ಹೊಸಪೇಟೆ (ವಿಜಯನಗರ): ಹೊಸಪೇಟೆ ನಗರಸಭೆಯ 2026–27ನೇ ಸಾಲಿನ ಬಜೆಟ್ ಅನ್ನು ಗುರುವಾರ ಮಂಡಿಸಲಾಗಿದ್ದು, ಬಜೆಟ್ ಗಾತ್ರ ₹122 ಕೋಟಿಯಷ್ಟಿದ್ದರೆ, ₹5.39 ಲಕ್ಷ ಉಳಿತಾಯ ತೋರಿಸಲಾಗಿದೆ.

ಸರ್ಕಾರದ ಅನುದಾನ ಮೊತ್ತ ₹78.99 ಕೋಟಿ, ನಗರಸಭೆ ನಿಧಿ ₹34.87 ಕೋಟಿ ಹಾಗೂ ಸರ್ಕಾರ ಇತರ ಇಲಾಖೆಗಳಿಗೆ ಪಾವತಿಸಬೇಕಾದ ಅಸಾಮಾನ್ಯ ಆದಾಯ ₹9.10 ಕೋಟಿ ಅಂದಾಜಿಸಲಾಗಿದೆ ಎಂದು ಅಧ್ಯಕ್ಷ ಎನ್.ರೂಪೇಶ್ ಕುಮಾರ್ ತಿಳಿಸಿದರು.

ಶುಲ್ಕ ವಸೂಲಿಯದ್ದೇ ಸಮಸ್ಯೆ: ನಗರಸಭೆಯ ನಿವ್ವಳ ತೆರಿಗೆ ಆದಾಯವನ್ನು ₹15.39 ಕೋಟಿ ಹಾಗೂ ಖಾತೆ ಬದಲಾವಣೆ ₹3 ಕೋಟಿ ವಾರ್ಷಿಕ ಆದಾಯ ಅಂದಾಜಿಸಲಾಗಿದೆ. ಆದರೆ ಶುಲ್ಕಗಳನ್ನು ಸಂಗ್ರಹಿಸುವಲ್ಲಿ ಈ ಬಾರಿಯೂ ನಗರಸಭೆ ಹಿಂದೆ ಬಿದ್ದಿರುವುದನ್ನು ಬಜೆಟ್ ಬೊಟ್ಟುಮಾಡಿ ತೋರಿಸಿದೆ. ಕಳೆದ ವರ್ಷದ ಬಜೆಟ್ನಲ್ಲೂ ಇದೇ ಕೊರತೆ ಬಿಂಬಿತವಾಗಿತ್ತು.

ವ್ಯಾಪಾರ ಪರವಾನಗಿ ಶುಲ್ಕ ₹80 ಲಕ್ಷ ಗುರಿ ಬದಲಿಗೆ ಡಿಸೆಂಬರ್ ಅಂತ್ಯಕ್ಕೆ ₹36.54 ಲಕ್ಷ ಸಂಗ್ರಹವಾಗಿದೆ. ವಾಣಿಜ್ಯ ಮಳಿಗೆಗಳ ಬಾಡಿಗೆ ₹75 ಲಕ್ಷ ಬದಲಿಗೆ ₹22.45 ಲಕ್ಷ ಸಂಗ್ರಹವಾಗಿದೆ. ನೀರು ಸರಬರಾಜು ಶುಲ್ಕ ₹1.80 ಕೋಟಿ ಬದಲಿಗೆ ₹59.04 ಲಕ್ಷ ಮಾತ್ರ ಸಂಗ್ರಹವಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಒಳಚರಂಡಿ ಶುಲ್ಕ ₹2.95 ಕೋಟಿ, ಘನತ್ಯಾಜ್ಯ ನಿರ್ವಹಣೆ ಸೇವಾ ಶುಲ್ಕ (ಆಸ್ತಿ ತೆರಿಗೆಯೊಂದಿಗೆ ವಸೂಲಾತಿ) ₹2 ಕೋಟಿ ಹಾಗೂ ಪ್ಲಾಟ್ಗಳ ಮೇಲಿನ ನೀರು ಸರಬರಾಜು ಹಾಗೂ ಒಳಚರಂಡಿ ಪ್ರೊ ರ್ಯಾಟ ₹1.80 ಕೋಟಿ ವಾರ್ಷಿಕ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಪೌರ ಕಾರ್ಮಿಕರ ಸಂಬಳ, ಘನತ್ಯಾಜ್ಯ ನಿರ್ವಹಣೆಯಂತಹ ಕೆಲವು ವಿಷಯಗಳಲ್ಲಿ ಸರ್ಕಾರದಿಂದ ನೇರ ಪಾವತಿಯಾಗುತ್ತಿದ್ದು, ಇಲ್ಲೂ ಒಂದಿಷ್ಟು ಉಳಿಕೆ ಮೊತ್ತ ನಗರಸಭೆಯಿಂದಲೇ ಪಾವತಿಯಾಗಬೇಕಿದೆ. ನೀರು ಸಬರರಾಜು, ಒಳಚರಂಡಿ (ಬಾಕಿ ಬಿಲ್ ಪಾವತಿ ಸೇರಿ) ದುರಸ್ತಿ, ನಿರ್ವಹಣೆಗಾಗಿ ₹9.15 ಕೋಟಿ ವಾರ್ಷಿಕ ವೆಚ್ಚದ ಅಂದಾಜು ಮಾಡಲಾಗಿದೆ. 2 ಸಾವಿರ ನಾಯಿಗಳ ಸಂತಾನಶಕ್ತಿ ಹರಣ, ಬಿಡಾಡಿ ದನ, ಹಂದಿ, ಬೀದಿನಾಯಿಗಳ ನಿಯಂತ್ರಣಕ್ಕೆ ₹15 ಲಕ್ಷ ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.

