ಹೊಸಪೇಟೆ (ವಿಜಯನಗರ): ವಿಜಯನಗರ ಸಾಮ್ರಾಜ್ಯದ ಕಾಲದಿಂದಲೇ ಸಾವಿರಾರು ರೈತರ ಜೀವನಾಡಿ ಆಗಿರುವ ಹಂಪಿ ಭಾಗದಲ್ಲಿ ಹರಿಯುವ ತುರ್ತಾ ಕಾಲುವೆಯ ಆಧುನೀಕರಣ ಕೆಲಸ ಸುಮಾರು ಐದು ಕಿ.ಮೀ.ವ್ಯಾಪ್ತಿಯಲ್ಲಿ ನಡೆಯದೆ ಇರುವುದರಿಂದ ಕೊನೆಯ ಭಾಗದ ರೈತರು ನೀರು ಸಿಗದೆ ತೀವ್ರವಾಗಿ ಪರಿತಪಿಸುತ್ತಿದ್ದಾರೆ.

ಕಾಲುವೆಯ ಆರಂಭದಲ್ಲಿ ಮೂರು ಕಿ.ಮೀ.ನಷ್ಟು ದೂರಕ್ಕೆ ಆಧುನೀಕರಣ ಕಾಮಗಾರಿ ನಡೆದಿದೆ. ಬಳಿಕ ಎಂಟು ಕಿ.ಮೀ.ವರೆಗೆ (ಸುಮಾರು ಐದು ಕಿ.ಮೀ.ದೂರ) ಯಾವುದೇ ರೀತಿಯಲ್ಲಿ ಆಧುನೀಕರಣ ಕಾಮಗಾರಿ ನಡೆದಿಲ್ಲ. ಈ ಭಾಗದಲ್ಲಿ ಕಾಲುವೆಯಲ್ಲಿ ಗಿಡಗಂಟಿ ಬೆಳೆದಿದೆ, ನೀರು ಪೋಲಾಗಿ ಹೋಗುತ್ತಿದೆ. ಇದರಿಂದಾಗಿ ಮುಂದೆ ಐದು ಕಿ.ಮೀ.ಸರಾಗವಾಗಿ ಹರಿಯಬೇಕಾದ ನೀರು ಹರಿಯದೆ ಬಾಳೆ ಸಾವಿರಾರು ಎಕರೆಯಲ್ಲಿ ಬೆಳೆದ ಬಾಳೆ, ಕಬ್ಬು ಬೆಳೆಗಳು ನೀರಿಲ್ಲದೆ ಬಾಡುತ್ತಿವೆ.

ಇದು ಎರಡು ಇಲಾಖೆಗಳ ನಡುವಿನ ತಿಕ್ಕಾಟದ ಫಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದ್ದು, ರಾಜ್ಯ ಸರ್ಕಾರ ತಕ್ಷಣ ಸ್ಪಂದಿಸಿ ರಾಜ್ಯ ಪುರಾತತ್ವ ಇಲಾಖೆಗೆ ನಿಗದಿತ ಮೊತ್ತವನ್ನು ಪಾವತಿಸಿದರೆ ಮಾತ್ರ ಕಾಮಗಾರಿಗೆ ಚಾಲನೆ ಸಿಗುತ್ತದೆ ಎಂದು ರೈತರು ಹೇಳುತ್ತಿದ್ದಾರೆ.

ನಾವು ಸಿದ್ಧರಿದ್ದೆವು: ಕಾಲುವೆಯ ಆರಂಭದಲ್ಲಿ 3.3 ಕಿ.ಮೀ.ವರೆಗೆ ಹಾಗೂ 8.7 ಕಿ.ಮೀನಿಂದ ಕೊನೆಭಾಗದ 18 ಕಿ.ಮೀ.ವರೆಗೆ ಆಧುನೀಕರಣ ಕಾಮಗಾರಿಯನ್ನು ನಾವು ಮಾಡಿ ಮುಗಿಸಿ ಒಂದು ವರ್ಷವಾಗಿದೆ. ನಡುವಿನ 5.4 ಕಿ.ಮೀ.ನಷ್ಟು ದೂರದ ಕಾಲುವೆಯನ್ನು ನಾವು ಆಧುನೀಕರಣ ಮಾಡುವುದಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಆಕ್ಷೇಪಿಸಿತು. ಕೊನೆಗೆ ರಾಜ್ಯ ಪುರಾತತ್ವ ಇಲಾಖೆ ಡಿಪಿಆರ್ ನೀಡಿ, ₹15 ಕೋಟಿಯ ಪ್ರಸ್ತಾವ ಸಲ್ಲಿಸಿದ್ದು, ಅದನ್ನು ರಾಜ್ಯ ಸರ್ಕಾರಿಂದ ದೊರಕಿಸಿಕೊಟ್ಟರೆ ತಾನೇ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ, ಆದರೆ ಆ ಮೊತ್ತ ಇನ್ನೂ ಬಿಡುಗಡೆ ಆಗಿಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಬಸಪ್ಪ ಜಾನಕರ್ ತಿಳಿಸಿದರು.

ಅನುದಾನ ನೀಡಿದ ತಕ್ಷಣ ಕೆಲಸ: ‘ನೀವಾವರಿ ಇಲಾಖೆ ನಮಗೆ ದುಡ್ಜು ದೊರಕಿಸಿಕೊಟ್ಟ ತಕ್ಷಣ ಕಾಲುವೆಯ ಆಧುನೀಕರಣ ಕೆಲಸವನ್ನು ನಾವು ಮಾಡಿಕೊಡಲಿದ್ದೇವೆ. ಅನುದಾನ ಬಿಡುಗಡೆಗೆ ಏಕೆ ವಿಳಂಬ ಆಗುತ್ತದೆಯೋ ಗೊತ್ತಿಲ್ಲ’ ಎಂದು ರಾಜ್ಯ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪನಿರ್ದೇಶಕ ಆರ್. ಶೇಜೇಶ್ವರ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-25-1064082107

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.