇದ್ದರು.

ಬೃಹತ್ ಮೆರವಣಿಗೆ: ವಡಕರಾಯ ದೇವಸ್ಥಾನದಿಂದ ಆರಂಭವಾದ ಪಂಜಿನ ಮೆರವಣಿಗೆ ಮೇನ್ ಬಜಾರ್, ದೊಡ್ಡ ಮಸೀದಿ, ಗಾಂಧಿ ಚೌಕ, ಬಸ್ನಿಲ್ದಾಣ ಮೂಲಕ ಪುನೀತ್ ರಾಜ್ಕುಮಾರ್ ವೃತ್ತ ತಲುಪಿತು. ಉದಯನಿಧಿ ಸ್ಟಾಲಿನ್ ಅವರಿಗೆ ಧಿಕ್ಕಾರ ಕೂಗಲಾಯಿತು.

‘ರಕ್ತದ ಕಣ ಕಣದಲ್ಲಿ ಕುದಿಯುತ್ತಿದೆ, ಹಿಂದು ಹಿಂದೂ ಎನ್ನುತ್ತಿದೆ’ ಮೊದಲಾದ ಫಲಕಗಳನ್ನು ಪ್ರದರ್ಶಿಸಲಾಯಿತು.

ಹಿಂದೂ ಸನಾತನ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಜೀರೆ, ಸಂಚಾಲಕ ಎನ್.ಎಸ್.ರೇವಣಸಿದ್ದಪ್ಪ, ಸಹ ಸಂಚಾಲಕ ಅಪ್ಪರಾವ್ ಸಾನಬಾಳ್, ಮುಖಂಡರಾದ ಸಿದ್ಧಾರ್ಥ ಸಿಂಗ್, ಸಂದೀಪ್ ಸಿಂಗ್, ರಾಯಸಂ ಶ್ರೀನಿವಾಸ್, ಶಾರದಾ ಕುಲಕರ್ಣಿ, ಸುಜಾತಾ ರೇವಣಸಿದ್ದಪ್ಪ, ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-25-231233575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.