ಹೊಸಪೇಟೆ (ವಿಜಯನಗರ): ಬಿ-ಖಾತಾ ಆಸ್ತಿ ಮಾಲೀಕರಿಗೆ ಹೆಚ್ಚು ಸುರಕ್ಷಿತ, ಕಾನೂನು ಬದ್ದ ಎ-ಖಾತಾ ನೀಡಬೇಕು ಹಾಗೂ ಎರಡನೇ ಸಲ ಫಾರಂ-3 ನವೀಕರಣಕ್ಕೆ ಮತ್ತೊಮ್ಮೆ ಹಿಂದಿನ ದಾಖಲೆಗಳನ್ನು ಕೇಳಬಾರದು ಎಂದು ಆಗ್ರಹಿಸಿ ಈಚೆಗೆ ಇಲ್ಲಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ವಿಜಯನಗರ ಜಿಲ್ಲಾ ಪ್ರಜಾ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಡಿ.ಸಿ ಕಚೇರಿಗೆ ತೆರಳಿ ಡಿ.ಸಿ ಕವಿತಾ ಎಸ್.ಮನ್ನಿಕೇರಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಈ ಮನವಿ ಕಳುಹಿಸಿಕೊಟ್ಟರು.

ವೇದಿಕೆಯ ಪ್ರಧಾನ ಕಾರ್ಯದರ್ಶಿ ವೈ.ಯಮುನೇಶ್ ಮಾತನಾಡಿ, ಬಿ-ಖಾತಾ ಆಸ್ತಿಯ ಮಾಲೀಕರು ತಮ್ಮ ಮಕ್ಕಳ ಮದುವೆ, ಶಿಕ್ಷಣ, ತುರ್ತು ವೈಧ್ಯಕೀಯ ಚಿಕಿತ್ಸೆ ಪಡೆಯಲು, ಹಾಗೂ ಸರ್ಕಾರದಿಂದ ಸೌಲಭ್ಯ ಪಡೆಯಲು ಕೆಲವು ಕಾನೂನಾತ್ಮಕ ಸಮಸ್ಯೆಗಳು ಎದುರಾಗುತ್ತಿವೆ. ಸರ್ಕಾರ ಈ ಸಮಸ್ಯೆಯನ್ನು ತೀವ್ರವಾಗಿ ಪರಿಗಣಿಸಿ 6 ತಿಂಗಳ ಹಿಂದೆಯೇ ಬಿ-ಖಾತಾ ಮಾಲೀಕರಿಗೆ ಎ-ಖಾತಾ ದಾಖಲೆ ನೀಡಲು ತೀರ್ಮಾನಿಸಿದ್ದರೂ, ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಎಂದರು.

ವೇದಿಕೆಯ ಅಧ್ಯಕ್ಷ ಯು.ಆಂಜನೇಯಲು ಮಾತನಾಡಿ, ಆಸ್ತಿ ನಿವೇಶನಗಳ ಮಾರಾಟ ಮತ್ತು ಕ್ರಯ ವ್ಯವಹಾರ ನಡೆಸುವಾಗ ಫಾರಂ-3 ಅತ್ಯಂತ ಅವಶ್ಯವಾಗಿದೆ. ಆದರೆ ಫಾರಂ-3 ನವೀಕರಣ ದಾಖಲೆ ನೀಡಿಕೆಗೆ ಹೊಸಪೇಟೆ ನಗರ ಸಭೆಯಲ್ಲಿ ಅನವಶ್ಯಕವಾಗಿ ಈ ಹಿಂದೆ ನೀಡಿದ ದಾಖಲೆ ನೀಡುವುದನ್ನು ಕಡ್ಡಾಯಪಡಿಸಿರುವುದು ಸರಿಯಲ್ಲ. ತೀರಾ ಅಗತ್ಯವಾಗಿರುವ ಚಾಲ್ತಿ ವರ್ಷದ ತೆರಿಗೆ ಪಾವತಿ ರಶೀದಿ ಮತ್ತು ಹಿಂದೆ ವಿತರಿಸಿದ ಹಳೆಯ ಫಾರಂ-3 ಪ್ರತಿ ಪಡೆದು ನವೀಕರಣ ದಾಖಲೆ ವಿತರಿಸಬೇಕು ಎಂದರು.

ವೇದಿಕೆಯ ಪದಾಧಿಕಾರಿಗಳಾದ ಉಮಾಮಹೇಶ್ವರ್, ಎ.ಪಂಪಣ್ಣ, ನಾಗಲಿಂಗಪ್ಪ, ಶಂಕ್ರಪ್ಪ, ರಾಮಲಿ, ಕೆ.ಎಸ್.ಹಳ್ಳೂರ್, ಕೆ.ಎಂ.ಕೊಟ್ರಯ್ಯ, ಐಲಿಸಿದ್ದಣ್ಣ, ವಿರೂಪಾಕ್ಷಪ್ಪ, ಎಸ್.ಎಂ.ಬಾಷ, ನಜೀರ್ಅಹ್ಮದ್, ಈ.ಪ್ರಶಾಂತ್, ಎಸ್.ತಿಪ್ಪೇಸ್ವಾಮಿ, ನೀಲಕಂಠಪ್ಪ, ಲಕ್ಷ್ಮಣ, ಎಂ.ರಾಜಶೇಖರ್ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-25-310913474

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.