ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರತ್ನಭಾರತ ರೈತ ಸಮಾಜದ ಅಧ್ಯಕ್ಷ ಕೋಡಬಾಳ ಚಂದ್ರಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಂಗಳವಾರ ಅಧಿಕಾರಿ ಗಳು ಭೇಟಿ ನೀಡಿ ರೈತರ ಮನ ವೊಲಿಸಿದ್ದಾರೆ.

ದಾಸನಹಳ್ಳಿ ಕೆರೆ ಒತ್ತುವರಿ ತೆರವುಗೊಳಿಸಿ ಹದ್ದುಬಸ್ತ್ ಸರ್ವೆ ಮಾಡಿಸಬೇಕು. ಕೆರೆ ತುಂಬಿಸುವ ಯೋಜ ನೆಯ ಪೈಪ್ ಲೈನ್ ಹಾದು ಹೋಗಿರುವ ಜಮೀನುಗಳ ರೈತರಿಗೆ ಪರಿಹಾರ ನೀಡಬೇಕು. ಭೂ ಮಾಪನ ಇಲಾಖೆಯಲ್ಲಿ ವರ್ಷಗಳಿಂದ ಬಾಕಿ ಇರುವ ಭೂ ಸರ್ವೇ ಕಡತಗಳನ್ನು ತಕ್ಷಣ ವಿಲೇಗೊಳಿಸಬೇಕು ಎಂದು ಒತ್ತಾಯಿಸಿ ರೈತರು ಎರಡು ದಿನಗಳಿಂದ ಹೊಳಲು ಗ್ರಾಮದ ಸಿಂಹಾಸನ ಕಟ್ಟೆಯ ಮೇಲೆ ಧರಣಿ ಕುಳಿತಿದ್ದರು. ಸಿಪಿಐ ಮಲ್ಲಪ್ಪ ಹೂಗಾರ, ಭೂಮಾಪನ ಇಲಾಖೆಯ ಅಧಿಕಾರಿ ಕೊಟ್ರೇಶನಾಯ್ಕ, ಸಣ್ಣ ನೀರಾವರಿ ಇಲಾಖೆ ಎಂಜಿನಿಯರ್ ಕೊಟ್ರೇಶ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಅವರು ಸ್ಥಳಕ್ಕೆ ಭೇಟಿ ನೀಡಿ, ರೈತರ ಬೇಡಿಕೆಗಳನ್ನು ಹಂತ ಹಂತವಾಗಿ ಬಗೆಹರಿಸುವ ಭರವಸೆ ನೀಡಿದರು.

ಶನಿವಾರದೊಳಗೆ ದಾಸನಹಳ್ಳಿ ಕೆರೆ ಸರ್ವೆ ಮಾಡಿ ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ. ಕೆರೆ ತುಂಬಿಸುವ ಯೋಜನೆ ಪೈಲ್ ಲೈನ್ ಹಾದು ಹೋಗಿರುವ ಜಮೀನುಗಳಿಗೆ 2027ರ ಜನವರಿತಯಲ್ಲಿ ಪರಿಹಾರ ದೊರಕಿಸಿಕೊಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು. ಬಳಿಕ ರೈತರು ಧರಣಿ ಅಂತ್ಯಗೊಳಿಸಿದರು.

ರೈತ ಮುಖಂಡರಾದ ಮಂಜುನಾಥ ಹೊಟ್ಟಿಗೌಡ್ರ, ಕುರುವಪ್ಪ ಮತ್ತೂರು, ಗಿರಿಯಪ್ಪ ಮಲ್ಲಜ್ಜಿ, ತಾರಕೇಶ ಬುಳ್ಳಜ್ಜನವರ, ಎಚ್.ಡಿ ಜಗ್ಗಿನ, ಗುರುಲಿಂಗಪ್ಪ ಹಾವೇರಿ, ಸತೀಶ ಕೋಡಬಾಳ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-25-791188912

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.