ಹೂವಿನಹಡಗಲಿ: ‘ಯಾವುದೇ ಅಸ್ತ್ರ, ಶಸ್ತ್ರಗಳಿಲ್ಲದೇ ವೈಚಾರಿಕ ಸಂದೇಶಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿರುವ ಬಸವಣ್ಣನವರು ಜಗದ ಜ್ಯೋತಿಯಾಗಿ ಬೆಳಗಿದ್ದಾರೆ’ ಎಂದು ಶಾಸಕ ಎಲ್.ಕೃಷ್ಣನಾಯ್ಕ ಹೇಳಿದರು.

ಪಟ್ಟಣದ ಹಿರೇಮಲ್ಲನಕೆರೆ ಮಠದಲ್ಲಿ ಸೋಮವಾರ ತಾಲ್ಲೂಕು ಆಡಳಿತ, ವೀರಶೈವ ಲಿಂಗಾಯತ ಮಹಾ ಸಭಾ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತಿ ಉದ್ಘಾಟಿಸಿ ಅವರು ಮಾತನಾಡದರು.

‘ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನುಭವ ಮಂಟಪ ಪ್ರೇರಣೆಯಾಗಿದೆ. ಮಾನವ ಕುಲ ಒಂದೇ ಎಂದು ಸಾರಿರುವ ಬಸವಣ್ಣ ಮನುಷ್ಯರ ಕಣ್ಣು ತೆರೆಸಿದ್ದಾರೆ. ಶರಣರ ವಿಚಾರಧಾರೆ ಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಅವರಿಗೆ ನೈಜ ಗೌರವ ಸಲ್ಲಿಸಬೇಕು’ ಎಂದು ತಿಳಿಸಿದರು. ತಹಶೀಲ್ದಾರ್ ಕೆ.ಎಂ.ಗುರು ಬಸವರಾಜ ಮಾತನಾಡಿ, ‘ಬಸವಣ್ಣ ಬರೀ ವೀರಶೈವ ಲಿಂಗಾಯತ ರಿಗೆ ಸೀಮಿತವಾಗದೇ ಇಡೀ ಮನುಕುಲಕ್ಕೆ ಆದರ್ಶವಾಗಿದ್ದಾರೆ ಎಂದರು.

ಹಿಟ್ನಾಳ ಸರ್ಕಾರಿ ಪದವಿ ಕಾಲೇಜು ಪ್ರಾಚಾರ್ಯ ಟಿ.ಎಚ್.ಬಸವರಾಜ ಉಪ ನ್ಯಾಸ ನೀಡಿದರು. ವೀರಶೈವ ಮಹಾಸಭಾ ನಗರ ಘಟಕದ ಅಧ್ಯಕ್ಷ ಎಂ.ಉಮೇಶ ಮಾತನಾಡಿದರು.

ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಹಿರೇಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ರಾಮ ದೇವರ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ ಸಾನ್ನಿಧ್ಯ ವಹಿಸಿದ್ದರು. ಶೇಖರಯ್ಯ ಶಾಸ್ತ್ರಿ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಯಲ್ಲಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ, ಎತ್ತಿನ ಮೆರವಣಿಗೆ ಜರುಗಿತು. ಕೋಡಿಹಳ್ಳಿ ಮುದುಕಪ್ಪ, ವಿ.ಸಿ.ಪಾಟೀಲ್, ಹಕ್ಕಂಡಿ ಶಿವನಾಗಪ್ಪ, ಬಿ.ಬಿ. ಅಸುಂಡಿ, ಬಿ.ಸಿದ್ದೇಶ ಇದ್ದರು.

ಹಗರಿಬೊಮ್ಮನಹಳ್ಳಿ: 12ನೇ ಶತಮಾ ನದಲ್ಲಿ ಜಗಜ್ಯೋತಿ ಬಸವೇಶ್ವರರ ನೇತೃತ್ವ ದಲ್ಲಿ ಶರಣರು ಸ್ಥಾಪಿಸಿದ್ದ ಅನುಭವ ಮಂಟಪ ಇಂದಿನ ಸಂಸತ್ತು ನಿರ್ಮಿಸುವುದಕ್ಕೆ ಪ್ರೇರಣೆಯಾಗಿದೆ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.

