ಹೊಸಪೇಟೆ (ವಿಜಯನಗರ): ‘ಕಾಯಕಲ್ಪ ಪುರಸ್ಕೃತ’ ಎಂದು ಬಿರುದು ಪಡೆದುಕೊಂಡಿರುವ ತಾಲ್ಲೂಕಿನ ಗಾದಿಗನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಸಂಜೆ ಜಗತ್ತು ನೋಡಬೇಕಿದ್ದ ಶಿಶು ಗರ್ಭದಲ್ಲೇ ಅಸುನೀಗಿದೆ. ವೈದ್ಯರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಗಾದಿಗನೂರಿನ ರೈತ ಕುಟುಂಬದ ಮಹಿಳೆ ತನ್ನ ಮೂರನೇ ಹೆರಿಗೆಗಾಗಿ ಮಧ್ಯಾಹ್ನ 2.30ರ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದರು. ಸಾಮಾನ್ಯ ಹೆರಿಗೆ ಮಾಡಿಸಲು ಸಿದ್ಧತೆ ನಡೆದಿದ್ದಾಗಲೇ ವಿದ್ಯುತ್ ಕೈಕೊಟ್ಟಿತ್ತು. ಜನರೇಟರ್ ಸಹ ಇರಲಿಲ್ಲ. ನೀರಿನ ವ್ಯವಸ್ಥೆಯೂ ಇರಲಿಲ್ಲ. ಶಿಶುವಿನ ಸಹಜ ಹೆರಿಗೆ ಆದರೂ ಅದು ಹುಟ್ಟುತ್ತಲೇ ಉಸಿರು ಚೆಲ್ಲಿತ್ತು.

ಈ ಘಟನೆಯಿಂದ ರೊಚ್ಚಿಗೆದ್ದ ನೂರಾರು ಮಂದಿ ಆಸ್ಪತ್ರೆಗೆ ಧಾವಿಸಿದರು. ಸುಮಾರು ಎರಡು ಗಂಟೆ ಪ್ರತಿಭಟನೆ ನಡೆಸಿದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ವಿನೋದ್ ಅವರು ಸ್ಥಳಕ್ಕೆ ಧಾವಿಸಿ, ಮಂಗಳವಾರದ ಒಳಗೆ ಎಲ್ಲ ಅವ್ಯವಸ್ಥೆ ಸರಿಪಡಿಸುವುದಾಗಿ ಲಿಖಿತ ಭರವಸೆ ನೀಡಿದ ಬಳಿಕವಷ್ಟೇ ಪ್ರತಿಭಟನೆ ತಣ್ಣಗಾಯಿತು.

‘ನಮ್ಮ ಶಿಶುವನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಸ್ಥಿತಿ ಬೇರೆಯವರಿಗೂ ಆಗಬಾರದು ಎಂಬುದಷ್ಟೇ ನಮ್ಮ ಕಳಕಳಿ. ಹೀಗಾಗಿ ಲಿಖಿತ ಭರವಸೆ ನೀಡಿದ ಬಳಿಕ ನಾವು ಸತ್ತ ಶಿಶುವನ್ನು ಹೂಳಲು ಕೊಂಡೊಯ್ಯುತ್ತಿದ್ದೇವೆ. ನಮಗೆ ಯಾವ ಪರಿಹಾರವೂ ಬೇಡ, ವ್ಯವಸ್ಥೆ ಸರಿಯಾದರೆ ಸಾಕು’ ಎಂದು ಮೃತ ಮಗುವಿನ ಕುಟುಂಬದವರು ತಿಳಿಸಿದರು.

ತೀವ್ರ ಪ್ರತಿಭಟನೆಯ ಕಾವಿನಿಂದ ಕಂಗೆಟ್ಟ ಸ್ಥಳೀಯ ವೈದ್ಯರು, ಸಿಬ್ಬಂದಿ ಇನ್ನೊಂದು ಹೆರಿಗೆ ಪ್ರಕರಣವನ್ನು ನಿಭಾಯಿಸಲು ಹಿಂದೇಟು ಹಾಕಿ, ಗರ್ಭಿಣಿಯನ್ನು ಅಂಬುಲೆನ್ಸ್ನಲ್ಲಿ ಹೊಸಪೇಟೆಗೆ ಕಳುಹಿಸಿದರು.

ಗಾಳಿ, ಮಳೆಯಿಂದ ತೊಂದರೆ: ಈ ಘಟನೆಯ ಕುರಿತು ಡಿಎಚ್ಒ ಡಾ.ವಿನಯ್ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ, ‘ಶುಕ್ರವಾರ ಸುರಿದ ಗಾಳಿ, ಮಳೆಯಿಂದ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಆಗಿದೆ. ಸೋಲಾರ್ ವ್ಯವಸ್ಥೆ ಸಹ ಕೈಕೊಟ್ಟಿದೆ. ಇದರಿಂದ ಇಂದಿನ ಹೆರಿಗೆ ಪ್ರಕರಣ ವೈಫಲ್ಯಗೊಂಡಿತು. ತಾಯಿ ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಗೆ ಕಳುಹಿಸಲಾಗಿದೆ. ಶೀಘ್ರದಲ್ಲೇ ಅವ್ಯವಸ್ಥೆ ಸರಿಪಡಿಸುತ್ತೇವೆ’ ಎಂದರು.

ಗಾದಿಗನೂರು ಪಿಎಚ್ಸಿಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇಲ್ಲ, ಆದರೆ ಅಂಬುಲೆನ್ಸ್ ಚಾಲಕರ ಕೊರತೆ ಇದೆ ಎಂಬುದನ್ನು ಅವರು ಒಪ್ಪಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-25-1209345097

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.