ಹೂವಿನಹಡಗಲಿ: ತಾಲ್ಲೂಕಿನ ಹೊಳಗುಂದಿ ಗ್ರಾಮದ ಕಣವೊಂದರಲ್ಲಿ ಕಟ್ಟಿದ್ದ ಜೋಡಿ ಎತ್ತುಗಳನ್ನು ಶನಿವಾರ ತಡರಾತ್ರಿ ಕಳವು ಮಾಡಿದ ಘಟನೆ ಸಂಭವಿಸಿದೆ.

‘ಗ್ರಾಮದ ರೈತ ಕೆ.ಎಂ. ಶಿವುಕುಮಾರ ಅವರಿಗೆ ಸೇರಿದ್ದ ₹2 ಲಕ್ಷ ಮೌಲ್ಯದ ಎತ್ತುಗಳನ್ನು ಕಳವು ಮಾಡಲಾಗಿದೆ. ಎತ್ತುಗಳ ಕೊರಳಿಗೆ ಕಟ್ಟಿದ್ದ ಗೆಜ್ಜೆ ಸರಗಳನ್ನು ಕತ್ತರಿಸಿ, ಬಿಚ್ಚಿಕೊಂಡು ಹೋಗಿದ್ದಾರೆ. ಕೆಲ ದಿನಗಳ ಹಿಂದೆ ಬೀರಬ್ಬಿ ಕ್ರಾಸ್ ಬಳಿ ಹಾಗೂ ಹೊನ್ನೂರು ಗ್ರಾಮದಲ್ಲಿ ಜೋಡಿ ಎತ್ತುಗಳು ಕಳವು ಆಗಿದ್ದವು. ಏ. 26ರಂದು ಹಗರನೂರು ಗ್ರಾಮದಲ್ಲಿ ಆಕಳು ಕಳವು ಮಾಡಿದ ಆರೋಪಿಯನ್ನು ಹಿರೇಹಡಗಲಿ ಪೊಲೀಸ್ ಸಿಬ್ಬಂದಿಗೆ ಒಪ್ಪಿಸಿದ್ದೆವು. ಆದರೆ ಪೊಲೀಸರು ಆತನ ವಿರುದ್ಧ ಕ್ರಮ ಜರುಗಿಸಲಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-25-1791234187

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.