ಅನುದಾನ: ಕೇಂದ್ರ ಸರ್ಕಾರದ 16ನೇ ಹಣಕಾಸು ಯೋಜನೆ ಅಡಿಯಲ್ಲಿ ರಾಜ್ಯದಿಂದ ₹23.55 ಕೋಟಿ ಅನುದಾನ ಹಂಚಿಕೆಯಾಗಿದೆ. 15ನೇ ಹಣಕಾಸು ಯೋಜನೆಯ ಎನ್ಎಂಪಿಸಿ ಅಡಿಯಲ್ಲಿ ರಾಜ್ಯದಿಂದ ₹18.12 ಕೋಟಿ ಅನುದಾನ ಹಂಚಿಕೆಯಾಗಿದೆ. ರಾಜ್ಯ ಹಣಕಾಸು ಆಯೋಗದಿಂದ ₹60 ಲಕ್ಷ ಮುಕ್ತನಿಧಿ ಅನುದಾನ ಹಂಚಿಕೆಯಾಗಿದೆ. 6ನೇ ವಾರ್ಡ್ನಲ್ಲಿ ಆಧುನಿಕ ಅನಿಲ, ವಿದ್ಯುತ್ ಚಿತಾಗಾರಕ್ಕೆ ₹4 ಕೋಟಿ ಅನುದಾನ ಮಂಜೂರಾಗಿದೆ. ನೌಕರರ ವೇತನ ಪಾವತಿಗೆ ₹13.98 ಕೋಟಿ, ಬೀದಿ ದೀಪ ವಿದ್ಯುತ್ ಬಿಲ್ ಪಾವತಿಗೆ ₹5.74 ಕೋಟಿ, ನೀರು ಸಬರರಾಜು ಸ್ಥಾವರಗಳ ವಿದ್ಯುತ್ ಬಿಲ್ಗಾಗಿ ₹8.7 ಕೋಟಿ ರಾಜ್ಯ ಸರ್ಕಾರದಿಮದ ಎಸ್ಎಫ್ಸಿ ಅಡಿಯಲ್ಲಿ ಅನುದಾನ ಹಂಚಿಕೆಯಾಗಿದೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ಅಭಿವೃದ್ಧಿ ಕೆಲಸಗಳು: ಶಾಸಕರ ಮೂಲಕ ದೊರೆತ ₹10 ಕೋಟಿ ಎಸ್ಎಫ್ಸಿ ಅನುದಾನದಲ್ಲಿ ₹2 ಕೋಟಿಯ ಅಭಿವೃದ್ಧಿ ಕಾಮಗಾರಿಗಳು ನಗರಸಭೆ ವ್ಯಾಪ್ತಿಯಲ್ಲಾಗಿದೆ. ಬೆಳಗೋಡು ಎಸ್ಟಿಪಿಯ ಕಾರ್ಯಕ್ಷಮತೆಯನ್ನು ₹1 ಕೋಟಿ ವೆಚ್ಚದಲ್ಲಿ ಹೆಚ್ಚಿಸಲಾಗುವುದು.₹67.79 ಲಕ್ಷ ವೆಚ್ಚದಲ್ಲಿ ಬೀದಿನಾಯಿಗಳ ಆಸರೆ ತಾಣವನ್ನು ಕಾರಿಗನೂರು ಕಸ ವಿಲೇವಾರಿ ಘಟಕದ ಸಮೀಪ ನಿರ್ಮಿಸಲಾಗುತ್ತಿದೆ. ನೀರು ಸರಬರಾಜು ಕಾಮಗಾರಿಗಳಿಗೆ ₹3.70 ಕೋಟಿ, ಘನತ್ಯಾಜ್ಯ ವಸ್ತು ನಿರ್ವಹಣೆಗೆ ₹3.70 ಕೋಟಿ, ಕೊಳೆಗೇರಿ ಅಭಿವೃದ್ಧಿ, ರಸ್ತೆ, ಚರಂಡಿ, ಸ್ಮಶಾನ ಕಾಮಗಾರಿಗಳಿಗೆ ₹4.96 ಕೋಟಿ ಸಹಿತ ₹12.36 ಕೋಟಿ ಕ್ರಿಯಾಯೋಜನೆ ತಯಾರಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ರೂಪೇಶ್ ಕುಮಾರ್ ತಿಳಿಸಿದರು.

