ಹೂವಿನಹಡಗಲಿ: ತಾಲ್ಲೂಕಿನ ದಾಸನಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸುವುದು, ಭೂಮಾಪನ ಇಲಾಖೆಯವರು ಕೆಲ ವರ್ಷಗಳಿಂದ ಬಾಕಿ ಉಳಿಸಿರುವ ಭೂ ಸರ್ವೆ ಕಾರ್ಯಕ್ಕೆ ಒತ್ತಾಯಿಸಿ ಮೇ 4ರಂದು ಹೊಳಲು ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ರತ್ನಭಾರತ ರೈತ ಸಮಾಜದ ಅಧ್ಯಕ್ಷ ಕೋಡಬಾಳ ಚಂದ್ರಪ್ಪ ತಿಳಿಸಿದ್ದಾರೆ.

ದಾಸನಹಳ್ಳಿ ಕೆರೆ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು. ಕೆರೆ ತುಂಬಿಸುವ ಯೋಜನೆಗಾಗಿ ತೋಡಿರುವ ಪೈಪ್ಲೈನ್ನಿಂದ ರೈತರ ಹೊಲಗಳಲ್ಲಿ ಬಿದ್ದಿರುವ ಕಂದಕಗಳನ್ನು ಸಮತಟ್ಟು ಮಾಡಿಸಬೇಕು. ಬಾಕಿ ಇರುವ ಭೂ ಪರಿಹಾರವನ್ನು ತಕ್ಷಣ ನೀಡಬೇಕು. ಭೂ ಸರ್ವೇಗೆ ಅರ್ಜಿ ಸಲ್ಲಿಸಿ 2-3 ವರ್ಷಗಳಾದರೂ ಇನ್ನು ಪ್ರಕ್ರಿಯೆ ನಡೆಸಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಹೊಳಲು ಗ್ರಾಮದ ಸಿಂಹಾಸನ ಕಟ್ಟೆ ಬಳಿ ರೈತರೊಂದಿಗೆ ಸತ್ಯಾಗ್ರಹ ನಡೆಸಲಿದ್ದೇವೆ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-25-1307293374

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.