ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಸ್ವಯಂ ಗಣತಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಕಳೆದ ಒಂಬತ್ತು ದಿನಗಳಲ್ಲಿ ಜಿಲ್ಲೆಯ 2,88,406 ಮನೆಗಳ ಪೈಕಿ 12,209 ಮನೆಗಳ ಗಣತಿಯಷ್ಟೇ ಪೂರ್ಣಗೊಂಡಿದೆ.

ಸ್ವಯಂ ಗಣತಿಯನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಡಿಸಿ ಇ.ಬಾಲಕೃಷ್ಣಪ್ಪ, ಎಸ್ಪಿ ಎಸ್.ಜಾಹ್ನವಿ ಸಹಿತ ಇಡೀ ಜಿಲ್ಲಾಡಳಿತ ಬಹಳ ಗಂಭೀರವಾಗಿ ಪರಿಗಣಿಸಿದ್ದು, ಗುಂಪು ಸೇರುವ ಪ್ರತಿಯೊಂದು ಕಡೆಗಳಲ್ಲೂ ಮೊಬೈಲ್ಗಳಲ್ಲಿ ಸ್ವಯಂ ಗಣತಿ ಮಾಡಿಸುವ ಉತ್ಸಾಹದಲ್ಲಿದ್ದಾರೆ. ತಮ್ಮ ಇಲಾಖೆಗಳಷ್ಟೇ ಅಲ್ಲದೆ, ಇತರ ಸಭೆ, ಸಮಾರಂಭಗಳಲ್ಲಿ ಸಹ 10ರಿಂದ 15 ನಿಮಿಷ ಸ್ವಯಂ ಗಣತಿ ಕಾರ್ಯಕ್ಕಾಗಿ ಬಿಡುವು ಮಾಡಿಕೊಂಡು ಎಲ್ಲರ ಬಳಿಯಲ್ಲೂ ಮಾಡಿಸುತ್ತಿದ್ದಾರೆ.

‘ಸ್ವಯಂ ಗಣತಿ ಎಂಬುದು ಅತ್ಯಂತ ಗೋಪ್ಯವಾಗಿ ನಡೆಯುವ ಗಣತಿ, ಈ ಮಾಹಿತಿ ಯಾರಿಗೂ ಸೋರಿಕೆ ಆಗುವುದಿಲ್ಲ, ಮುಂದೆ ಮನೆ ಮನೆಗೆ ಗಣತಿಗೆ ಬರುವವರಿಗೆ ಬಹಳಷ್ಟು ಉಪಕಾರವಾಗುತ್ತದೆ’ ಎಂದು ಜಿಲ್ಲಾಧಿಕಾರಿ ಕವಿತಾ ತಿಳಿಸಿದ್ದಾರೆ.

‘ಕೇವಲ 10ರಿಂದ 15 ನಿಮಿಷಗಳಲ್ಲಿ ಸ್ವಯಂ ಗಣತಿ ಮುಗಿಯುತ್ತದೆ. ಕೊನೆಗೆ ಸೃಷ್ಟಿಯಾಗುವ ಎಸ್ಇ ಐಡಿಯನ್ನು ಗಣತಿಗೆ ಬರುವ ಸಿಬ್ಬಂದಿಗೆ ತೋರಿಸಿದರೆ ಅವರ ಬಹಳಷ್ಟು ಕೆಲಸ ಉಳಿಯುತ್ತದೆ. ಏ.16ರಿಂದ ಮೇ 15ರವರೆಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಮನೆಗಣತಿ ನಡೆಸಲಿದ್ದಾರೆ’ ಎಂದು ಎಡಿಸಿ ಇ.ಬಾಲಕೃಷ್ಣಪ್ಪ ತಿಳಿಸಿದರು.

ಒಟಿಪಿ ಬಗ್ಗೆ ಆತಂಕ ಬೇಡ: ಇಲ್ಲಿ ಮೊಬೈಲ್ಗೆ ಬರುವ ಒಟಿಪಿ ಬಗ್ಗೆ ಯಾರೂ ಆತಂಕಪಡುವ ಅಗತ್ಯ ಇಲ್ಲ. ಎಲ್ಲಾ ಮಾಹಿತಿಯೂ ಸುರಕ್ಷಿತವಾಗಿಯೇ ಇರುತ್ತದೆ ಎಂದು ಅವರು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-25-1765512428

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.