ಮದಕರಿ ನಾಯಕ ವೃತ್ತ–ಸಿಡಿದೆದ್ದ ಸದಸ್ಯರು

ಅಂಬೇಡ್ಕರ್ ವೃತ್ತದಲ್ಲಿ ಹೈಡ್ರಾಲಿಕ್ ಲಿಫ್ಟ್ ಅಳವಡಿಕೆಗೆ ₹18 ಲಕ್ಷ ನೀಡಿದ್ದನ್ನು ಹಾಗೂ ಮದಕರಿ ನಾಯಕ ವೃತ್ತ ಇತರ ವೃತ್ತಗಳ ದುರಸ್ತಿಗಾಗಿ ಕೇವಲ ₹8 ಲಕ್ಷ ಮೀಸಲಿಟ್ಟಿದ್ದನ್ನು ಸದಸ್ಯ ಹನುಮಂತಪ್ಪ ಬುಜ್ಜಿ ಪ್ರಶ್ನಿಸಿದರು. ಇಂತಹ ತಾರತಮ್ಯ ಸಲ್ಲದು. ಎರಡು ವರ್ಷಗಳ ಹಿಂದೆಯೇ ಮದಕರಿ ನಾಯಕ ವೃತ್ತ ಅಭಿವೃದ್ಧಿಗೆ ₹44 ಲಕ್ಷದ ಅಂದಾಜು ಸಿದ್ಧಪಡಿಸಿ ನಗರಸಭೆಯ ಒಪ್ಪಿಗೆ ಪಡೆಯಲಾಗಿತ್ತು. ಕಳೆದ ವರ್ಷವೇ ಕ್ರಿಯಾಯೋಜನೆಗೆ ಅನುಮತಿ ದೊರೆತಿದೆ. ಆದರೆ ಬಜೆಟ್ನಲ್ಲಿ ಅದಕ್ಕೆ ಏಕೆ ಹಣ ಇಟ್ಟಿಲ್ಲ ಎಂದು ಪ್ರಶ್ನಿಸಿದರು. ರಾಘವೇಂದ್ರ ತಾರಿಹಳ್ಳಿ ಜಂಬುನಾಥ ಅವರೂ ದನಿಗೂಡಿಸಿದರು. ಕೊನೆಗೆ ರಸ್ತೆ ದುರಸ್ತಿಗೆ ಮೀಸಲಿಟ್ಟ ಅನುದಾನದಲ್ಲೇ ₹ 44 ಲಕ್ಷವನ್ನು ಇದಕ್ಕೆ ತೆಗೆದಿರಿಸಲು ಅಧ್ಯಕ್ಷ ರೂಪೇಶ್ ಕುಮಾರ್ ಸಮ್ಮತಿಸಿದರು. ಎಲ್.ಎಸ್.ಆನಂದ್ ಅವರು ಬಳಿಕ ಪರೋಕ್ಷವಾಗಿ ಇದೇ ವಿಷಯ ಕೈಗೆತ್ತಿಕೊಂಡು ಇತರ ವೃತ್ತಗಳ ಅಭಿವೃದ್ಧಿಗೆ ಕೇವಲ 8 ಲಕ್ಷ ಸಾಕೇ ಎಂದು ಪ್ರಶ್ನಿಸಿದರು. ಅವರ ಒತ್ತಡಕ್ಕೂ ಮಣಿದ ಅಧ್ಯಕ್ಷರು ಉಳಿತಾಯದಲ್ಲೇ ₹7 ಲಕ್ಷವನ್ನು ಅದಕ್ಕೆ ಸೇರಿಸಿ ಒಟ್ಟು ₹15 ಲಕ್ಷ ಹಣ ಮೀಸಲಿಡಲು ಸಮ್ಮತಿಸಿದರು.

ಹಿಂದಿನ ವರ್ಷದ ವರದಿ ಪುನರಾವರ್ತನೆ

ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಗೇಲ್ ಇಂಡಿಯಾ ಸಹಯೋಗದಲ್ಲಿ ₹35 ಕೋಟಿ ವೆಚ್ಚದಲ್ಲಿ ಕಾಂಪೋಸ್ಟ್ ನ್ಯಾಚುರಲ್ ಗ್ಯಾಸ್ ತಯಾರಿಕೆ ಘಟಕ ನಿರ್ಮಾಣ ಕೈಗೊಳ್ಳಲಾಗುವುದು. ನಗರಸಭೆ ಸೇವೆಗಳನ್ನು ಕರ್ನಾಟಕ ವನ್ ಸೆಂಟರ್ಗೆ ಜೋಡಿಸಲಾಗುವುದು ಹಾಗೂ ಪೌರ ಕಾರ್ಮಿಕರಿಗೆ 240 ಮನೆಗಳನ್ನು ಕಟ್ಟಿಸಿಕೊಡಲಾಗುವುದು ಎಂದು ಕಳೆದ ವರ್ಷದ ಬಜೆಟ್ನಲ್ಲಿ ತಿಳಿಸಲಾಗಿತ್ತು. ಆದರೆ ಅದು ಈಡೇರಲೇ ಇಲ್ಲ. ಹೀಗಾಗಿ ಈ ವರ್ಷ ಮತ್ತೆ ಅದನ್ನು ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.