ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ರಸ್ತೆಗೆ ಸಂಗನಬಸವ ಸ್ವಾಮೀಜಿ ಹೆಸರು ನಾಮಕರಣ

Last Updated 21 ನವೆಂಬರ್ 2022, 10:07 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ನಗರದ ವಿಜಯನಗರ ಕಾಲೇಜಿನಿಂದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಕೊಟ್ಟೂರು ಸಂಸ್ಥಾನ ಮಠದ ಲಿಂಗೈಕ್ಯ ಸಂಗನಬಸವ ಸ್ವಾಮೀಜಿ ಅವರ ಹೆಸರು ಸೋಮವಾರ ನಾಮಕರಣ ಮಾಡಲಾಯಿತು.

ವಿಜಯನಗರ ಕಾಲೇಜು ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೊಟ್ಟೂರು ಸಂಸ್ಥಾನ ಮಠದ ನೂತನ ಪೀಠಾಧಿಪತಿ ಬಸವಲಿಂಗ ಸ್ವಾಮೀಜಿ ಅವರು ನಾಮಫಲಕ ಅನಾವರಣಗೊಳಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹಾಗೂ ನಗರಸಭೆಯ ಎಲ್ಲ ಸದಸ್ಯರಿಂದ ರಸ್ತೆಗೆ ಸಂಗನಬಸವ ಸ್ವಾಮೀಜಿ ಅವರ ಹೆಸರಿಡಲು ಸಾಧ್ಯವಾಗಿದೆ. ಸಂಗನಬಸವ ಸ್ವಾಮೀಜಿ ಅವರ ಮೊದಲ ಪುಣ್ಯಸ್ಮರಣೆಯ ದಿನವೇ ಈ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ ಎಂದು ಹೇಳಿದರು.

ಸಂಗನಬಸವ ಸ್ವಾಮೀಜಿ ಅವರು ಬದುಕಿನುದ್ದಕ್ಕೂ ಶಿಕ್ಷಣ, ಅನ್ನ ದಾಸೋಹ, ಭಾವೈಕ್ಯತೆ ಕುರಿತು ಕೆಲಸ ಮಾಡಿದರು. ಸೌಹಾರ್ತತೆ ಪ್ರತಿವರ್ಷ ಮಠದಿಂದ ಭಾವೈಕ್ಯತಾ ರಥೋತ್ಸವ ಆರಂಭಿಸಿದರು. ಅಂಥಹ ಮಹನೀಯರ ಹೆಸರು ರಸ್ತೆಗೆ ಇಟ್ಟಿರುವುದು ಶ್ಲಾಘನಾರ್ಹ ಕೆಲಸ ಎಂದರು.

ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಎಲ್‌.ಎಸ್. ಆನಂದ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಸದಸ್ಯ ಮಂಜುನಾಥ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಶರಣು ಸ್ವಾಮಿ, ಪ್ರಧಾನ ಕಾರ್ಯದರ್ಶಿ ರವಿಶಂಕರ್‌, ಮಧುರಚೆನ್ನಶಾಸ್ತ್ರಿ, ಸಂದೀಪ್‌ ಸಿಂಗ್‌, ಸಾಲಿ ಸಿದ್ದಯ್ಯ ಸ್ವಾಮಿ, ಬಿ.ಎಂ. ಸೋಮಶೇಖರ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT