ಹೂವಿನಹಡಗಲಿ: ತಾಲ್ಲೂಕಿನಲ್ಲಿ ಪ್ರತಿ ಮುಂಗಾರು ಋತುವಿನಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ದಂಧೆ ನಡೆಯುತ್ತಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ತಾಲ್ಲೂಕು ರೈತ ಸಂಘ ಆಗ್ರಹಿಸಿದೆ.

ಸಂಘದ ಪದಾಧಿಕಾರಿಗಳು ಶುಕ್ರವಾರ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಕೆಲವರು ಬೇರೆಡೆಯಿಂದ ಕಳಪೆ ಬೀಜ ತಂದು ಇಲ್ಲಿನ ರೈತರಿಗೆ ಮಾರಾಟ ಮಾಡುತ್ತಾರೆ. ಬೀಜ ಮೊಳಕೆ ಒಡೆಯದೇ, ಉತ್ತಮ ಬೆಳೆಯೂ ಬಾರದೇ ರೈತರು ಮೋಸ ಹೋಗುತ್ತಾರೆ. ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಿ, ಕಳಪೆ ಬೀಜ ಮಾರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಮುಂಗಾರು ಬಿತ್ತನೆಗೆ ಅಗತ್ಯವಿರುವ ಜೋಳ, ಮೆಕ್ಕೆಜೋಳ ಸೇರಿದಂತೆ ಎಲ್ಲ ನಮೂನೆಯ ಬೀಜಗಳನ್ನು ಮೇ 20ರಿಂದ ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಣೆ ಮಾಡಬೇಕು. ಬಿತ್ತನೆ ಬೀಜ ಕೊರತೆಯಾಗದಂತೆ ಸಮರ್ಪಕ ದಸ್ತಾನು ಮಾಡಬೇಕು. ಕೃಷಿ ಪರಿಕರ, ರಸಗೊಬ್ಬರ, ಕೀಟನಾಶಕ, 300 ಜಿಎಸ್ಎಂ ತಾಡಪಾಲುಗಳನ್ನು ರೈತರಿಗೆ ಸಮರ್ಪಕವಾಗಿ ವಿತರಿಸಬೇಕು ಎಂದು ಆಗ್ರಹಿಸಿದ್ದಾರೆ.

ರೈತ ಸಂಘದ ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಎಚ್.ಎಂ.ವಿಜಯಲಕ್ಷ್ಮಿ, ಪದಾಧಿಕಾರಿಗಳಾದ ಕೆ.ಮಂಜುನಾಥ, ದುರುಗಪ್ಪ, ಗನಿಸಾಬ್, ಪಕ್ಕೀರಪ್ಪ ಬಾವಿಹಳ್ಳಿ, ವಿ.ಬಿ.ಚನ್ನಬಸಪ್ಪ, ಡಿ.ಗಿರೀಶ, ಎಂ. ಶಿವರಾಜ, ಸುರೇಶ, ವೆಂಕಟೇಶನಾಯ್ಕ, ಮುಜುಬು ರಹಿಮಾನ್, ದರಗ್ಯಾನಾಯ್ಕ, ಚಂದ್ರನಾಯ್ಕ, ಗುರುಬಸವರಾಜ, ಕೊಟ್ರೇಶನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-25-1062398295

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.