ಪಟ್ಟಣದಲ್ಲಿ ಬಸವೇಶ್ವರ ವೃತ್ತದಲ್ಲಿ ನವೀಕರಣಗೊಂಡ ಅಶ್ವಾರೂಢ ಬಸವೇಶ್ವರರ ಪುತ್ಥಳಿ ಉದ್ಘಾಟಿಸಿ ಸೋಮವಾರ ಮಾತನಾಡಿದರು.

ಸಮ ಸಮಾಜದ ಆಶಯಗಳನ್ನು ಹೊಂದಿದ್ದ ಬಸವಣ್ಣನವರ ಚಿಂತನೆಗಳು ವಿಶ್ವಕ್ಕೆ ಮಾದರಿಯಾಗಿದೆ, ಅನುಭವ ಮಂಟಪದ ಮಾದರಿಯಲ್ಲಿಯೇ ಸಂವಿ ಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ, ಅದು ಎಲ್ಲ ಸ್ತರದ ಜನರಿಗೆ ನ್ಯಾಯ ಒದಗಿಸುವ ಮೂಲಕ ವಿಶ್ವದಯಲ್ಲಿಯೇ ಮೆರಗು ತಂದಿದೆ ಎಂದರು. ಶಿಥಿಲಗೊಂಡಿದ್ದ ಬಸವೇಶ್ವರ ವೃತ್ತವನ್ನು ನವೀಕರಣಗೊಳಿಸಲಾಗಿದೆ, ಕಾರಂಜಿ ಸೇರಿದಂತೆ ವಿಶೇಷ ವಾಗಿ ವಚನಗಳನ್ನು ಆಲಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಬಸವ ಸಮಿತಿಯ ಅಧ್ಯಕ್ಷ ಬಾದಾಮಿ ಮೃತ್ಯುಂಜಯ ಮಾತನಾಡಿದರು.

ನಂದಿಪುರದ ಮಹೇಶ್ವರ ಸ್ವಾಮೀಜಿ, ಮರಿಯಮ್ಮನಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯ, ಹಂಪಸಾಗರ ನವಲಿ ಹಿರೇಮಠದ ಅಭಿನವ ಶಿವಲಿಂಗರುದ್ರಮುನಿ ಸ್ವಾಮೀಜಿ, ಬಾಚಿಗೊಂಡನಹಳ್ಳಿಯ ತೋಂಟದಾರ್ಯ ಶಾಖಾ ಮಠದ ಶಿವಮಹಾಂತ ಸ್ವಾಮೀಜಿ, ಕಡಲಬಾಳಿನ ಗವಿಮಠದ ಮರಿಮಹಾಂತ ಸ್ವಾಮೀಜಿ, ಹಾಲಸಿದ್ದೇಶ್ವರ ಸ್ವಾಮೀಜಿ, ಮುಖಂಡರಾದ ವೈ.ಮಲ್ಲಿಕಾರ್ಜುನ, ಕೊಟ್ರೇಶ್ ಶೆಟ್ಟರ್, ಕಿನ್ನಾಳ್ ಸುಭಾಷ್, ಸತೀಶ್ ಪಾಟೀಲ್, ಮಂಜುನಾಥ ಗೌಡ, ಎಂ.ಬಸವರಾಜ ರೆಡ್ಡಿ, ಹನಸಿ ದೇವರಾಜ್, ಜಗದೀಶ್, ತಹಶೀಲ್ದಾರ್ ಆರ್.ಕವಿತಾ, ತಾಲ್ಲೂಕು ಪಂಚಾಯ್ತಿ ಇಒ ಪಾಲಯ್ಯನಕೋಟೆ ವಿಶ್ವನಾಥ, ನರೇಗಾ ಸಹಾಯಕ ನಿರ್ದೇಶಕ ರಮೇರ್ಶ ಮಹಾಲಿಂಗಾಪುರ, ಇಟ್ಟಿಗಿ ಪ್ರಭಾಕರ, ಕೆ.ಎಂ.ಶಿವಶಂಕರ್, ಕೆ.ಶಾರದಾ ಮಂಜುನಾಥ, ಮಹಾಂತೇಶ್ ಇದ್ದರು.

