ಹೊಸಪೇಟೆ (ವಿಜಯನಗರ): ‘ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಹೊಸಪೇಟೆಯ ಎಸ್.ಸುಮತಿ ಅವರು ವಿಜಯನಗರ ಎಸ್ಪಿ ಅವರಿಗೆ ನೀಡಿದ ದೂರಿನ ಹಿಂದೆ ಸಾರ್ವಜನಿಕವಾಗಿ ನನ್ನ ಹೆಸರು ಕೆಡಿಸುವ ಹುನ್ನಾರ ಇದೆ. ನಾನು ಫೋನ್ ಕರೆ ಮಾಡಿದ ವೇಳೆ ಅವರಿಗೆ ಯಾವುದೇ ಬೆದರಿಕೆಯನ್ನೂ ಹಾಕಿಲ್ಲ’ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಸಂದೀಪ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

‘ಫೋನ್ನಲ್ಲಿ ಏನು ಮಾತನಾಡಿದ್ದೇವೆ ಎಂಬ ದಾಖಲೆ ನನ್ನ ಬಳಿ ಇದೆ. ನಾನು ಏನೂ ತಪ್ಪು ಮಾಡಿಲ್ಲ ಎಂಬುದು ಈ ಸಂಭಾಷಣೆಯಲ್ಲಿ ತಿಳಿಯುತ್ತದೆ. ಒಂದಿಬ್ಬರು ಹೂಡಿದ ತಂತ್ರಗಾರಿಕೆಯ ಕಾರಣಕ್ಕೆ ಸುಮತಿ ಅವರು ಈ ದೂರು ನೀಡಿದಂತಿದೆ. ಪೊಲೀಸರಿಗೆ ನಾನು ನನ್ನಲ್ಲಿರುವ ದಾಖಲೆ ತೋರಿಸಲಿದ್ದೇನೆ, ಸುಮತಿ ಅಥವಾ ಅವರನ್ನು ಛೂಬಿಟ್ಟ ಯಾರ ಬಗ್ಗೆಯೂ ನನಗೆ ಯಾವ ದ್ವೇಷವೂ ಇಲ್ಲ’ ಎಂದು ಸಂದೀಪ್ ಸಿಂಗ್ ತಿಳಿಸಿದ್ದಾರೆ.

‘ಮಹಿಳೆಗೆ ಪ್ರಾಣ ಬೆದರಿಕೆ, ದೂರು’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಯಲ್ಲಿ ಏ.7ರಂದು ಸುದ್ದಿ ಪ್ರಕಟವಾಗಿತ್ತು. ಬಳ್ಳಾರಿ ಐಜಿಪಿಗೆಇಮೇಲ್ ಮೂಲಕ ದೂರು ಕಳುಹಿಸಿದ್ದಾಗಿ ಸುಮತಿ ಹೇಳಿದ್ದರು. ವಿಜಯನಗರ ಎಸ್ಪಿ ಕಚೇರಿಗೂ ತೆರಳಿ ದೂರು ದಾಖಲಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260408-25-1790583008

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.