ಇದಕ್ಕೂ ಮುನ್ನ ಪಟ್ಟಣದ ಈಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತ ದವರೆಗೂ ಸಾರೋಟದಲ್ಲಿ ಜಗಜ್ಯೋತಿ ಬಸವೇಶ್ವರರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು, ವಿವಿಧ ಕಲಾತಂಡಗಳು ಮೆರಗು ನೀಡಿದವು.

ಕೂಡ್ಲಿಗಿ: ಸಮಾನತೆಯ ಹರಿಕಾರರಾದ ಬಸವೇಶ್ವರರು ಎಂದಿಗೂ ನಮಗೆ ದಾರಿದೀಪವಾಗಿದ್ದು, ಅವರ ತತ್ವ ಆದರ್ಶಗಳು ನಮಗೆ ಪ್ರೇರಣೆಯಾಗಿವೆ ಎಂದು ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ತಿಳಿಸಿದರು.

ಇಲ್ಲಿನ ತಾಲ್ಲೂಕು ಆಡಳಿತ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭಾ ವತಿಯಿಂದ ಸೋಮವಾರ ಆಯೋಜಿ ಸಿದ್ದ ಬಸವೇಶ್ವರ ಜಯಂತ್ಯುತ್ಸವ, ವೀರಶೈವ ಸಮುದಾಯ ಭವನದ ಬೃಹತ್ ಫಲಕ ಅನಾವರಣಗೊಳಿಸಿ, ಕ್ಷೇತ್ರದಲ್ಲಿ ಸಮಾನ ಸೌಲಭ್ಯಗಳನ್ನು ಒದಗಿಸುವುದು ನನ್ನ ಧ್ಯೇಯವಾಗಿದೆ ಎಂದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ. ತಿಪ್ಪೇಸ್ವಾಮಿ ಮಾತನಾಡಿ, ವೀರಶೈವ ಸಮಾಜವು ಕೃಷಿಯನ್ನು ನಂಬಿ ಬದುಕಿದ್ದು, ಅವರಿಗೆ ಪೂರಕವಾಗಿ ಸರ್ಕಾರದ ಯೋಜನೆಗಳು, ಸಾಲ, ಸೌಲಭ್ಯಗಳು ಸಿಗಬೇಕಿದೆ. ಈಗಾ ಗಲೇ ಪಟ್ಟಣದ ಪಪ್ಪಿ ಲೇ ಔಟ್ನಲ್ಲಿ ವೀರಶೈವ ಸಮುದಾಯ ಭವನಕ್ಕೆ ಭೂಮಿ ಖರೀದಿಸಿದ್ದು, ಸಮುದಾಯ ಭವನಕ್ಕೆ ಶಾಸಕರ ಸಹಕಾರ ಅಗತ್ಯವಿದೆ ಎಂದರು.

ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯ ಸ್ವಾಮೀಜಿ, ತಹಶೀಲ್ದಾರ್ ವಿ.ಕೆ. ನೇತ್ರಾವತಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಸ್. ವೆಂಕಟೇಶ್, ಮುಖಂಡರಾದ ಎಂ. ಗುರುಸಿದ್ದನ ಗೌಡ, ಗುಳಿಗಿ ವೀರೇಂದ್ರ ಕುಮಾರ್, ಟಿ.ಜಿ. ಮಲ್ಲಿಕಾರ್ಜುನ ಗೌಡ, ಮಹಾಸಭಾ ತಾಲ್ಲೂಕು ಅಧ್ಯಕ್ಷ ಸುನೀಲ್ ಪಾಟೀಲ್, ಜಿ.ಎಸ್. ಗಿರೀಶ್, ಮರುಳಸಿದ್ದಪ್ಪ, ರೇಖಾ ಮಲ್ಲಿಕಾರ್ಜುನ, ಲಕ್ಷ್ಮಿದೇವಿ, ಕೆ.ಎಸ್. ವೀರೇಶ್, ಗುಣಸಾಗರ ಕೃಷ್ಣಪ್ಪ, ನಂದಿ ಬಸವರಾಜ ಹಾಜರಿದ್ದರು. ಕಾರ್ಯಕ್ರಮ ಬಳಿಕ ಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಶಾಸಕರು 50ಕ್ಕೂ ಹೆಚ್ಚು ಜೋಡೆತ್ತುಗಳ ಮೆರವಣಿಗೆಗೆ ಚಾಲನೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-25-1762600069

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.